Advertisement
ಸಂಜೆ 5ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಿನೇಶ್, ಉ ಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾ ಯಾ ಲ ಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್, ನಟ ಉಪೇಂದ್ರ, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ,ಉದ್ಯಮಿಗಳಾದ ಮನೋಹರ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಶ್ರೀಪಾದರು 2025ರ ವಿಶ್ವಾವಸು ನಾಮ ಸಂವ ತ್ಸ ರದ ಶ್ರೀ ಪುತ್ತಿಗೆ ಮಠ ಪರ್ಯಾಯ ಪಂಚಾಂಗ ಬಿಡು ಗಡೆ ಮಾಡಲಿದ್ದಾರೆ. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
Related Articles
ಭಗವಂತ ಜಗತ್ತಿನ ಪೋಷಕ. ಅವನ ಮಾರ್ಗದರ್ಶನದಂತೆ ನಾವು ನಡೆಯಬೇಕು. ನಮ್ಮ ಉದ್ಧಾರಕ್ಕಾಗಿ ಶ್ರೀ ಕೃಷ್ಣ ನೀಡಿದ ಸಂದೇಶ ಪ್ರಚಾರಕ್ಕಾಗಿ ಭಗವದ್ಗೀತೆಯನ್ನು ಇನ್ನೊಬ್ಬರಿಗೆ ಕೊಡಬೇಕು. ಇದರಿಂದ ಆತೊ¾àದ್ಧಾರ, ಲೋಕೋದ್ಧಾರ, ಲೋಕಕಲ್ಯಾಣ ಹಾಗೂ ವಿಶ್ವಶಾಂತಿ ಸಾಧ್ಯ ಎಂದರು.
Advertisement
ಪೂಜೆ, ಜನಸೇವೆ, ಸಮಾಜ ಸೇವೆ ಮಾಡುವುದ ಕ್ಕಿಂತಲೂ ಹೆಚ್ಚು ಶ್ರೇಷ್ಠವಾದುದ್ದು ಭಗವದ್ಗೀತೆ ಪ್ರಚಾರ. ಭಗವದ್ಗೀತೆ ಪ್ರಚಾರಕ್ಕಿಂತ ಸತ್ಕಾರ್ಯ ಬೇರೊಂದಿಲ್ಲ. ಭಗವಂತನ ಸಂದೇಶ ಎಲ್ಲರಿಗೂ ತಲುಪಿಸುವುದು ಅತಿಮುಖ್ಯ ಎಂದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿದರು.
ಅನಿವಾಸಿ ಭಾರತೀಯರಾದ ಶ್ರೀಕಾಂತ್ ಜೋಷಿ, ವಿದ್ಯಾ ಜೋಷಿ ದಂಪತಿಗೆ ಶ್ರೀಪಾದರು ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಅನುಗ್ರಹಿಸಿದರು.
ಅನಿವಾಸಿ ಭಾರತೀಯರಾದ ಪ್ರಹ್ಲಾದ ಹಾಗೂ ಈಶನ್ ಭಗವದ್ಗೀತೆಯ ಕುರಿತು ಮಾತನಾಡಿದರು.ಆಂಧ್ರಪ್ರದೇಶದ ಶಾಸಕ ವೆಂಕಟ ಪ್ರಸಾದ್, ಭಗವದ್ಗೀತೆ ಪ್ರಚಾರಕಿ ಎ.ಎ.ಪಾರ್ವತಿ, ಅನಿವಾಸಿ ಭಾರತೀಯರಾದ ಮಹೇಶ್, ರೇಣುಕಾ ದಂಪತಿ ಉಪಸ್ಥಿತರಿದ್ದರು. ಯೋಗೀಂದ್ರ ಭಟ್ ಉಳಿ ನಿರೂಪಿಸಿದರು.