Advertisement
ಜಮೀರ್ ಹೇಳಿಕೆಗೆ ಸಂಬಂಧಿಸಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಆ ವ್ಯಕ್ತಿ ಬಗ್ಗೆ ನನ್ನ ಬಳಿ ಚರ್ಚೆ ಮಾಡಬೇಡಿ. ಅವರ ಸಹಿತ ಐದಾರು ಜನ ರೊಂದಿಗೆ ಸಂಬಂಧ ಬೆಳೆಸಿದ್ದು ನನ್ನ ಜೀವ ನದ ಕರಾಳ ಅಧ್ಯಾಯ. ಅಂತಹವರಿಂದ ದೂರ ಈಗ ಎಚ್ಚರಿಕೆಯಿಂದ ಇದ್ದೇನೆ ಎಂದರು.
ನನ್ನ ಮತ್ತು ಜಮೀರ್ ಆತ್ಮೀಯತೆ ರಾಜಕೀಯವಾಗಿ ಮಾತ್ರ. ನಾನು ಅವರನ್ನು ಕುಳ್ಳ ಎಂದು ಕರೆದೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಚಾಮುಂಡಿಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿ ಸಿದ ಬಳಿಕ ಸುದ್ದಿಗಾರರೊಂದಿಗೆ ತಮ್ಮ ಬಗ್ಗೆ ಸಚಿವ ಜಮೀರ್ ಅಹ್ಮದ್ ವರ್ಣಭೇದ ಹಾಗೂ ಜನಾಂಗೀಯ ನಿಂದನೆ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ, ಸಣ್ಣ ಸಣ್ಣ ವಿಷಯಕ್ಕೂ ಕೇಸು ಜಡಿದು ಜೈಲಿಗೆ ಹಾಕುವ ಸಿದ್ದರಾಮಯ್ಯ ಸರಕಾರ ಅವರು ಈಗೇಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು.
Related Articles
Advertisement
ಅಂತಹ ಸಂಸ್ಕೃತಿಯಿಂದ ಬಂದಿಲ್ಲಕರಿಯ, ಕುಳ್ಳ ಎಂದು ಇನ್ನೊಬ್ಬರಿಂದ ಹೇಳಿಸಿಕೊಳ್ಳುವ ಸಂಸ್ಕೃತಿಯಿಂದ ನಾನು ಬಂದಿಲ್ಲ. ಆ ವ್ಯಕ್ತಿಯನ್ನು ನಾನೆಂದೂ ಕುಳ್ಳ ಎಂದು ಕರೆದಿಲ್ಲ. ಹಣದ ಮದದಿಂದ ಖರೀದಿ ಮಾಡುವ ಹೇಳಿಕೆ ನೀಡಿದ್ದಾರೆ. ಆತನ ಜತೆ ಸ್ನೇಹ ಇದ್ದದ್ದು ಕೇವಲ ರಾಜಕೀಯವಾಗಿ ಅಷ್ಟೆ ಎಂದು ಕಿಡಿಕಾರಿದರು. “ನಾನು, ಚಲುವರಾಯಸ್ವಾಮಿ, ಪುಟ್ಟಣ್ಣ, ಜಮೀರ್ ಅಹ್ಮದ್ ಖಾನ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಜತೆಗೆ ಇದ್ದಾಗ ಪನ್ನೀರಾಗಿದ್ದೆವು. ಇವತ್ತು ನಾವು ಕುಮಾರಸ್ವಾಮಿ ಅವರಿಗೆ ವಿರೋಧಿಗಳಾಗಿದ್ದೇವೆ. ಹಾಗಾಗಿ ಕೊಚ್ಚೆಯಂತೆ ಕಾಣುತ್ತಿದ್ದೇವೆ. ಇಬ್ಬರೂ ತಬ್ಬಿಕೊಂಡ ಮೇಲೆ ಇಬ್ಬರೂ ಕೊಚ್ಚೆಯೇ ತಾನೆ. ನಾವೂ ಕೊಚ್ಚೆ, ಅವರೂ ಕೊಚ್ಚೆ.” – ಎಚ್.ಸಿ. ಬಾಲಕೃಷ್ಣ, ಮಾಗಡಿ ಕಾಂಗ್ರೆಸ್ ಶಾಸಕ