Advertisement

Karavali Utsav: ಶ್ವಾನ ಪ್ರದರ್ಶನ, ಚಲನಚಿತ್ರೋತ್ಸವ, ಯುವಮನ

12:36 AM Dec 31, 2024 | Team Udayavani |

ಮಂಗಳೂರು: ನಗರದಲ್ಲಿ ಆರಂಭಗೊಂಡಿರುವ ಕರಾವಳಿ ಉತ್ಸವ- 2024ರ ಭಾಗವಾಗಿ ಚಲನಚಿತ್ರೋತ್ಸವ ಹಾಗೂ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದರು.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರೋತ್ಸ ವದ ಅಂಗವಾಗಿ ಸಿನೆಮಾಸಕ್ತರಿಗಾಗಿ ಜ. 2 ಮತ್ತು 3ರಂದು ಮಂಗಳೂರಿನ ಬಿಜೈ ಭಾರತ್‌ ಸಿನೆಮಾಸ್‌ನಲ್ಲಿ ಉಚಿತ ವಾಗಿ ಕನ್ನಡ, ತುಳು, ಕೊಂಕಣಿ ಸಿನೆಮಾ ಗಳು, ಕಿರು ಚಿತ್ರಗಳು ಪ್ರದರ್ಶನಗೊ ಳ್ಳಲಿವೆ. ಜ.2ರಂದು 10ಕ್ಕೆ ಕನ್ನಡದ “ಅರಿಷಡ್ವರ್ಗ’, 12.30ಕ್ಕೆ “19-20-21′ (ಕನ್ನಡ), 3.30ಕ್ಕೆ ರಾಜ್‌ಸೌಂಡ್ಸ್‌ ಆ್ಯಂಡ್‌ ಲೈಟ್ಸ್‌(ತುಳು), ಸಂಜೆ 6.30ಕ್ಕೆ ಮಧ್ಯಂ ತರ(ಕನ್ನಡ), ರಾತ್ರಿ 8ಕ್ಕೆ “ಕಾಂತಾರ’ (ಕನ್ನಡ) ಪ್ರದರ್ಶನಗೊಳ್ಳುವವು.

ಜ.3ರಂದು ಬೆಳಗ್ಗೆ 10.15ಕ್ಕೆ ಸಾರಾಂಶ(ಕನ್ನಡ) , 12.45ಕ್ಕೆ ತರ್ಪಣ(ಕೊಂಕಣಿ), ಮಧ್ಯಾಹ್ನ 3.15ಕ್ಕೆ ಶುದ್ಧಿ(ಕನ್ನಡ), ಸಂಜೆ 5.45ಕ್ಕೆ ಕುಬಿ ಮತ್ತು ಇಯಾಲ(ಕನ್ನಡ), ರಾತ್ರಿ 8ಕ್ಕೆ “ಗರುಡ ಗಮನ ವೃಷಭ ವಾಹನ'(ಕನ್ನಡ) ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಜ.5ಕ್ಕೆ ಶ್ವಾನ ಪ್ರದರ್ಶನ
ಜ.5ರಂದು ಕದ್ರಿ ಉದ್ಯಾನವನದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಶ್ವಾನಪಾಲಕರು ಪಾಲ್ಗೊಳ್ಳಲಿದ್ದಾರೆ.

ಲ್ಯಾಬ್ರಡಾರ್‌, ಗೋಲ್ಡನ್‌ ರಿಟ್ರಿವರ್‌, ಸೈಬೇರಿಯನ್‌ ಹಸ್ಕಿ, ಗ್ರೇಟ್‌ ಡೇನ್‌, ರಾಜಪಾಳ್ಯಂ, ಚಿನ್‌ಹುವ, ಮುಧೋಳ, ಬೆಲ್ಜಿಯನ್‌ ಮಲಿನಾಯ್ಸ ಈ ಭಾಗಕ್ಕೆ ಅಪರೂಪವೆನಿಸಿದ ಅಕಿಟಾ, ಚೌಚೌ, ಮಿನಿಯೇಚರ್‌ ಫಿಂಚರ್‌, ಮಿನಿ ಪಾಮ್‌ ಸಹಿತ ಸುಮಾರು 20ರಷ್ಟು ತಳಿಯ 200ಕ್ಕೂ ಅಧಿಕ ನಾಯಿಗಳು ಪ್ರದರ್ಶನದಲ್ಲಿ ಇರಲಿವೆ. ಮಧ್ಯಾಹ್ನ 1ರಿಂದ ನೋಂದಣಿ ಆರಂಭಗೊಂಡು ಸಂಜೆ 3ರಿಂದ 6ರ ವರೆಗೆ ಶ್ವಾನಪ್ರದರ್ಶನ ನಡೆಯಲಿದೆ. 3-6 ತಿಂಗಳು, 6ತಿಂಗಳಿಂದ-1 ವರ್ಷ, 1 ವರ್ಷ ಮೇಲ್ಪಟ್ಟು ವಿಭಾಗಗಳಲ್ಲಿ ಪ್ರದರ್ಶನ ನಡೆಯಲಿದೆ. ವಿಜೇತ ಶ್ವಾನಗಳಿಗೆ ನಗದು ನೀಡಲಾಗುವುದು.

Advertisement

ಯುವಜನರಿಗಾಗಿ ಯುವಮನ
ಕರಾವಳಿ ಉತ್ಸವದ ಭಾಗವಾಗಿ ಯುವಜನತೆಯ ಆಕರ್ಷಣೆಗಾಗಿ ಯುವ ಮನ ಎಂಬ ವಿಶೇಷ ಕಾರ್ಯಕ್ರಮ ಕದ್ರಿ ಪಾರ್ಕ್‌ನಲ್ಲಿ ಜ. 4 ಮತ್ತು 5ರಂದು ಜರಗಲಿದೆ. ಜ. 4ರಂದು ಸಂಜೆ 3ರಿಂದ 6ರ ವರೆಗೆ ಕಾರು ಮತ್ತು ಬೈಕ್‌ಗಳ ಪ್ರದರ್ಶನ ನಡೆಯಲಿದೆ. ಜ. 5ರಂದು ಬೆಳಗ್ಗೆ 7ರಿಂದ 8.30ರ ವರೆಗೆ ಜಿಲ್ಲೆಯ ವಯೋಲಿನ್‌ ವಾದಕರಿಂದ “ಉದಯ ರಾಗ’ ಎಂಬ ಕಾರ್ಯಕ್ರಮ ಕದ್ರಿ ಪಾರ್ಕ್‌ನವೇದಿಕೆಯಲ್ಲಿ ನಡೆಯಲಿದೆ. ಎರಡು
ದಿನ ಸಂಜೆ 5ರಿಂದ ಸಂಗೀತ ಕಾರ್ಯ ಕ್ರಮ ನಡೆಯಲಿದೆ ಎಂದು ಡಿಸಿ ಹೇಳಿದರು. ಎಸ್‌ಪಿ ಯತೀಶ್‌ ಎನ್‌., ಉಪನಿರ್ದೇಶಕ ಡಾ| ಅರುಣ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next