Advertisement
ಪುರಸಭೆಯಾಗಿ, ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಕಾಪು ಪೇಟೆಯಲ್ಲಿ ಒಳಚರಂಡಿ ಯೋಜನೆಯ ಘಟಕ ಮತ್ತು ಎಸ್ಟಿಪಿ / ಯುಜಿಡಿ ಸೌಲಭ್ಯಗಳಿಲ್ಲದೇ ಪೇಟೆ ಮತ್ತು ಸುತ್ತಮುತ್ತಲಿನ ತ್ಯಾಜ್ಯ ಮತ್ತು ಮಲಿನ ನೀರು ಬೀಡುಬದಿ, ಕಲ್ಯ ಪರಿಸರ, ಭಾರತ್ ನಗರ ಸಹಿತ ವಿವಿಧ ಕೃಷಿ ಪ್ರದೇಶ ಮತ್ತು ಜನವಸತಿ ಪ್ರದೇಶಗಳಿಗೆ ಹರಿದು ಹೋಗುತ್ತಿದೆ. ಪೇಟೆಗೆ ಒಳಚರಂಡಿ ವ್ಯವಸ್ಥೆ ಬೇಕು ಎಂಬ ಬಗ್ಗೆ ಉದಯವಾಣಿ ಸುದಿನದಲ್ಲಿ ವಿಶೇಷ ಸರಣಿ ಪ್ರಕಟವಾಗಿತ್ತು. ಇದರಲ್ಲಿ ಎಲ್ಲಿ ಮತ್ತು ಹೇಗೆ ಎಸ್ಟಿಪಿ ಸ್ಥಾಪಿಸಬಹುದು ಎಂಬ ಬಗ್ಗೆಯೂ ಸಲಹೆಗಳನ್ನು ನೀಡಲಾಗಿತ್ತು. ಈ ವರದಿಗಳು ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿದವು.
Related Articles
Advertisement
ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ್ ಉಪಸ್ಥಿತರಿದ್ದರು.
ಚುನಾವಣೆ, ರಾಜಕೀಯ ಬಿಟ್ಟು ಎಲ್ಲರೂ ಸೇರಿ ಜಾಗ ಗುರುತಿಸಿ: ಗುರ್ಮೆ ಸಲಹೆಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮ್ಮ ಮನೆಯಂಗಳದಿಂದ ಕೊಳಚೆ ನೀರು ಹೋಗಬೇಕು ಎನ್ನುವುದು ಬೇಡಿಕೆ. ಇಲ್ಲಿನ ಮೂಲ ಸಮಸ್ಯೆಯೆಂದರೆ ಜಾಗದ ಕೊರತೆ. ಈ ವಿಚಾರದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ? ಎಂಬ ಪ್ರಶ್ನೆ ಉದ್ಭವಿಸಿದೆ. ಪುರಸಭೆ ಸದಸ್ಯರೆಲ್ಲರೂ ಜತೆ ಸೇರಿ ಒಂದು ನಿರ್ದಿಷ್ಟ ಜಾಗವನ್ನು ಗೊತ್ತುಪಡಿಸಿ, ಅದನ್ನು ನಿರ್ಣಯಿಸಬೇಕಿದೆ. ಜಾಗ ಹುಡುಕಿ, ನನ್ನ ಬಳಿಗೆ ಬನ್ನಿ. ನಾವೆಲ್ಲರೂ ಜತೆ ಸೇರಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಸ್ಟಿಪಿ ಘಟಕ ನಿರ್ಮಾಣ ಮಾಡೋಣ. ಚುನಾವಣೆ, ರಾಜಕೀಯ ಇವೆಲ್ಲವನ್ನೂ ಬದಿಗಿಟ್ಟು ಈ ಬಗ್ಗೆ ನಾವು ಯೋಚಿಸಬೇಕಿದೆ ಎಂದರು. ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪಿಸಿ, ಅದನ್ನು ಮರು ಬಳಕೆಗೆ ಯೋಗ್ಯವನ್ನಾಗಿಸಿ ಕೊಳ್ಳಬಹುದಾಗಿದೆ. ಪ್ರತೀ ಪುರಸಭೆ ವ್ಯಾಪ್ತಿಯಲ್ಲಿಯೂ ಎಸ್ಟಿಪಿ ಘಟಕ ನಿರ್ಮಾಣದ ಬಗ್ಗೆ ರಾಷ್ಟ್ರೀಯ ಹಸಿರು ಪೀಠ ಕೂಡಾ ಈ ಬಗ್ಗೆ ಸೂಚನೆ ನೀಡಿದೆ. ಎಸ್ಟಿಪಿ ಘಟಕಗಳು ಇಲ್ಲದಿರುವ ಪುರಸಭೆಗೆ ಸರಕಾರದ ಅನುದಾನ ಕೂಡಾ ಕಡಿತವಾಗುತ್ತದೆ. ಮುಂದೆ ಇದನ್ನು ಸರಿಪಡಿಸಲು ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ಸದಸ್ಯರೆಲ್ಲರೂ ಜತೆಗೂಡಿ ಒಂದೆರಡು ಜಾಗವನ್ನು ಗುರುತಿಸುವ ಪ್ರಯತ್ನ ನಡೆಸಬೇಕು. ಈ ವಿಚಾರದಲ್ಲಿ ಚರ್ಚಿಸಲು ತಹಶೀಲ್ದಾರ್, ಎಸಿ, ಡಿಸಿ ಅವರ ಜತೆಗೂ ವಿಶೇಷ ಸಭೆ ನಡೆಸಲು ಸಿದ್ಧನಿದ್ದೇನೆ ಎಂದರು. ಅನುದಾನ ಈಗಾಗಲೇ ಮೀಸಲಿದೆ
ಎಸ್ಟಿಪಿ ರಚನೆಗೆ ಅನುದಾನದ ಕೊರತೆಯಿಲ್ಲ. ಆದರೆ ಜಾಗದ ಕೊರತೆಯಿದೆ. ಆದರೆ ಪುರಸಭೆ ಹೆಸರಿನಲ್ಲಿ ಸರಕಾರಿ ಜಾಗವಿಲ್ಲ. ಯಾವುದಾರರೂ ಸರಕಾರಿ ಜಾಗ, ಕಂದಾಯ ಇಲಾಖೆಗೆ ಸಂಬಂಧಪಟ್ಟ ಜಾಗ ಇದೆಯೇ ಎಂದು ಗುರುತಿಸುವಂತೆ ತಹಶೀಲ್ದಾರ್ ಅವರಿಗೂ ಪತ್ರ ಬರೆಯಲಾಗಿದೆ. ಸದಸ್ಯರು ಖಾಸಗಿ ಜಾಗವೇನಾದರೂ ಇದ್ದರೆ ಅದನ್ನು ಒದಗಿಸಿದರೆ, ಸರಕಾರಿ ದರಪಟ್ಟಿಯಂತೆ ಖರೀದಿಸಿ ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪಿಸಬಹುದಾಗಿದೆ. ಸದಸ್ಯರು ನಮ್ಮೊಂದಿಗೆ ಪೂರ್ಣ ರೀತಿಯಲ್ಲಿ ಸಹಕರಿಸಿದರೆ ತತ್ಕ್ಷಣ ಈ ಬಗ್ಗೆ ಕಾರ್ಯೋನ್ಮುಖರಾಗಲು ಸಾಧ್ಯವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ. ಹೇಳಿದರು. ಕಾಪು ಸಮಸ್ಯೆಗೆ ಇದು ಪರಿಹಾರ
– ಕಾಪು ಪೇಟೆಗೆ 10 ಸಾವಿರ ಲೀಟರ್ ಸಾಮರ್ಥ್ಯದ ಎಸ್ಟಿಪಿ ಸಾಕಾಗುತ್ತದೆ. ನೂತನ ಎಸ್ಬಿಆರ್ ಟೆಕ್ನಾಲಜಿ ಬಳಿಸಿದರೆ ಕೇವಲ 30-40 ಸೆಂಟ್ಸ್ ಜಾಗದಲ್ಲೇ ಸ್ಥಾಪಿಸಬಹುದು. ನಗರ ಮಧ್ಯದಲ್ಲಿದ್ದರೂ ಯಾವುದೇ ಸಮಸ್ಯೆ ಇರುವುದಿಲ್ಲ.
– ಪಾಂಗಾಳ ಅಥವಾ ಮಲ್ಲಾರು ಸೇತುವೆ ಬಳಿ ಜಾಗ ಬಳಸಬಹುದು.
– ಈಗಾಗಲೇ ಹತ್ತಾರು ಎಕರೆ ಕೃಷಿ ಭೂಮಿ ತ್ಯಾಜ್ಯ ನೀರಿನಿಂದ ಹಾಳಾಗಿದೆ. ಅದರಲ್ಲಿ ಒಂದು ಎಕರೆಯನ್ನು ಸರಿಯಾಗಿ ಬಳಸಿದರೆ ಉಳಿದ ಜಾಗದ ಮಾಲಿನ್ಯವನ್ನು ಕಡಿಮೆ ಮಾಡಬಹುದು.