Advertisement
ಪದಗಳನ್ನು ಬುದ್ಧಿವಂತಿಕೆಯಿಂದ ಬಳಸುವುದು ಪರಿಣಾಮಕಾರಿ ಸಂವಹನ ಮತ್ತು ಸಕಾರಾತ್ಮಕ ಸಂಬಂಧಗಳನ್ನು ಬೆಳೆಸಲು ನಿರ್ಣಾಯಕವಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ಮಾತುಗಳನ್ನಾಡುವುದು ಸಹ ಒಂದು ಕಲೆ. ಸಂಕಷ್ಟದ ಸಮಯದಲ್ಲೂ ನಮ್ಮ ಜಾಣ್ಮೆಯ ಮಾತುಗಳು ನಮ್ಮನ್ನು ಕಾಪಾಡಬಲ್ಲವು. ಕೋಪದಲ್ಲಿದ್ದಾಗ ನಮ್ಮ ಮನಸ್ಸು ಸರಿ ಹಾಗೂ ತಪ್ಪುಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ.
Related Articles
Advertisement
ಹಾಗಾದರೆ ಏನು ಮಾಡಬೇಕು..?
ಕೋಪದಲ್ಲಿದ್ದಾಗ ಯಾವುದೇ ಪ್ರತಿಕ್ರಿಯೆ ಸಲಹೆಯನ್ನು ನೀಡಬಾರದು. ಬಿಟ್ಟ ಬಾಣ ಆಡಿದ ಮಾತು ಎಂದಿಗೂ ಹಿಂದಿರುಗುವುದಿಲ್ಲ. ಮಾತನಾಡುವ ಮುಂಚೆ ಅದರ ಪರಿಣಾಮಗಳನ್ನು ಯೋಚಿಸಿ ಮಾತನಾಡಬೇಕು. ಎದುರಿಗಿರುವವರು ಕೋಪ ಅಸಮಾಧಾನದಲ್ಲಿದ್ದಾಗ ಯಾವುದೇ ರೀತಿಯ ಮಾತುಗಳು ರುಚಿಸುವುದಿಲ್ಲ ಎನ್ನುವುದನ್ನು ತಿಳಿದುಕೊಂಡಿರಬೇಕು. ಮೇಲಿನ ಘಟನೆಗಳನ್ನು ತೆಗೆದುಕೊಂಡಾಗ, ನಮ್ಮ ಕೈಯೊ ಕಾಲೋ ಬೇರೆಯವರಿಗೆ ತಾಗಿದಾಗ, ಅಥವಾ ಅವರಿಂದ ನಮಗೆ ತಾಗಿದಾಗ ಸಾರಿ ಅಥವಾ ಒಂದು ಮುಗುಳುನಗೆ ಸಾಕು. ಮಗ ಅಥವಾ ಮಗಳು ಕಡಿಮೆ ಅಂಕಗಳನ್ನು ಪಡೆದಾಗ, ಕಾರಣಗಳನ್ನು ಹುಡುಕಿ, ನಿಧಾನವಾಗಿ ಸಮಾಧಾನ ಮಾಡುತ್ತಾ, ಮುಂದಿನ ಪರೀಕ್ಷೆಗಳನ್ನು ಎದುರಿಸಲು ಸಕಾರಾತ್ಮಕವಾಗಿ ಪ್ರೋತ್ಸಾಹಿಸುತ್ತಾ ಹುರಿದುಂಬಿಸಬೇಕು.
ಎಷ್ಟೇ ಒತ್ತಡದಲ್ಲಿದ್ದರೂ ಶಿಕ್ಷಕ ಪ್ರತಿ ವಿದ್ಯಾರ್ಥಿಯ ಪ್ರಶ್ನೆಗಳನ್ನು ಸಮಾಧಾನ ಚಿತ್ತದಿಂದ ಆಲಿಸುತ್ತ ಪರಿಹಾರಗಳನ್ನು ಸೂಚಿಸಬೇಕು. ಪ್ರಶ್ನಿಸುವ ಮನೋಭೂಮಿಕೆಯನ್ನು ಮಕ್ಕಳಿಗೆ ತಿಳಿಸುತ್ತಾ ಪ್ರೋತ್ಸಾಹಿಸಬೇಕು. ಒಮ್ಮೆ ಒಬ್ಬ ವಿದ್ಯಾರ್ಥಿಯ ಪ್ರಶ್ನಿಸುವ ಕೌಶಲವನ್ನು ಮೊಟುಕುಗೊಳಿಸಿದರೆ ಮುಂದೆಂದೂ ಆತ ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸಲಾರ ಎನ್ನುವ ಕನಿಷ್ಠ ತಿಳುವಳಿಕೆಯನ್ನು ಶಿಕ್ಷಕ ಹೊಂದಿರಬೇಕಾಗುತ್ತದೆ
“”ಏನ ಬಂದಿರಿ ಹದುಳವಿದ್ದಿರೇ? ಎಂದರೆ
ನಿಮ್ಮ ಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?” ಎಂಬ ಬಸವಣ್ಣನವರ ಪ್ರಶ್ನೆಯಲ್ಲಿ ಸಾಮಾನ್ಯ ದೈನಂದಿನ ವ್ಯವಹಾರಗಳಲ್ಲಿಯೂ ನಯ ವಿನಯವಿರಬೇಕೆಂಬ ಮಾರ್ಗದರ್ಶನವಿದೆ ಎಂಬುದನ್ನು ಅರಿಯೋಣ.
-ಕೆ.ಟಿ. ಮಲ್ಲಿಕಾರ್ಜುನಯ್ಯ ಸೀಗಲಹಳ್ಳಿ
ಶಿರಾ