Advertisement

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

10:39 PM Jan 05, 2025 | Team Udayavani |

ಮಂಗಳೂರು: ಮಂಗ ಳೂರು ಧರ್ಮಪ್ರಾಂತದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವ ಣಿಗೆ ಮಿಲಾಗ್ರಿಸ್‌ ಚರ್ಚ್‌ನಿಂದ ರೊಸಾರಿಯೋ ಕೆಥೆಡ್ರಲ್‌ ಚರ್ಚ್‌ ವರೆಗೆ ರವಿವಾರ ನಡೆದಿದ್ದು, ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

Advertisement

ಮೆರವಣಿಗೆಗೂ ಮೊದಲು ಮಿಲಾಗ್ರಿಸ್‌ ಚರ್ಚ್‌ನಲ್ಲಿ ಮಂಗಳೂರಿನ ಬಿಷಪ್‌ ಅ| ವಂ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅವರು ಸಾಮೂಹಿಕವಾಗಿ ಬಲಿಪೂಜೆ ನೆರವೇರಿಸಿ ಪ್ರವಚನ ನೀಡಿ, “ಸತ್ಯದ ಹುಡುಕಾಟದಲ್ಲಿ ಜ್ಞಾನಿಗಳ ಪಯಣ ನಮ್ಮ ಭರವಸೆಯ ಪಯಣದ ಆರಂಭ. ಆಧ್ಯಾತ್ಮಿಕ ಪಯಣಕ್ಕೆ ದಾರಿ. ಇದು ಪ್ರಪಂಚದ ನಿಜವಾದ ಬೆಳಕು ಯೇಸುವಿನ ಮೂಲಕ ಪರಿಪೂರ್ಣತೆಯನ್ನು ಕಂಡು ಕೊಳ್ಳುತ್ತದೆ. ಜ್ಞಾನಿಗಳ ಅಚಲವಾದ ನಂಬಿಕೆ ಮತ್ತು ನಮ್ರತೆಯನ್ನು ಪ್ರತಿಬಿಂಬಿಸುತ್ತಾ, ಅವರು ಕ್ರಿಸ್ತನನ್ನು ಅಂತಿಮ ಸತ್ಯವೆಂದು ಹುಡುಕಲು ಮತ್ತು ಅವರ ಜೀವನವನ್ನು ಮಾರ್ಗದರ್ಶನ ಮಾಡಲು ಮುಂದಾದರು. ಈ ಜಗತ್‌ ಜ್ಯೋತಿ ಕ್ರಿಸ್ತನ ಶಾಂತಿಯ ಬೆಳಕು ಎಲ್ಲೆಡೆ ಪಸರಬೇಕಾಗಿದೆ ಎಂದರು.

ಯೇಸುವಿನ ದೈವದರ್ಶನ ಮಹೋತ್ಸವದಂದು ಏರ್ಪಡಿಸಿದ ಮೆರವಣಿಗೆಯು ಯೇಸು ಕ್ರಿಸ್ತರು ತಮ್ಮನ್ನು ಹುಡುಕಿ ಬಂದ ಜ್ಞಾನಿಗಳಿಗೆ ತಮ್ಮ ಮೊದಲ ದೈವ ದರ್ಶನ ನೀಡಿದ ಘಟನೆಯನ್ನು ಸ್ಮರಿಸಲಾಯಿತು.
ಬಲಿಪೂಜೆ ಬಳಿಕ ಪವಿತ್ರ ಪರಮ ಪ್ರಸಾದದ ಮೆರವಣಿಗೆ ಮಿಲಾಗ್ರಿಸ್‌ ಚರ್ಚ್‌ನಿಂದ ಪ್ರಾರಂಭವಾಗಿ ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಹಂಪನಕಟ್ಟೆ, ಕ್ಲಾಕ್‌ ಟವರ್‌ ಸರ್ಕಲ್‌, ಎ.ಬಿ. ಶೆಟ್ಟಿ ಸರ್ಕಲ್‌, ನೆಹರೂ ವೃತ್ತದ ಮೂಲಕ ಸಾಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡವರು ದೇವರ ಆರಾಧನಾ ಸ್ತುತಿ ಹಾಡುತ್ತಿದ್ದರು. ಮೆರವಣಿಗೆಯು ರೊಸಾರಿಯೊ ಕೆಥೆಡ್ರಲ್‌ ಚರ್ಚ್‌ ಆವರಣದಲ್ಲಿ ಸಮಾಪನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next