Advertisement

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

05:09 PM Nov 13, 2024 | Team Udayavani |

ಉದ್ಯಮವನ್ನು ಪ್ರಾರಂಭಿಸಬೇಕಾದರೆ ಹಲವಾರು ಅಡ್ಡಿ ಆತಂಕಗಳು ಎದುರಾಗುತ್ತವೆ, ದೊಡ್ಡ ಸಾಹಸಕ್ಕೆ ಕೈ ಹಾಕಿದಾಗ ಸವಾಲುಗಳ ಸಂಖ್ಯೆಯೂ ದೊಡ್ಡ ಮಟ್ಟದಲ್ಲಿಯೇ ಇರುತ್ತದೆ. ಕಾಲು ಎಳೆಯುವರ ಗುಂಪು, ಮೂಲ ಸೌಕರ್ಯ, ಹಣದ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳು ಬೆನ್ನೆರುತ್ತವೆ. ಸಂಸ್ಥೆಯೊಂದರ ಜವಾಬ್ದಾಯನ್ನು ಹೊರುವುದು ಸುಲಭ ಆದರೆ, ಮುನ್ನಡೆಸಿಕೊಂಡು ಹೋಗುವುದು ಕಠಿನ. ಅಂತಹ ಕೆಲಸಕ್ಕೆ ಎದೆ ಉಬ್ಬಿಸಿ ನಿಂತವರೇ ರತನ್‌ ಟಾಟಾ. ಅಗ್ರಗಣ್ಯ ಕೈಗಾರಿಕೋದ್ಯಮಿಯಾಗಿ ಸರಳ ಸಜ್ಜನಿಕೆಯ ಶ್ರೀಮಂತ ವ್ಯಕ್ತಿಯಾದ ಅವರು ನಮ್ಮಲ್ಲರನ್ನು ಅಗಲಿದ್ದರೂ ಅವರ ಸಾಧನೆಯಿಂದ ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

Advertisement

ಒಳ್ಳೆಯ ನಿರ್ಧಾರದ ಮೇಲೆ ನಂಬಿಕೆ ಇಡಬಾರದು, ನಾವು ತೆಗೆದುಕೊಂಡ ನಿರ್ಧಾರವನ್ನೇ ಒಳ್ಳೆಯದನ್ನಾಗಿಸಬೇಕು ಎಂಬ ಅವರ ಮಾತಿನಂತೆ ಉಪ್ಪು ತಯಾರಿಕೆಯಿಂದ ಹಿಡಿದು ದೊಡ್ಡ ದೊಡ್ಡ ಕಾರು, ಬಸ್‌ ಕಂಪನಿಗಳವರೆಗೂ ಉದ್ಯಮವನ್ನು ಕಟ್ಟಿ ಭಾರತದಲ್ಲಿ ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ಟಾಟಾ ಪವರ್‌, ಟಾಟಾ ಟೀ, ಇಂಡಿಯನ್‌ ಹೋಟೆಲ್‌, ಟಾಟಾ ಸರ್ವಿಸಸ್‌ ನಂತಹ ಅನೇಕ ಕಂಪನಿಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿ ದ್ದಾ ರೆ.

ಕೈಗಾರಿಕೋದ್ಯಮ ವ್ಯಾಪಾರ ಸಾಮ್ರಾಜ್ಯದಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಮೂಡಿಸಿ ವ್ಯಾಪಾರ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ಅವರಿಗೆ ಸರಿಸಾಟಿ ಯಾರು ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಮುಂಬೈನ ಕೆಥೆಡ್ರೆಲ್‌, ಜಾನ್‌ ಕೆನನ್‌ ಸ್ಕೂಲ್‌ ಪ್ರಾರಂಭವಾದ ಓದು. 1992 ರಲ್ಲಿ ಕಾರ್ನಿಲ್‌ ನಲ್ಲಿ ಬಿ.ಎಸ್ಸಿ. ಪದವಿ ಪಡೆದು ಕನ್‌ಸ್ಟ್ರಕ್ಷನ್‌ ಹಾಗೂ ಇಂಜಿನಿಯರಿಂಗ್‌ ನಲ್ಲಿ ಅವರಿಗಿದ್ದ ಕೌಶಲ್ಯ ಮತ್ತು ಜ್ಞಾನದಿಂದ ಐ.ಬಿ.ಎಮ್‌. ನಲ್ಲಿ ಅವರಿಗೆ ಕರೆ ಬಂದಿತ್ತು. ಆದರೆ ಜಿ ಅವರು ಪತ್ರ ಬರೆದು ಭಾರತಕ್ಕೆ ಕರಿಸಿಕೊಂಡಿದ್ದರು. ಸ್ವದೇಶಕ್ಕೆ ಮರಳಿದ ಟಾಟಾ ಅವರ ಉದ್ಯಮ ಪಯಣ ಶುರುವಾಗಿದ್ದು ಅಲ್ಲಿಂದಲೇ.

