Advertisement

Crackers Effect: 3 ದಿನಗಳಲ್ಲಿ ಪಟಾಕಿ ಸಿಡಿದು ಕಣ್ಣಿಗೆ ಗಾಯವಾದವರ ಸಂಖ್ಯೆ 200ಕ್ಕೇರಿಕೆ

04:04 AM Nov 04, 2024 | Team Udayavani |

ಬೆಂಗಳೂರು: ದೀಪಾವಳಿ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಪಟಾಕಿ ಸಿಡಿದು ಕಣ್ಣಿನ ಗಾಯ ಮಾಡಿಕೊಂಡವರ ಸಂಖ್ಯೆ 200ಕ್ಕೆ ಏರಿಕೆ ಆಗಿದೆ. 30 ಮಂದಿಯ ಕಣ್ಣಿಗೆ ಗಂಭೀರ ಗಾಯವಾಗಿದೆ.

Advertisement

ಮಿಂಟೋ, ನಾರಾಯಣ ನೇತ್ರಾಲಯ, ಶಂಕರ್‌ ಸೇರಿದಂತೆ ನಗರದ ಕಣ್ಣಾಸ್ಪತ್ರೆಗಳಲ್ಲಿ ಪಟಾಕಿ ಸಿಡಿದು ಕಣ್ಣಿಗೆ ಗಾಯಗೊಂಡವರು ದಾಖಲಾಗಿದ್ದಾರೆ. ಕಳೆದ 3 ದಿನಗಳಿಂದ ನಾರಾಯಣ ನೇತ್ರಾಲಯದಲ್ಲಿ 73, ಮಿಂಟೋದಲ್ಲಿ 54, ಶಂಕರ್‌ ಆಸ್ಪತ್ರೆಯಲ್ಲಿ 18, ಉಳಿದ ಆಸ್ಪತ್ರೆಗಳಲ್ಲಿ 55 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಹಲವರಿಗೆ ದೃಷ್ಟಿ ಕಳೆದುಕೊಳ್ಳುವ ಆತಂಕವಿದ್ದು, ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಮಿಂಟೋ ಆಸತ್ರೆಯಲ್ಲಿ ಇಲ್ಲಿಯವರೆಗೆ 54 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 32 ಮಕ್ಕಳು ಕಣ್ಣಿನ ತೊಂದರೆಗೆ ಒಳಗಾಗಿದ್ದಾರೆ. 23 ಮಂದಿಗೆ ಗಂಭೀರ, 31 ಮಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. 4 ಮಂದಿಗೆ ಸರ್ಜರಿ ಮಾಡಲಾಗಿದೆ. 30 ಮಂದಿ ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದು, 24 ಮಂದಿಗೆ ಅಕ್ಕಪಕ್ಕದವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡಿದ್ದಾರೆ. ಪಟಾಕಿ ಅವಘಢದಿಂದ 40 ಮಂದಿ ಚಿಕಿತ್ಸೆ ಪಡೆದು ಹೋಗಿದ್ದರೆ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಒಂದೇ ದಿನ 20 ಪಟಾಕಿ ಅವಗಢ ಪ್ರಕರಣ ದಾಖಲಾಗಿದೆ.

ಇನ್ನು ನಾರಾಯಣ ನೇತ್ರಾಲಯ, ಶಂಕರ್‌, ಮಂಜುನಾಥ, ವಿನಾಯಕ ಹಾಗೂ ಆರ್ಗವಾಲ್‌, ವಾಸನ್‌ ಐಕೇರ್‌ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಲ್ಲಿ ಒಟ್ಟಾರೆ 146ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next