Advertisement

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

08:33 AM Dec 28, 2024 | Team Udayavani |

ಶಿಲ್ಲಾಂಗ್‌: ಈಶಾನ್ಯ ರಾಜ್ಯ ಮೇಘಾಲಯದ ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯ ಮಾಲಿನಾಂಗ್‌ ಗ್ರಾಮದ ಚರ್ಚ್‌ ಒಳಗೆ ಅಕ್ರಮವಾಗಿ ಪ್ರವೇಶಿಸಿ “ಜೈ ಶ್ರೀರಾಂ’ ಎಂದು ಘೋಷಣೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಕೃತ್ಯವೆಸಗಿದ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಕೂಗಿದ್ದನ್ನು ಅಪ್‌ಲೋಡ್‌ ಮಾಡಿದ್ದಾನೆ.

Advertisement

ಏಷ್ಯಾದಲ್ಲಿಯೇ ಅತ್ಯಂತ ನೈರ್ಮಲ್ಯಯುತ ಗ್ರಾಮ ಎಂಬ ಖ್ಯಾತಿಗೆ ಪಾತ್ರವಾಗಿರುವ ಮಾಲಿನಾಂಗ್‌ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ಸ್ಥಳೀಯರ ಆಘಾತಕ್ಕೆ ಕಾರಣವಾಗಿದೆ.

ಎಸ್‌ಪಿ ಸಿಲ್ವೆಸ್ಟರ್‌ ನಾನ್‌ಟೆಂಗರ್‌ ಮಾತನಾಡಿ “ಕೃತ್ಯವೆಸಗಿದ ವ್ಯಕ್ತಿಯನ್ನು ಆಕಾಶ್‌ ಸಾಗರ್‌ ಎಂದು ಗುರುತಿಸಲಾಗಿದೆ. ಆತ ಇನ್‌ಸ್ಟಾಗ್ರಾಂನಲ್ಲಿ ಘಟನೆಯ ಬಗ್ಗೆ ವಿವರಗಳನ್ನು ಅಪ್‌ ಲೋಡ್‌ ಮಾಡಿದ್ದಾನೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಸಿಎಂ ಘಟನೆ: ಮೇಘಾಲಯ ಸಿಎಂ ಕೊನ್ರಾಡ್‌ ಸಂಗ್ಮಾ ಘಟನೆಯನ್ನು ಖಂಡಿಸಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ರಾಜ್ಯದಲ್ಲಿನ ಸೆಂಟ್ರಲ್‌ ಪೂಜಾ ಕಮಿಟಿ ಎಂಬ ಹಿಂದೂ ಸಂಘಟನೆಯೂ ಘೋಷಣೆ ಕೂಗಿದ್ದನ್ನು ಖಂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next