Advertisement

ಬೆಂಗಳೂರಿಗೆ ಕಾದಿದೆ ಜಲ ಕೊರತೆ ಸ್ಥಿತಿ

01:09 AM Nov 03, 2020 | mahesh |

ಹೊಸದಿಲ್ಲಿ: ಬೆಂಗಳೂರಿಗರೇ ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸಿ…! ಮುಂದಿನ ದಿನಗಳಲ್ಲಿ ಉದ್ಯಾನ ನಗರಿಯಲ್ಲಿ ಜೀವ ಜಲಕ್ಕೆ ಭಾರೀ ಕೊರತೆ ಉಂಟಾಗಬಹುದು.

Advertisement

ವರ್ಲ್ಡ್ ವೈಡ್‌ ಫ‌ಂಡ್‌ ಫಾರ್‌ ನೇಚರ್‌ (ಡಬ್ಲ್ಯುಡಬ್ಲ್ಯುಎಫ್) ನಡೆಸಿರುವ ಅಧ್ಯಯನ ಪ್ರಕಾರ ಬೆಂಗಳೂರು ಸಹಿತ ದೇಶದ 30 ನಗರಗಳಲ್ಲಿ ನೀರಿನ ಕೊರತೆ ಉಂಟಾಗ ಲಿದೆ. ಪಟ್ಟಿಯಲ್ಲಿ ಬೆಂಗಳೂರಿಗೆ ಮೂವತ್ತನೇ ಸ್ಥಾನ.

ಕಲ್ಲಿಕೋಟೆ, ವಿಶಾಖ ಪಟ್ಟಣ, ಜೈಪುರ, ಇಂದೋರ್‌, ಅಮೃತಸರ, ಪುಣೆ, ಮುಂಬಯಿ ಜಗತ್ತಿನಲ್ಲಿ ನೀರಿನ ಭಾರೀ ಕೊರತೆ ಅನುಭವಿಸಲಿರುವ 100 ಪಟ್ಟಣ/ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಅಧ್ಯಯನದ ಬಗ್ಗೆ ಮಾಹಿತಿ ನೀಡಿದ ಡಬ್ಲ್ಯುಡಬ್ಲ್ಯುಎಫ್ ಇಂಡಿಯಾದ ಡಾ| ಸೀಜಲ್‌ ವೋರಾ, 2050ರ ಒಳಗಾಗಿ ದೇಶದಲ್ಲಿ ನಗರ ಮತ್ತು ಪಟ್ಟಣಗಳ ಜನಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಲಿದೆ. ನೀರಿನ ಬಳಕೆಯೂ ವೃದ್ಧಿಸಲಿದೆ. ಭಾರತ ದಲ್ಲಿಯೇ 35 ಕೋಟಿ ಜನರು ನೀರಿನ ಕೊರತೆ ಎದುರಿಸುವಂತಾಗಲಿದೆ ಎಂದಿದ್ದಾರೆ.

ಜಗತ್ತಿನಲ್ಲಿ ಎಲ್ಲಿ ಸಮಸ್ಯೆ?
ಚೀನ ರಾಜಧಾನಿ ಬೀಜಿಂಗ್‌, ಇಂಡೋನೇಶ್ಯಾದ ಜಕಾರ್ತಾ, ಟರ್ಕಿಯ ಇಸ್ತಾಂಬುಲ್‌, ಹಾಂಕಾಂಗ್‌, ಮೆಕ್ಕಾ ಮತ್ತು ರಿಯೋ ಡಿ ಜನೈರೋಗಳಲ್ಲಿ ಭಾರೀ ಪ್ರಮಾಣದಲ್ಲಿ ಜೀವ ಜಲದ ಕೊರತೆ ಉಂಟಾಗಲಿದೆ ಎಂದು ಅಧ್ಯಯನದಿಂದ ಗೊತ್ತಾಗಿದೆ.

Advertisement

ಪರಿಹಾರವೇನು?
ಈಗಾಗಲೇ ನೀರಿನ ಕೊರತೆ ಹಲವು ನಗರಗಳಲ್ಲಿ ಉಂಟಾಗಿದೆ. ಕೆಲವೆಡೆ ಅದನ್ನು ಪರಿಹರಿಸುವ ಕ್ರಮಗಳ ಚಿಂತನೆಯೂ ನಡೆದಿದೆ.

– ಜಲಮೂಲಗಳನ್ನು ಕಾಪಿಟ್ಟುಕೊಳ್ಳುವ ಕೆಲಸ ಜರೂರಾಗಿ ನಡೆಯಬೇಕು.
– ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿನ ಏಕೀಕೃತ ನಗರ ನೀರು ನಿರ್ವಹಣೆ ಸಮರ್ಪಕವಾಗಿ ಜಾರಿ.
– ಅದರಲ್ಲಿ ನಗರ ಯೋಜನೆ, ಪರಿಸರ ವ್ಯವಸ್ಥೆ ಪುನರ್‌ಸ್ಥಾಪನೆ ಕ್ರಮ.
– ನೆರೆ ನಿಯಂತ್ರಣ, ಜೀವ ವೈವಿಧ್ಯ ರಕ್ಷಣೆಗೆ ಆದ್ಯತೆ.
– ಕೆಲವು ಹಂತಗಳಲ್ಲಿ ಸರಕಾರದ ವತಿಯಿಂದ ಜಲಮೂಲ ರಕ್ಷಣೆಗೆ ಹೂಡಿಕೆ.
– ಖಾಸಗಿ, ವಿತ್ತೀಯ ಸಂಸ್ಥೆಗಳು ನೀರಿನ ಒತ್ತಡ ನಿರ್ವಹಣೆಯಲ್ಲಿ ಪಾತ್ರ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next