Advertisement

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

06:20 PM Jan 05, 2025 | Team Udayavani |

ಕಲಾಸ್ಪಂದನ; ಸಾಂಸ್ಕೃತಿಕ ಹಾಗೂ ಬೌದ್ಧಿಕ ವಿಕಾಸಕ್ಕಾಗಿ ಹುಟ್ಟಿಕೊಂಡ ಸಂಸ್ಥೆ. ಈ ಸಂಸ್ಥೆಯ 29 ನೇ ವಾರ್ಷಿ ಕೋತ್ಸವದ ಸಂದರ್ಭದಲ್ಲಿ ಪ್ರದರ್ಶನ ಗೊಂಡ ಒಂದು ವಿಶಿಷ್ಟ ಪ್ರಯೋಗ ಯಕ್ಷ ವೀಣಾ. ಇದರೊಂದಿಗೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಛಾತ್ರ ವೀಣಾ. ಹಾಗಾಗಿ ಇದು ಛಾತ್ರವೀಣಾ -ಯಕ್ಷ ವೀಣಾ. ಡಾ| ಪಳ್ಳತಡ್ಕ ಕೇಶವ ಭಟ್‌ ಮೆಮೋರಿ ಯಲ್‌ ಟ್ರಸ್ಟ್‌ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮ.

Advertisement

ಯಕ್ಷವೀಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಕಿದಿಯೂರಿನ ಯಕ್ಷ ಆರಾಧನಾ ಟ್ರಸ್ಟ್‌. ಪ್ರದರ್ಶನಗೊಂಡ ಪ್ರಸಂಗದ ಹೆಸರು ಸಾಲ್ವ ಶೃಂಗಾರ. ಯಕ್ಷಗಾನದೊಂದಿಗೆ ವೀಣೆಯ ಸಾಂಗತ್ಯವೇ ಪ್ರದರ್ಶನದ ವಿಶೇಷತೆ. ಪಾತ್ರಧಾರಿಗಳ ನೃತ್ಯ, ಅಭಿನಯಗಳೇ ಸಂವಹನದ ಪ್ರಧಾನ ಅಂಗ. ಮಾತು ಗಳಿಗೆ ಅವಕಾಶವಿಲ್ಲ. ಹಾಗಾಗಿ ಯಕ್ಷ ನೃತ್ಯ ರೂಪಕ. ನೃತ್ಯ ಹಾಗೂ ಅಭಿನಯಕ್ಕೆ ಪೂರಕವಾಗಿ ಯಕ್ಷಗಾನ ಹಿಮ್ಮೇಳ. ಇದರೊಂದಿಗೆ ವಿನೂತನವಾಗಿ ವೀಣಾವಾ ದನ. ಯಕ್ಷಗಾನದ ಲಯಕ್ಕೆ ಹೊಂದಿಸಿಕೊಂಡು ವೀಣೆಯನ್ನು ನುಡಿಸುವುದು ಸುಲಭದ ಕೆಲಸವಲ್ಲ. ಯಕ್ಷಗಾನದ ಲಯದ ಪರಿಚಯ ವೀಣಾವಾದಕರಿಗೆ ಇರಬೇಕು. ಈ ನಿಟ್ಟಿನಲ್ಲಿ ವೀಣಾವಾದಕಿ, ವಿ| ಪವನ ಬಿ. ಆಚಾರ್ಯ ಅವರ ಶ್ರಮ ಸ್ತುತ್ಯರ್ಹ.

ಯಕ್ಷಗಾನ ಹಿಮ್ಮೇಳ
ದಲ್ಲಿ ಭಾಗವತರಾಗಿ ಕೆ.ಜೆ. ಗಣೇಶ್‌ ಸುಶ್ರಾವ್ಯವಾಗಿ ಹಾಡಿದ್ದಾರೆ. ವೀಣಾ ವಾದನದ ಶ್ರುತಿಗೆ ಮೇಳೈಸಿಕೊಂಡು ಯಕ್ಷ ಗಾಯನದ ಅಂದಗೆಡಿಸದೇ ಹಾಡಿದ ರೀತಿ ಗಮನಾರ್ಹ. ಮದ್ದಳೆ ಹಾಗೂ ಚೆಂಡೆಯಲ್ಲಿ ಕೆ.ಜೆ. ಸುಧೀಂದ್ರ ಹಾಗೂ ಕೆ.ಜೆ.ಕೃಷ್ಣರು ಭಾಗವತರ ಮನೋಧರ್ಮಕ್ಕೆ ಅನುಗುಣವಾಗಿ ರಂಗಕ್ರಿಯೆಗೆ ಇವರ ನುಡಿತ ಅನನ್ಯವಾಗಿತ್ತು. ಸಾಲ್ವನಾಗಿ ದೀಪ್ತ ಆಚಾರ್ಯ ಹಾಗೂ ಅಂಬೆಯಾಗಿ ಅನನ್ಯ ಭಟ್‌ ಅವರ ಹಿತಮಿತ ಅಭಿನಯ, ಕುಣಿತ ಪ್ರೇಕ್ಷಕರಿಗೆ ಖುಷಿ ಕೊಟ್ಟಿತು. ಮೃದಂಗ ವಾದನದಲ್ಲಿ ಡಾ| ಬಾಲಚಂದ್ರ ಆಚಾರ್‌ ಸಹಕರಿಸಿದರು.

ಯಕ್ಷಗಾನವು ಹಿಂದಿನಿಂದಲೂ ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದೆ. ಇದು ಈ ಕಲೆಯ ವಿಶಿಷ್ಟ ಗುಣ. ಕಲಾವಿದರ ಹಾಗೂ ನಿರ್ದೇಶಕರ ಸೃಜನ ಶೀಲತೆ ಇಲ್ಲಿ ಮುಖ್ಯ. ಯಕ್ಷಗಾನದ ಮೂಲ ಸೌಂದರ್ಯಕ್ಕೆ ಧಕ್ಕೆ ಒದಗ ದಂತೆ ನಡೆಸುವ ಹೊಸ ಪ್ರಯೋಗ ಸ್ವಾಗತಾರ್ಹ. ಯಕ್ಷ ವೀಣಾ ಪ್ರಯೋಗ ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನ. ಯಕ್ಷ ಗಾನಕ್ಕೆ ಹೊಂದಿಕೊಂಡು ಮೂಡಿಬಂದ ವೀಣಾವಾದನ ಯಕ್ಷಗಾನದ ಸೌಂದರ್ಯಕ್ಕೆ ವಿಶೇಷ ಮೆರುಗು ನೀಡಿದೆ. ಈ ನಿಟ್ಟಿನಲ್ಲಿ ಶ್ರಮಿಸಿದ ಕಲಾವಿದರು ಅಭಿನಂದನಾರ್ಹರು.

ಶ್ರೀಕಾಂತ ಸಿದ್ದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next