ಬಂಟ್ವಾಳ: ಲೊರೆಟ್ಟೊ ಮಾತಾ ಚರ್ಚ್‌ನ ವಾರ್ಷಿಕ ಹಬ್ಬದ ಪ್ರಯುಕ್ತ (ಸಾಂತ್ ಮಾರಿ) ಪರಮ ಪ್ರಸಾದದ ಮೆರವಣಿಗೆ ನ. 25ರಂದು ಭಕ್ತಿಪೂರ್ವಕವಾಗಿ ನಡೆಯಿತು. ಮಂಗಳೂರು ಧರ್ಮಪ್ರಾಂತದ ಫ್ಯಾಮಿಲಿ ಲೈಫ್ ಸರ್ವಿಸ್ ಸೆಂಟರ್ ಬಜೊjàಡಿ ನಿರ್ದೇಶಕ, ಪ್ರಧಾನ ಧರ್ಮಗುರು ವಂ| ಅನಿಲ್ ಡಿ’ಸೋಜಾ, ನೂರಾರು ಭಕ್ತರೊಂದಿಗೆ ಬಲಿಪೂಜೆಯನ್ನು ಅರ್ಪಿಸಿದರು.
ಚರ್ಚ್ ಧರ್ಮಗುರು ವಂ| ಎಲಿಯಸ್ ಡಿ’ಸೋಜಾ, ವಂ| ಜೋನ್ ಫೆರ್ನಾಂಡಿಸ್, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂ| ಮೈಕೆಲ್ ಸಂತುಮಾಯೆರ್ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಚರ್ಚ್‌ನಿಂದ ಆರಂಭಗೊಂಡ ಪರಮ ಪ್ರಸಾದದ ಮೆರವಣಿಗೆ ಬ್ಯಾಂಡ್ ವಾದ್ಯ, ಪಟಾಕಿಗಳ ಸಡಗರದೊಂದಿಗೆ ಲೊರೆಟ್ಟೊ ಅಂಚೆ ಕಚೇರಿಯಿಂದ ಲೊರೆಟ್ಟೊ ಪದವು ಮೂಲಕ ಚರ್ಚ್‌ಗೆ ಬಂದು ಸಮಾಪನಗೊಂಡಿತು. ಚರ್ಚ್ ವ್ಯಾಪ್ತಿಯ ಎಲ್ಲ ಕ್ರೈಸ್ತ ಕುಟುಂಬಗಳಿಗೆ ಗೌರವಪೂರ್ವಕವಾಗಿ ಮೇಣದ ಬತ್ತಿಯನ್ನು ವಿತರಿಸಲಾಯಿತು. ಡಿ. 2ರಂದು ಲೊರೆಟ್ಟೊ ಮಾತೆಯ ವಾರ್ಷಿಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುವುದು.
ಲಾವತೊ ಸಿ ಸಂಡೆ
ಕೆಥೊಲಿಕ್ ಜಗದ್ಗುರು ಪೋಪ್ ಫ್ರಾನ್ಸಿಸ್ ಸೂಚನೆಯ ಮೇರೆಗೆ ‘ಲಾವ್ದತೊ ಸಿ ಸಂಡೆ’ ಆಚರಣೆ ಮಾಡಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ಧರ್ಮ ಪ್ರಾಂತದ ವ್ಯಾಪ್ತಿಗೆ ಒಳಪಡುವ ಎಲ್ಲ ಚರ್ಚ್‌ಗಳಲ್ಲಿ ನ. 25ರಂದು ಸಾಗುವಾನಿ ಸಸಿ ನೆಡುವ ಕಾರ್ಯಕ್ರಮಕ್ಕೆ ಪೂರಕವಾಗಿ ಪ್ರಧಾನ ಧರ್ಮಗುರುಗಳು ಈ ಕಾರ್ಯಕ್ರಮವನ್ನು ಚರ್ಚ್‌ನಲ್ಲಿ ನೆರವೇರಿಸಿದರು.