Advertisement
ಸಾಂಪ್ರದಾಯಿಕವಾಗಿ ಇವುಗಳನ್ನು ದೈವಸ್ಥಾನಗಳಲ್ಲಿ, ದೇವಸ್ಥಾನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಹಾಡಲಾಗುತ್ತದೆ. ಪಾಡ್ದನಗಳಲ್ಲಿ ಶೌರ್ಯ, ತತ್ವ ಮತ್ತು ಶಕ್ತಿಯ ಕಥನಗಳನ್ನು ಉಲ್ಲೇಖಿಸಲಾಗಿದೆ. ಇಷ್ಟೊಂದ ಐತಿಹಾಸಿಕ ಪರಂಪರೆ, ಮಹತ್ವವುಳ್ಳ ಈ ಪಾಡ್ದನ ಪರಂಪರೆ ಈಗ ನಿಧಾನವಾಗಿ ನಶಿಸುತ್ತಿರುವುದು ಕಳವಳಕಾರಿ ಸಂಗತಿ. ಒಂದು ಕಾಲದಲ್ಲಿ ಪ್ರತೀ ಹಬ್ಬ, ಸಮಾರಂಭದಲ್ಲಿ ಅನಿವಾರ್ಯವಾಗಿದ್ದ ಪಾಡ್ದನಗಳಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿ ಕೇಳಿಬರುತ್ತಿವೆ. ಸಮಾಜದಲ್ಲಿನ ಬದಲಾವಣೆ, ಆಧುನೀಕರಣದ ಭರಾಟೆಯಿಂದ ಇವು ನಶಿಸುತ್ತಿದೆ ಎಂದರೆ ತಪ್ಪಿಲ್ಲ.
Related Articles
Advertisement
ಅವು ಕೃಷಿ ಚಟುವಟಿಕೆಗಳ ಮಹತ್ವವನ್ನು ವರ್ಣಿಸುತ್ತವೆ. ಹೊಲಗಳಲ್ಲಿ ನೇಜಿ ನೆಡುವ ಸಂದರ್ಭದಲ್ಲಿ ಒಬ್ಟಾಕೆ ಹಿರಿಯ ಕೆಲಸಗಾರ್ತಿ ಕಬಿತೆಯನ್ನು ಹಾಡಲು ಪ್ರಾರಂಭಿಸಿದಾಗ, ಇತರರು ಪುನರಾವರ್ತಿಸುತ್ತಾರೆ ಮತ್ತು ಹಾಡುತ್ತಾರೆ. ಓ ಬೇಲೆ ಮತ್ತು ಓ ಮಂಜೊಟ್ಟಿ ಗೊನ ಕೆಲವು ಜನಪ್ರಿಯ ಭತ್ತದ ಜಾನಪದ ಹಾಡುಗಳು. ಪ್ರಸ್ತುತ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭತ್ತ ಬೆಳೆಯುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ಅದರ ಜತೆಗೆ ಗದ್ದೆಗಳಲ್ಲಿ ಕೆಲಸ ಮಾಡುವವರ ಸಂಖ್ಯೆಯೂ ಕೂಡ.
ಪ್ರಸ್ತುತ ಡಿಜಿಟಲ್ ಕ್ರಾಂತಿಯು ಉತ್ತುಂಗದಲ್ಲಿರುವುದರಿಂದ ಹಲವು ಸಂಘಟನೆಗಳು, ಸಂಘಗಳು ಮತ್ತು ಸಂಗೀತ ವಿಭಾಗಗಳು ಈ ಪಾಡ್ದನಗಳನ್ನು ಸಂಗ್ರಹಿಸಲು, ದಾಖಲಿಸಲು ಮತ್ತು ಹಂಚಲು ಪ್ರಯತ್ನಿಸುತ್ತಿವೆ. ಇಂತಹ ಸಂಘಟನೆಗಳು ತುಳುವಿನಲ್ಲಿ ಪಾಡ್ದನಗಳ ಪ್ರಚಾರಕ್ಕಾಗಿ ಸ್ಪರ್ಧೆಗಳು, ಕಾರ್ಯಕ್ರಮಗಳು ಮತ್ತು ಶಿಬಿರಗಳನ್ನು ಆಯೋಜಿಸುತ್ತಿವೆ. ಸಾಮಾಜಿಕ ಮಾಧ್ಯಮಗಳು ಮತ್ತು ವೀಡಿಯೋ ಹಂಚಿಕೊಳ್ಳುವ ಇತರ ವೇದಿಕೆಗಳು ಪಾಡ್ದನಗಳನ್ನು ಸಾಮೂಹಿಕವಾಗಿ ಹರಡುವ ಪ್ರಯತ್ನ ಮಾಡಲಾಗುತಿದೆಯಾದರು, ಇವುಗಳ ಜತೆ ಪಾಡ್ದನಗಳ ಉಳಿವಿಗೆ ಇನ್ನಷ್ಟು ಕ್ರಮ ಕೈಗೊಳ್ಳುವ ಅಗತ್ಯವಿದೆ.
-ಅರ್ಚನಾ ಸಾಲ್ಯಾನ್
ಎಸ್ಡಿಎಂ, ಉಜಿರೆ