Advertisement

Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್‌ ಸಮಸ್ಯೆ

10:59 AM Nov 07, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್‌ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆ 0-14 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಬಾಲ್ಯ ಕ್ಯಾನ್ಸರ್‌ ವರದಿಯಾಗು ತ್ತಿರುವುದು ಆತಂಕ ಮೂಡಿಸಿದೆ.

Advertisement

ಭಾರತದಲ್ಲಿ 0-14 ವರ್ಷದೊಳಗಿನ 25,939 ಮಕ್ಕಳ ಬಾಲ ಕ್ಯಾನ್ಸರ್‌ಗೆ ತುತ್ತಾದರೆ. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ 0-14 ವರ್ಷದೊಳಗಿನ 3000 ಮಕ್ಕಳಲ್ಲಿ ಬಾಲ್ಯ ಕ್ಯಾನ್ಸರ್‌ ವರದಿಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದು ಆತಂಕ ಮೂಡಿಸಿದೆ.

ಈ ವರ್ಷ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯೊಂದರಲ್ಲಿ ಸರಾಸರಿ 280 ರಿಂದ 300 ಬಾಲ್ಯ ಕ್ಯಾನ್ಸರ್‌ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ದಾಖಲಾದ ಒಟ್ಟು ಪುರುಷ ರೋಗಿಗಳಲ್ಲಿ ಶೇ.2.7 ಬಾಲಕರು ಹಾಗೂ ಮಹಿಳೆಯರಲ್ಲಿ ಶೇ. 1.3ರಷ್ಟು ಬಾಲಕಿಯರು ಕ್ಯಾನ್ಸರ್‌ಗೆ ತುತ್ತಾಗಿರುವುದು ವರದಿಯಾಗಿದೆ.

ಯಾವ ಕ್ಯಾನ್ಸರ್‌ ಕಾಡುತ್ತಿದೆ?: ಬಾಲಕರಲ್ಲಿ ಅಧಿಕ ಸಂಖ್ಯೆಯಲ್ಲಿ ಲಿಂಫಾಯಿಡ್‌ ಲ್ಯುಕೇಮಿಯಾ ಶೇ.20.6, ಮೈಲೋಯ್ಡ ಲ್ಯುಕೇಮಿಯಾ ಶೇ.14.4, ಮೆದುಳು-ನರಮಂಡಲ ಶೇ.13.8ರಷ್ಟು, ಎನ್‌ಎಚ್‌ಎಲ್‌ ಹಾಡ್ಗ್ಯಿನ್ ಶೇ.7.5ರಷ್ಟು ಪ್ರಕರಣ ದಾಖಲಾಗಿದೆ. ಉಳಿದಂತೆ ಬಾಲಕಿಯರಲ್ಲಿ ಲಿಂಫಾಯಿಡ್‌ ಲ್ಯುಕೇಮಿಯಾ ಶೇ.25.5, ಮೆದುಳು ನರಮಂಡಲ ವ್ಯವಸ್ಥೆಗೆ ಸಂಬಂಧಿಸಿ ಶೇ.12.8, ಮೈಲೋಯ್ಡ ಲ್ಯುಕೇಮಿಯಾ ಶೇ.12.8, ಮೂಳೆ ಕ್ಯಾನ್ಸರ್‌ ಶೇ. 7.8, ಅಂಡಾಶಯ ಶೇ.5.3, ಹಾಡ್ಗ್ಯಿನ್ ಶೇ.4.3ರಷ್ಟು ಪ್ರಕರಣಗಳು ವರದಿಯಾಗಿವೆ.

