Advertisement
ಈ ಭೂಮಿಯ ಮೇಲೆ ಕೆಡುಕು ಎನ್ನುವುದೆಲ್ಲವೂ ನಾವು ಸುಖ -ಸಂತೋಷ ಗಳನ್ನು ಗಳಿಸುವ ಪ್ರಯತ್ನದಲ್ಲಿ ಹುಟ್ಟಿ ಕೊಂಡಂಥವು. ನಾವು ನಮಗಾಗಿ ಸುಖ – ಸಂತೋಷಗಳನ್ನು ಪಡೆಯಲು ನಡೆಸುವ ಪ್ರಯತ್ನವೇ ಅತ್ಯಂತ ದೊಡ್ಡ ಕೆಡುಕು. ಸುಖವನ್ನು, ಸಂತೋಷಕ್ಕಾಗಿ ನಮ್ಮಷ್ಟಕ್ಕೆ ನಾವು “ಇದು ಸರಿ’ ಎಂದುಕೊಂಡು ಅನೇಕ ಪ್ರಯತ್ನಗಳನ್ನು ನಡೆಸುತ್ತೇವೆ. ಅವು ಇನ್ನೊಬ್ಬರಿಗೆ ತಪ್ಪಾಗಿರಬಹುದು, ಕೆಡುಕಾ ಗಿರಬಹುದು. ಅಪರಾಧಿ ಎಂದು ನಾವು ಕರೆಯುವ ಮನುಷ್ಯನೂ ಆ ಕೃತ್ಯಗಳನ್ನು ನಡೆಸುವುದು ಸುಖ – ಸಂತೋಷಗಳ ಗಳಿಕೆಗಾಗಿಯೇ. ಆತ ಅತ್ಯಂತ ಕ್ಷಿಪ್ರವಾಗಿ ಸುಖ ಪಡೆಯಲು ಬಯಸಿದ್ದಾನೆ. ಹಾಗಾಗಿ ಅಸಂತೋಷ ದಾಯಕ ಪರಿಣಾಮಗಳು ಉಂಟಾಗಿವೆ. ನಾವು 30 ದಿನ ಕೆಲಸ ಮಾಡಿ ವೇತನ ಪಡೆಯುತ್ತೇವೆ. ಆದರೆ ನಾವು ಅಪರಾಧಿ ಎಂದು ಕರೆಯುವ ವ್ಯಕ್ತಿ ಅಷ್ಟು ಹಣವನ್ನು ಹತ್ತೇ ನಿಮಿಷಗಳಲ್ಲಿ ಗಳಿಸಲು ಉದ್ದೇಶಿಸಿರುತ್ತಾನೆ. ಸುಖಕ್ಕಾಗಿ ಅವನ ಹಂಬಲ 30 ದಿನ ಕಾಯಲು ಅಸಾಧ್ಯವೆನಿಸುವಂಥದ್ದು – ಇದನ್ನು ಅಪರಾಧ ಎಂದು ಕರೆಯುತ್ತೇವೆ.
Related Articles
Advertisement
ಸಮಸ್ಯೆ ಏನು ಎಂದರೆ, ನಮಗೆ ಗೊತ್ತಿಲ್ಲದೆಯೇ ಇರುವ ಎಷ್ಟೋ ಸಂಗತಿ ಗಳನ್ನು ನಾವು ನಂಬಿ ಬಿಡುತ್ತೇವೆ. “ನನಗೆ ಗೊತ್ತಿರುವುದು ಮಾತ್ರ ನನಗೆ ಗೊತ್ತಿದೆ, ನನಗೆ ಗೊತ್ತಿಲ್ಲದೆ ಇರುವುದು ಗೊತ್ತಿಲ್ಲ’ ಎಂಬ ಪ್ರಾಂಜಲ ಮನಃಸ್ಥಿತಿ ಉಂಟಾದರೆ ಯಾರ ಜತೆಗೂ ಹೋರಾಟ ಇರುವುದಿಲ್ಲ. ಅದು ಬಿಟ್ಟು ಯಾವುದೋ ಒಂದನ್ನು ಸರಿ ಎಂದು ಕೊಂಡರೆ ಇನ್ನೊಬ್ಬರು ಅದು ತಪ್ಪು ಎನ್ನುತ್ತಾರೆ. ಈ ಜಗಳಕ್ಕೆ ಕೊನೆಯೇ ಇರುವುದಿಲ್ಲ.
ಯುದ್ಧ, ಜಗಳ, ಹಿಂಸೆ ತಾನಾಗಿ ಜನ್ಮ ತಾಳುವುದಿಲ್ಲ; ಯಾರಧ್ದೋ ಸುಖ – ಸಂತೋಷಕ್ಕಾಗಿ ಆರಂಭವಾಗುತ್ತವೆ. ಸುಖ – ಸಂತೋಷಗಳನ್ನು ಹೊರಗೆ ಹುಡು ಕಾಡದೆ ಅವು ನಮ್ಮೊಳಗೆಯೇ ಉದಿಸು ವಂತಾದರೆ “ಅಪರಾಧ’ ಯಾವುದೇ ರೂಪ ದಲ್ಲಿ ನಮ್ಮಿಂದ ಘಟಿಸಲಾರದು.