Advertisement

UV Fusion: ನಮ್ಮವರಾರಿಲ್ಲ ನಮ್ಮಲ್ಲೇನಿಲ್ಲದಿದ್ದರೆ…

03:07 PM Feb 03, 2024 | Team Udayavani |

ಜಗತ್ತಿನಲ್ಲಿ ನಮ್ಮದು ಕಾಲಿಗೆ ಚಕ್ರ ಕಟ್ಟಿ ಓಡುವ ವೇಗದ ಬದುಕು. ಹಿಂದೆ – ಮುಂದೆ ನೋಡುವಂತಿಲ್ಲ. ಒಳ್ಳೆಯದು ಕೆಟ್ಟದ್ದು ಯೋಚಿಸುವಂತಿಲ್ಲ. ಇಲ್ಲ ಅನ್ನೋದಕ್ಕಿಂತ ಅದಕ್ಕೆ ಸಮಯವೇ ಇಲ್ಲ ಅನ್ನಬಹುದೇನೋ. ಸ್ಪರ್ಧೆಯಲ್ಲೇ ತುಂಬಿಹೋಗಿರುವ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಎದುರಾಳಿಗಳೇ… ನಮ್ಮವರನ್ನೂ ಸೇರಿಸಿ…

Advertisement

ಜಗತ್ತು ಅದೆಷ್ಟು ವಿಚಿತ್ರ ಅಲ್ವಾ… ನಮ್ಮಲ್ಲಿ ಹಣ, ಅಂತಸ್ತು, ಆಭರಣ, ಆಸ್ತಿ, ಅಧಿಕಾರ ಎಲ್ಲವೂ ಇದ್ದಾಗ ಭಾವನೆಯಲ್ಲೇ ನಮ್ಮನ್ನು ಕರಗಿಸಿ ನಮ್ಮವರಾಗುತ್ತಾರೆ. ಏನಿಲ್ಲದಿದ್ದಾಗ ಅವರನ್ನು ಅವಲಂಬಿಸದೇ ಇದ್ರೂ ಕೂಡ ನನ್‌ ಕುತ್ತಿಗೆಗೆ ಯಾಕೆ ಜೋತು ಬಿತ್ತು ಸಾಯ್ತಿಯಾ ಅಂತ ಪ್ರಶ್ನೆ ಮಾಡ್ತಾರೆ. ಅಚ್ಚರಿ ಆದ್ರೂ ಕಟು ಸತ್ಯ ಕಣ್ರೀ…. ಸಂಬಂಧಗಳೇ ಹಾಗೆ ಎಲ್ಲವೂ ಇದ್ದಾಗ ನಮ್ಮನ್ನು ಅತ್ಯಂತ ಹತ್ತಿರದವರಂತೆ ಮಾತನಾಡಿಸಿ, ಇತರರಿಗೂ ಪರಿಚಯಿಸ್ತಾರೆ. ಏನೂ ಇಲ್ಲದೆ ಸೋತು ಹೋದಾಗ ಉಪಕಾರ ಮಾಡುವುದಕ್ಕೆ ಬಿಡಿ, ಸಾಂತ್ವನ ಹೇಳುವುದಕ್ಕೂ ಯಾರೂ ಬರಲ್ಲ. ಎಲ್ಲರಿಗೂ ಈ ಅನುಭವ ಆಗಿರಬಹುದು.

ಯಾರಾದರೂ ಸಾಧನೆ ಮಾಡುತ್ತಾರೆ, ಏನೋ ಒಳ್ಳೆಯದಾಗುತ್ತಿದೆ ಎಂದರೆ ಅದನ್ನು ಸಹಿಸದವರು ನಮ್ಮ ಸುತ್ತಮುತ್ತಲಿರುತ್ತಾರೆ. ಒಳ್ಳೆತನಕ್ಕೆ ಗೌರವ ಕೊಟ್ಟು ಒಳ್ಳೆಯದಾಗಲು ಬಯಸೋ ಮನಸ್ಸು ನಮ್ಮ ಸುತ್ತ ಇರೋ ವ್ಯಕ್ತಿಗಳಲ್ಲೇ ಇಲ್ಲ ಅಂತಂದ್ರೆ ಸಮಾಜದಿಂದ ನಾವು ಹೇಗೆ ಅಪೇಕ್ಷಿಸೋದು ಸಾಧ್ಯ ಹೇಳಿ.

ಆದರೆ ಒಂದಂತೂ ಸತ್ಯ. ಜೀವನದಲ್ಲಿ ಯಾರು ಅತ್ಯಂತ ನೋವು, ಕಷ್ಟ, ಸವಾಲು, ಅವಮಾನಗಳನ್ನು ಎದುರಿಸಿ ಒಂಟಿಯಾಗಿ ಬೆಳೆದಿರ್ತಾರೋ ಅವರು ಒಂಟಿಯಾಗಿಯೇ ನಿಂತು ಬದುಕಿನ ದಡ ಸೇರ್ತಾರೆ, ಸಾಧನೆ ಮಾಡುತ್ತಾರೆ. ಆದರೆ ಈ ಎಲ್ಲದರ ನಡುವೆ ಒಂದಂತೂ ನೆನಪಿರಲಿ….ನಮ್ಮಲ್ಲಿ ಏನೂ ಇಲ್ಲದಾಗ ನಮ್ಮವರೂ ಯಾರೂ ಇರೋದಿಲ್ಲ….

-ಅರ್ಪಿತಾ ಕುಂದರ್‌

Advertisement

ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next