ಇದುವರೆಗೂ ಬೃಹತ್‌ ಟಾಟಾ ಉದ್ಯಮದ ಕೆಲಸಗಾರರಲ್ಲಿ ರತನ್‌ ಟಾಟಾ ಒಬ್ಬರೇ ಅತ್ಯಂತ ಹೆಚ್ಚು ಓದಿಕೊಂಡವರು ಭಾರತಕ್ಕೆ ಬರುವ ಮೊದಲು ವಸರ್ನ ಜೋನ್ಸ್ ಮತ್ತು ಎಮ್ಮನ್ಸ್ ಕಮ್‌ ಲಾಸ್‌ ಎಂಜಲಿಸ್‌, ಕ್ಯಾಲಿಫೋರ್ನಿಯದಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ್ದರು. ನಂತರ ಭಾರತದಲ್ಲಿ ಟಾಟಾ ಗ್ರೂಪ್‌ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿ ಎನ್‌.ಇ.ಎಲ್‌. ಕಂಪೆನಿಯ ಇನ್‌ ಚಾರ್ಜ್‌ ಮತ್ತು ಚೇರ್ಮನ್‌ ಆಗಿ ವೃತ್ತಿಯನ್ನು ಪ್ರಾರಂಭಿಸಿದರು. 1981ರಲ್ಲಿ ಹೈಟೆಕ್‌ ವಿಭಾಗದಲ್ಲಿ ಹೊಸ ಹೊಸ ತಂತ್ರಜ್ಞಾನಗಳಿಗೆ ನಾಂದಿ ಹಾಕಿ ಅವುಗಳನ್ನು ಬೆಳೆಸಿದರು.

Advertisement

ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಭಾರತ ದೇಶದಲ್ಲಿ ಎಲ್ಲರೂ ಸ್ವಂತ ವಾಹನದಲ್ಲಿ ತಿರುಗಾಡಬೇಕು ಎಂಬ ಕನಸನ್ನು ಹೊತ್ತು ಕಡಿಮೆ ದರದಲ್ಲಿ ದೇಶಿ ನಿರ್ಮಿತ ಕಾರುಗಳ ತಯಾರಿಕೆಗೆ ಮುಂದಾದರು ರತನ್‌ ಟಾಟಾ. ಅಧಿಕಾರಕ್ಕೆ ಬಂದ ನಂತರ ಟಾಟಾ ಇಂಡಿಕಾ ಕಾರು ತಯಾರಿಕೆಯಿಂದ ಅವರ ಕನಸು ನನಸಾಯಿತು. ಆಗ ಟಾಟಾ ಇಂಡಿಕಾ ದೇಶಾದ್ಯಂತ ಬಹುದೊಡ್ಡ ಸದ್ದು ಮಾಡಿತ್ತು ನಂತರದಲ್ಲಿ ಚಿಕ್ಕ ಕಾರು ಒಂದನ್ನು ತಯಾರು ಮಾಡಬೇಕೆಂದು ನ್ಯಾನೋ ಕಾರನ್ನು ಪರಿಚಯಿಸಿದರು.‌

ತಮ್ಮ ಕನಸಿನ ಕೂಸಾದ ಅದನ್ನು 2008ರಲ್ಲಿ ದೆಹಲಿಯಲ್ಲಿ ಹಮ್ಮಿಕೊಂಡ ಒಂಬತ್ತನೇ ಆಟೋ ಎಕ್ಸ್‌ ಪೊಯಮ್‌ ನ್ಯೂ ಡೆಲ್ಲಿ ಪ್ರಪ್ರಥಮವಾಗಿ ಪರಿಚಯಿಸಿದರು. ಮುಂಬಯಿನ ಕೋಲಾದ ತಮ್ಮ ಮನೆಯಲ್ಲಿ ಯಾವ ಹೆಚ್ಚಿನ ಸದ್ದು ಗದ್ದಲವಿಲ್ಲದೆ ಅದೇ ಪರಿಸರದಲ್ಲಿ ತಮ್ಮ ಬಾಲ್ಯವನ್ನು ಕಳೆದು ಇಂದಿಗೂ ಅಲ್ಲಿಯೇ ವಾಸವಾಗಿದ್ದರು. ಒಂದೊಮ್ಮೆ ದೇಶಕ್ಕೆ ಕಷ್ಟ ಪರಿಸ್ಥಿತಿ ಬಂದಾಗ ನನ್ನೆಲ್ಲಾ ಆಸ್ತಿಯನ್ನು ದೇಶಕ್ಕಾಗಿ ಮುಡಿಪಾಗಿಡುತ್ತೇನೆ ಎಂದು ಹೇಳಿ ಜನಸಾಮಾನ್ಯರಂತೆ ಬದುಕಿದ್ದವರು.

ಈ ರೀತಿಯಾಗಿ ರತನ್‌ ಟಾಟಾ ಅವರು ಸರಳ ಸಜ್ಜನಿಕೆಯಿಂದ ಯಾವ ಅಹಂ ಇಲ್ಲದೆ ನಮ್ಮೊಂದಿಗೆ ಇದ್ದು ನಮ್ಮನ್ನು ಅಗಲಿದ ರತನ ಟಾಟಾ ಭಾರತಿಯರ ಹೃದಯದಲ್ಲಿ ಅಜರಾಮರ.

  -ಮಹಾಂತೇಶ ದು. ಅಂಬಿಗೈರ

ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next