Advertisement

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

11:57 PM Dec 29, 2024 | Team Udayavani |

ಉಡುಪಿ: ಶ್ರೀಕೃಷ್ಣನ ಸಾನ್ನಿಧ್ಯ ಭಗವದ್ಗೀತೆಯಲ್ಲಿದೆ. ಭಗವದ್ಗೀತೆಯ ಜಾಗೃತಿ ವಿಶ್ವಮಟ್ಟದಲ್ಲಿ ಆಗಬೇಕೆಂಬ ನಿಟ್ಟಿನಲ್ಲಿ ಶ್ರೀಕೃಷ್ಣ ಮಠದಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಸಾಮಾನ್ಯ ಜನರೂ ಭಗವದ್ಗೀತೆಯ ಸಂದೇಶಗಳನ್ನು ತಿಳಿದುಕೊಳ್ಳುತ್ತಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

Advertisement

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದಲ್ಲಿ ರವಿವಾರ ಜರಗಿದ ಬೃಹತ್‌ ಗೀತೋತ್ಸವದ ಮಂಗಳ್ಳೋತ್ಸವದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.

ಭಗವದ್ಗೀತೆಯ ಪ್ರಭಾವ ಏನೆಂಬುದನ್ನು ಎಲ್ಲರೂ ತಿಳಿದುಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಿಗೂ ಇದರ ಮಹತ್ವ ತಿಳಿದಿದೆ. ಜ್ಞಾನಿಗಳಿಂದ ಹಿಡಿದು ಸಾಮಾನ್ಯರು, ವಿದೇಶಿಗರು, ಅನ್ಯಧರ್ಮಿಯರು ಕೂಡ ಕೋಟಿ ಗೀತಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದಕ್ಕೆಲ್ಲ ಸಾಕ್ಷಿಯಾಗಿದೆ ಎಂದರು.

ಜಗತ್ತಿಗೆ ಒಳಿತಾಗುವ ನಿಟ್ಟಿನಲ್ಲಿ ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ಮಾರ್ಗದರ್ಶನ ಹಾಗೂ ಸಂದೇಶ ನೀಡಿದ್ದಾನೆ. ಈ ಸಂದೇಶ ಜಗತ್ತಿನ ಎಲ್ಲ ವ್ಯಕ್ತಿಗಳಿಗೂ ಸಂಬಂಧಪಟ್ಟಿದೆ. ಭಗವದ್ಗೀತೆಯ ಅಂಶಗಳೇ ಅಂತಿಮ ತೀರ್ಪಾಗಿದೆ ಎಂದರು.

Advertisement

ಭಗವದ್ಗೀತೆ, ನ್ಯಾಯಾಂಗ ಅಗತ್ಯ
ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ದಿನೇಶ್‌ ಪಿ.ಎಸ್‌.ಮಾತನಾಡಿ, ಸನಾತನ ಧರ್ಮದಂತೆ ಕಾರ್ಯಾಂಗ ನಡೆಯುತ್ತಿದೆ. ಭಗವದ್ಗೀತೆ ಮತ್ತು ನ್ಯಾಯಾಂಗದ ಅಗತ್ಯ ಬಹಳಷ್ಟಿದೆ. ವರ್ತಮಾನದ ಸ್ಥಿತಿಯಲ್ಲಿ ಕಾನೂನು ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳು ಕಾನೂನು ಪ್ರಕಾರವಾಗಿ ನಡೆಯುತ್ತಿದೆ. ಈಗ ನಡೆಯುತ್ತಿರುವುದು ಸಂವಿಧಾನದ ಅಡಿಯಲ್ಲಿ ಬರುವ ಕಾನೂನು. ಭಗವದ್ಗೀತೆ ಮಹಾಭಾರತದ ಒಂದು ಅಂಗವಾಗಿದೆ. ಭಗವದ್ಗೀತೆಯ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಜನರು ತಮ್ಮ ಪ್ರತಿಭೆಯನ್ನು ಜಾಗೃತಗೊಳಿಸಬೇಕು ಎಂದರು.

ಡಾ| ಎಂ.ಎನ್‌.ದಯಾಕರ್‌ ಉಜಿರೆ ಹಾಗೂ ಪುಣೆಯ ಹರಿ ಬಾಲಕೃಷ್ಣ ಜನಿ ಅವರಿಗೆ ಪರ್ಯಾಯ ಶ್ರೀಪಾದರು ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯನ್ನು ಪ್ರದಾನಿಸಿದರು.

2025ರ ವಿಶ್ವಾವಸು ನಾಮ ಸಂವತ್ಸರದ ನೂತನ ಶ್ರೀ ಪುತ್ತಿಗೆ ಮಠ ಪರ್ಯಾಯ ಪಂಚಾಂಗವನ್ನು ಪುತ್ತಿಗೆ ಶ್ರೀಪಾದರು ಬಿಡುಗಡೆಗೊಳಿಸಿದರು. ಪರ್ಯಾಯ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಶಾಸಕರಾದ ಯಶ್‌ಪಾಲ್‌ ಎ.ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ್‌ ಶೆಟ್ಟಿ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next