Advertisement
ಭಾರೀ ವಾಹನಗಳಿಂದಾಗಿ ಕಲ್ಲಡ್ಕ, ಪಂಪ್ವೆಲ್, ನಂತೂರು, ಕೂಳೂರು, ಪಣಂಬೂರು, ಉಡುಪಿಯ ಕಲ್ಸಂಕ, ಸಂತಕಟ್ಟೆಯಲ್ಲಿ ಆಗಾಗ್ಗೆ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಸ್ಮಸ್ ರಜೆಯ ದಿನ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದರು. ಇಲ್ಲಿಗೆ ಕಳೆದ 4 ದಿನಗಳಿಂದ ಅಧಿಕ ಭಕ್ತರು ಆಗಮಿಸಿದ್ದರು. ಸರದಿ ಸಾಲಿನಲ್ಲಿ ಸಾಗಿ ಬಂದು ಭಕ್ತರು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇಗುಲದ ಹೊರಾಂಗಣದಲ್ಲಿ 8 ಸಾಲುಗಳಲ್ಲಿ ಭಕ್ತರು ಸರದಿ ನಿಂತರು. ಷಣ್ಮುಖ ಪ್ರಸಾದ ಭೋಜನ ಶಾಲೆ, ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಯಿತು.
Related Articles
ಉಡುಪಿ ಜಿಲ್ಲೆಯ ವಿವಿಧ ದೇಗುಲ, ಮಲ್ಪೆ ಬೀಚ್ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಬುಧವಾರ ಜನ ಸಂದಣಿ ಹೆಚ್ಚಿದೆ.
Advertisement
ಉಡುಪಿ ಶ್ರೀ ಕೃಷ್ಣಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ಭಕ್ತರ ಈ ತಿಂಗಳ ಆರಂಭದಿಂದಲೇ ಹೆಚ್ಚಾಗಿದೆ. ಹಾಗೆಯೇ ಮಲ್ಪೆ, ಮರವಂತೆ, ಕಾಪು, ಪಡುಬಿದ್ರಿ, ಬೈಂದೂರು ಸೋಮೇಶ್ವರ ಬೀಚ್ಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ದೇವಸ್ಥಾನಗಳಲ್ಲಿ ದರ್ಶನಕ್ಕೆ ಭಕ್ತರು ಸರತಿ ಸಾಲು ಕಾಣಸಿಗುತ್ತಿದೆ. ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ಹೆಚ್ಚಿದ್ದು, ಟ್ರಾಫಿಕ್ ಸಮಸ್ಯೆಯೂ ಅಲ್ಲಲ್ಲಿ ಕಂಡು ಬರುತ್ತಿದೆ. ಒಟ್ಟಾರೆಯಾಗಿ ವರ್ಷಾಂತ್ಯದಲ್ಲಿ ಉಡುಪಿಯ ದೇವಸ್ಥಾನ, ಪ್ರವಾಸಿ ತಾಣಗಳಿಗೆ ಬರುವ ಭಕ್ತರು, ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ.