Advertisement

Election ನಿಯಮಕ್ಕೆ ತಿದ್ದುಪಡಿ: ಕೇಂದ್ರದ ಚಿಂತನೆಗೆ ಕಾಂಗ್ರೆಸ್‌ ಕಿಡಿ

02:06 AM Dec 22, 2024 | Team Udayavani |

ಹೊಸದಿಲ್ಲಿ: ಚುನಾವಣ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಕೆಲವೊಂದು ಎಲೆಕ್ಟ್ರಾನಿಕ್‌ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡುವ ನಿಯಮದಲ್ಲಿ ಬದಲಾವಣೆ ತರಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಸಿಸಿಟಿವಿ ಕೆಮರಾ, ವೆಬ್‌ಕಾಸ್ಟಿಂಗ್‌, ಅಭ್ಯರ್ಥಿಗಳಿಗೆ ಸಂಬಂಧಿಸಿದ ವೀಡಿಯೋ ದೃಶ್ಯಾವಳಿಗಳನ್ನು ನೀಡುವ ನಿಯಮಕ್ಕೆ ತಿದ್ದುಪಡಿ ತರಲು ಆಯೋಗ ಶಿಫಾರಸು ಮಾಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎಲೆಕ್ಟ್ರಾನಿಕ್‌ ದಾಖಲೆಗಳನ್ನು ನೀಡುವುದರಿಂದ ಅದು ಚುನಾವಣೆಯ ಪಾವಿತ್ರ್ಯತೆ, ಸುರಕ್ಷತೆ ಜತೆೆ ರಾಜಿ ಮಾಡಿ­ಕೊಂಡಂತಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕೋರ್ಟಲ್ಲಿ ಪ್ರಶ್ನೆ: ನಿಯಮ ಬದಲು ಮಾಡಿದ್ದಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಸರಕಾರದ ನಿಲುವನ್ನು ಕಾನೂನಾತ್ಮಕವಾಗಿಯೇ ಪ್ರಶ್ನಿಸಲಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಚುನಾವಣ ಪ್ರಕ್ರಿಯೆಯನ್ನು ಹಾಳು ಗೆಡವಲಾಗುತ್ತಿದೆ ಎಂಬ ನಮ್ಮ ಆರೋಪಕ್ಕೆ ಇದು ನಿದರ್ಶನ ಎಂದು ಹೇಳಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕೆಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಆದೇಶಿಸಿದ್ದರೂ, ಸರಕಾರ ಅದನ್ನು ಉಲ್ಲಂಘಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next