Advertisement

Water, A.C. ಸರಿ ಇಲ್ಲದ್ದಕ್ಕೆ ದೂರು: ಸ್ಪಂದಿಸದ ರೈಲ್ವೇಗೆ ಕೋರ್ಟ್‌ನಿಂದ 30000 ದಂಡ

12:32 AM Nov 02, 2024 | Team Udayavani |

ಹೈದರಾಬಾದ್‌: ರೈಲ್ವೇ ಪ್ರಯಾಣದ ವೇಳೆ ಶೌಚಾಲಯದಲ್ಲಿ ನೀರಿರಲಿಲ್ಲ, ಬೋಗಿಯಲ್ಲಿ ಕಸ ತುಂಬಿದೆ ಎಂದು ಆರೋಪಿಸಿದ್ದ ಪ್ರಯಾಣಿಕನ ದೂರನ್ನು ನಿರ್ಲಕ್ಷಿಸಿದ್ದ ದಕ್ಷಿಣ ಮಧ್ಯ ರೈಲ್ವೇಗೆ (ಎಸ್‌ಸಿಆರ್‌) ಜಿಲ್ಲಾ ಗ್ರಾಹಕ ನ್ಯಾಯಾ ಲಯವೊಂದು 30000 ರೂ. ದಂಡ ವಿಧಿಸಿದೆ. ಜತೆಗೆ ಪ್ರಯಾಣಿಕನಿಗೆ ಅನಾನುಕೂಲ ಕಲ್ಪಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದೆ.

Advertisement

2023ರ ಜೂ. 5ರಂದು ವಿ. ಮೂರ್ತಿ ಎಂಬವರು ತಿರುಪತಿಯಿಂದ ದುವ್ವಾಡಗೆ ಎ.ಸಿ. ಕೋಚ್‌ನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸಿದ್ದರು. ಅಲ್ಲಿ ಎ.ಸಿ.ಕೋಚ್‌ನಲ್ಲಿ ಸರಿ ಯಾಗಿ ಕೆಲಸ ಮಾಡುತ್ತಿರಲಿಲ್ಲ. ಜತೆಗೆ ಟಾಯ್ಲೆಟ್‌ನಲ್ಲಿ ನೀರು ಬರುತ್ತಿರಲಿಲ್ಲ. ಈ ಬಗ್ಗೆ ರೈಲ್ವೇ ಅಧಿಕಾರಿಗಳಿಗೆ ದೂರು ಕೂಡ ನೀಡಿದ್ದರೂ ಪ್ರಯೋಜನ ವಾಗಿರಲಿಲ್ಲ. ಈ ಹಿನೆ°ಲೆಯಲ್ಲಿ ಮೂರ್ತಿ ಗ್ರಾಹಕರ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ರೈಲ್ವೇ ಈ ಆರೋಪಗಳು ಸುಳ್ಳು. ರೈಲಿನ ಮೂಲಕ ಅವರು ಸುರಕ್ಷಿತವಾಗಿ ತಲುಪಿದ್ದರು ಎಂದು ವಾದಿಸಿತ್ತು. ಈ ವಾದ ತಿರಸ್ಕರಿಸಿದ ಕೋರ್ಟ್‌ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕಾದದ್ದು ರೈಲ್ವೇಯ ಕರ್ತವ್ಯ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next