ಬಾಲ್ಯ ಕ್ಯಾನ್ಸರ್‌ಗೆ ಕಾರಣ?: ನಿರಂತರವಾಗಿ ವೈರಲ್‌ ಸೋಂಕಿಗೆ ಒಳಗಾಗುವ, ಗರ್ಭಿಣಿಯರು ಅಧಿಕ ಪ್ರಮಾಣದಲ್ಲಿ ರೇಡಿಯೇಶನ್‌ ಒಳಗಾಗುವುದರಿಂದ ಮತ್ತು ಜೆನೆಟಿಕ್‌ ಮಕ್ಕಳಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳಲು ಕಾರಣವಾಗುತ್ತಿದೆ. ನಿರಂತರವಾದ ವೈರಲ್‌ ಸೋಂಕಿಗೆ ತುತ್ತಾಗುವ ಮಕ್ಕಳಲ್ಲಿ ವೈರಸ್‌ ಡಿಎನ್‌ಎ ಒಳಗೆ ಪ್ರವೇಶಿಸಿ ಹೊಸ ಸೆಲ್‌ಗ‌ಳನ್ನು ನಾಶಪಡಿಸುತ್ತದೆ. ಈ ವೇಳೆ ನಾಶವಾದ ಸೆಲ್‌ಗ‌ಳು ಕೊಳೆಯಲಾರಂಭಿಸುತ್ತದೆ. ಇದರಿಂದ ರಕ್ತದ ಕ್ಯಾನ್ಸರ್‌ ಹಾಗೂ ಮೂಳೆ ಕ್ಯಾನ್ಸರ್‌ ವರದಿಯಾಗುತ್ತದೆ. ಇನ್ನು ಗರ್ಭಿಣಿಯಾದ ಸಂದರ್ಭದಲ್ಲಿ ತಾಯಿಯು ಅಧಿಕ ಪ್ರಮಾಣದಲ್ಲಿ ರೇಡಿಯೇಶನ್‌ ಒಳಗಾಗುವುದರಿಂದ ಹಾಗೂ ಜೆನೆಟಿಕ್‌ನಿಂದಾಗಿ ಹೆಚ್ಚಾಗಿ 0-14 ವರ್ಷದೊಳಗಿನ ಮಕ್ಕಳಲ್ಲಿ ಬಾಲ ಕ್ಯಾನ್ಸರ್‌ ವರದಿಯಾಗುತ್ತಿದೆ. ರಾಜ್ಯದಲ್ಲಿ 86,563 ಹೊಸ ಪ್ರಕರಣ: ರಾಜ್ಯದಲ್ಲಿ ಪ್ರಸ್ತಕ ಸಾಲಿನಲ್ಲಿ 86,563 ಹೊಸ ಕ್ಯಾನ್ಸರ್‌ ಪ್ರಕರಣ ಗಳು ವರದಿಯಾಗಿವೆ.

Advertisement

ಇದರಲ್ಲಿ 38604 ಪುರುಷರು ಹಾಗೂ 47959 ಮಂದಿ ಮಹಿಳೆಯರು ಇದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಸುಮಾರು 2.3 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. ಪುರುಷರಲ್ಲಿ ಶ್ವಾಸಕೋಸದ ಹಾಗೂ ಮಹಿಳೆಯರಲ್ಲಿ ಶೇ.31.5ರಷ್ಟು ಸ್ತನ ಕ್ಯಾನ್ಸರ್‌ ವರದಿಯಾಗುತ್ತಿದೆ. ‌

ಕಳೆದ 2 ವರ್ಷಗಳ ಹಿಂದೆ ಗರ್ಭ ಕಂಠದ ಕ್ಯಾನ್ಸರ್‌ ಮಹಿಳೆಯರನ್ನು ಹೆಚ್ಚಾಗಿ ಕಾಡಿತ್ತು. ಈ ಬಾರಿ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಪ್ರಕರಣ ಹೆಚ್ಚಾಗಿ ವರದಿಯಾಗಿದೆ. ಬೆಂಗಳೂರಿನ ಕಿದ್ವಾಯಿ ಸಂಸ್ಥೆಯ ಹೊರ ಹೋಗಿಗಳ ವಿಭಾಗದಲ್ಲಿ ಕಳೆದ ವರ್ಷ 18 ಸಾವಿರ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ.

0-14 ವರ್ಷದೊಳಗಿನ ಮಕ್ಕಳಲ್ಲಿ ಬಾಲ್ಯ ಕಾನ್ಸರ್‌ ವರದಿಯಾಗುತ್ತಿದೆ. ಕಿದ್ವಾಯಿ ಸಂಸ್ಥೆಯೊಂದರಲ್ಲಿ ವರ್ಷಕ್ಕೆ 975ಕ್ಕೂ ಅಧಿಕ ಬಾಲ್ಯ ಕ್ಯಾನ್ಸರ್‌ ವರದಿಯಾಗುತ್ತಿದೆ. ಮಕ್ಕಳು ಹೆಚ್ಚಾಗಿ ಲಿಂಫಾಯಿಡ್‌ ಲ್ಯುಕೇಮಿಯಾ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಡಾ. ಎ.ಆರ್‌.ಅರುಣ್‌, ವಿಭಾಗ ಮುಖ್ಯಸ್ಥ, ಮಕ್ಕಳ ಕ್ಯಾನ್ಸರ್‌ ಗಂಥಿ ವಿಭಾಗ ಕಿದ್ವಾಯಿ 

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next