Advertisement
2024ರ ಡಿಸೆಂಬರ್ ಅಂತ್ಯದೊಳಗೆ ಉಡುಪಿ ನಗರಕ್ಕೆ ವಾರಾಹಿ ನೀರು ತರುವುದು ಮತ್ತು ದಿನದ 24 ಗಂಟೆಯೂ ನಿರಂತರ ನೀರು ಪೂರೈಕೆಯ ಬಗ್ಗೆ ಈ ಹಿಂದೆ ಘೋಷಣೆ ಮಾಡಲಾಗಿತ್ತು. ಗಡುವು ಮೀರುತ್ತಿದ್ದು, ಇದೀಗ 2025ರ ಮಾರ್ಚ್ ವೇಳೆಗೆ ಒಂದು ಹಂತದ ಕಾಮಗಾರಿ ಪೂರ್ಣಗೊಂಡು ಅನಂತರ ನೀರು ಪೂರೈಕೆ ಪ್ರಕ್ರಿಯೆ ಶುರುವಾಗಲಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು.
Related Articles
ನಗರದ ಒಳಗೆ ಪೈಪ್ಲೈನ್ ಮುಖ್ಯ ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಇದೀಗ ಓವರ್ಹೆಡ್ ಟ್ಯಾಂಕ್ ಮತ್ತು ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಅಲ್ಲಲ್ಲಿ ಅಗೆಯುವುದು ಅನಿವಾರ್ಯವೂ ಆಗಿದೆ. ಮಾರ್ಚ್ ಅಂತ್ಯದೊಳಗೆ ಈ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಮೊದಲ ಹಂತದಲ್ಲಿ 20 ಎಂಎಲ್ಡಿಈಗಾಗಲೇ ಬಹುತೇಕ ಮನೆ, ಕಟ್ಟಡಗಳಿಗೆ ನೀರಿನ ಹೊಸ ಮೀಟರ್ ಅಳವಡಿಕೆ ಮಾಡಲಾಗಿದೆ. ಎಂಜಿಎಂ ಕಾಲೇಜು ಎದುರು, ಕುಂಜಿಬೆಟ್ಟು, ಕಡಿಯಾಳಿ, ಕಲ್ಸಂಕ ಭಾಗದಲ್ಲಿ ಈಗ ಕಾಮಗಾರಿ ನಡೆಯುತ್ತಿದೆ. ಕಿನ್ನಿಮೂಲ್ಕಿಯಲ್ಲೂ ಇದೇ ಕಾಮಗಾರಿ ಮುಂದುವರಿದಿದೆ. ಈ ಮಧ್ಯೆ ಜನವರಿ ಮೊದಲ ವಾರದಲ್ಲಿ ನಗರಕ್ಕೆ ಸುಮಾರು 20 ಎಂಎಲ್ಡಿ ವಾರಾಹಿ ನೀರು ಹರಿಸಲು ಎಂಜಿನಿಯರ್ಗಳು ಸಜ್ಜಾಗಿದ್ದಾರೆ. ಕಿರಿಕಿರಿ ತಪ್ಪಿಸಿ
ವಾರಾಹಿ ಕಾಮಗಾರಿ ನಗರದಲ್ಲಿ ವರ್ಷದಿಂದ ಆಗುತ್ತಿದೆ. ಒಂದು ಪ್ರದೇಶದಲ್ಲಿ ಕಾಮಗಾರಿ ಆಗುತ್ತಿದ್ದಂತೆ ಅದನ್ನು ಪೂರ್ಣ ಪ್ರಮಾಣದಲ್ಲಿ ಸರಿಪಡಿಸಿ ಅನಂತರ ಮುಂದುವರಿಸಬೇಕು. ಆದರೆ, ಈ ಕಾಮಗಾರಿಯಲ್ಲಿ ಹಾಗಾಗುತ್ತಿಲ್ಲ. ಅಲ್ಲಲ್ಲಿ ಅಗೆದು ಸ್ಥಳೀಯರಿಗೆ ಸಮಸ್ಯೆ ನೀಡಲಾಗುತ್ತಿದೆ. ಸರಿಯಾಗಿ ಮುಚ್ಚುವುದೂ ಇಲ್ಲ. ರಸ್ತೆ ಮಧ್ಯದಲ್ಲಿ ಹೊಂಡ ಬಿದ್ದಿರುತ್ತದೆ. ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗವನ್ನು ಪೂರ್ಣ ಅಗೆದು ಅರ್ಧಂಬರ್ದ ಮುಚ್ಚುತ್ತಾರೆ. ಮುಖ್ಯರಸ್ತೆ ಹಾಗೂ ಒಳರಸ್ತೆಗಳಲ್ಲೂ ಈ ಸಮಸ್ಯೆಯಿದೆ. ಇದು ಸ್ಥಳೀಯರಿಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ. ಅಲ್ಲಲ್ಲಿ ಸಂಪರ್ಕ
ವಾರಾಹಿ ಯೋಜನೆಯಡಿ ಜನವರಿ ಮೊದಲ ವಾರದಲ್ಲಿ ನಗರಕ್ಕೆ 20 ಎಂಎಲ್ಡಿ ನೀರು ಪೂರೈಕೆ ಮಾಡ ಲಿದ್ದೇವೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣ ಗೊಳಿಸುವ ಉದ್ದೇಶದಿಂದ ಅಲ್ಲಲ್ಲಿ ಸಂಪರ್ಕ ಪ್ರಕ್ರಿಯೆಗಳನ್ನು ನಡೆಸುತ್ತಿದ್ದೇವೆ.
-ಅರ್ಕೇಶ್ ಗೌಡ, ಎಇಇ, ವಾರಾಹಿ ಯೋಜನೆ