Advertisement
ನಾಗರಿಕರ ಅಹವಾಲುಗಳನ್ನು ಆಲಿಸಿದ ಅಧ್ಯಕ್ಷ ಬಿ.ವಾಸು ಪೂಜಾರಿ ಅವರು ತಮ್ಮ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ಮಾಡುವ ಜತೆಗೆ ಸಾಧ್ಯವಾಗುವುದನ್ನು ಬಜೆಟ್ನಲ್ಲಿ ಸೇರಿಸಿ ಅನುದಾನ ಮೀಸಲಿರಿಸಲಾಗುವುದು ಎಂದರು.
Related Articles
ಬಿ.ಸಿ.ರೋಡು ಸಂತೆಯ ಕುರಿತು ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಪ್ರಸ್ತಾವಿಸಿ, ನಗರದಲ್ಲಿ ನಿಯಮವಿಲ್ಲದ ಬೀದಿ ಬದಿ ವ್ಯಾಪಾರದಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುವ ಜತೆಗೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಹಿಂದೆ ವಾರಕ್ಕೊಮ್ಮೆ ನಡೆಯುತ್ತಿದ್ದ ವ್ಯಾಪಾರ ಪ್ರಸ್ತುತ ನಿತ್ಯವೂ ನಡೆಯುತ್ತಿದೆ. ನಗರ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿ ವಲಯ ಇರಬೇಕಿದ್ದು, ಆದರೆ ಇಲ್ಲಿ ಇಲ್ಲವಾಗಿದೆ. ಬೀದಿ ಬದಿ ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.
Advertisement
ಬಂಟ್ವಾಳ ಪೇಟೆ ಅಭಿವೃದ್ಧಿಗೆ ಮಲತಾಯಿ ಧೋರಣೆ ಬಂಟ್ವಾಳ ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ಬಾಳಿಗಾ ಅವರು ಬಂಟ್ವಾಳ ಪೇಟೆಯ ಸಮಸ್ಯೆಯನ್ನು ಸಭೆಯ ಮುಂದಿಟ್ಟರು. ಪುರಸಭಾ ಕಚೇರಿಯೂ ಬಂಟ್ವಾಳ ಪೇಟೆಯಲ್ಲೇ ಇದ್ದು, ಆದರೆ ಪೇಟೆಯ ಅಭಿವೃದ್ಧಿಯ ದೃಷ್ಟಿಯಿಂದ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಪೇಟೆಯಿಂದ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಬರುತ್ತಿದ್ದು, ನಾವು ತೆರಿಗೆ ಬಾಕಿ ಪಾವತಿಸಲು ಬಾಕಿ ಇಟ್ಟಿದ್ದೇವಾ, ಮತ್ಯಾಕೆ ಅಭಿವೃದ್ಧಿಗೆ ಪುರಸಭೆ ಮನಸ್ಸು ಮಾಡುತ್ತಿಲ್ಲ. ಶೌಚಾಲಯ ಗಬ್ಬು ವಾಸನೆ ಬರುತ್ತಿದ್ದು, ನಿಮ್ಮಲ್ಲಿ ಹಣಕಾಸಿನ ತೊಂದರೆ ಇದ್ದರೆ ನಾವು ಕೊಡುತ್ತೇವೆ. ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸೆಟ್ ಬ್ಯಾಕ್ ಕಾನೂನಿನ ಮೂಲಕ ಪೇಟೆಯನ್ನು ಬಲಿ ಕೊಡಲಾಗುತ್ತಿದ್ದು, ಪೇಟೆಯ ಅಭಿವೃದ್ಧಿಗೆ ವಿಶೇಷ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿದರು. ಅಂಗನವಾಡಿ ದುರಸ್ತಿ ಮಾಡಿ
ವಸಂತಿ ಗಂಗಾಧರ ಮಾತನಾಡಿ, ಪುರಸಭಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಅನುದಾನ ಮೀಸಲಿರಿಸಬೇಕು. ಮಕ್ಕಳಿಗೆ ಆಟದ ಮೈದಾನ ಬೇಕು ಎಂದರು. ಮುಸ್ತಾಫಾ ಹಾಗೂ ಪಿ.ಎಂ.ಅಶ್ರಫ್ ಮಾತನಾಡಿ, ಬಂಗ್ಲೆಗುಡ್ಡೆಯಲ್ಲಿ ಅಂಗನವಾಡಿ ಕೇಂದ್ರ ಹಾಗೂ ಹಾಸ್ಟೆಲ್ ಪೊದೆಗಳಿಂದ ಆವರಿಸಿದೆ. ತೆರವಾಗಬೇಕು. ಪಾಣೆಮಂಗಳೂರು ಆಲಡ್ಕದಲ್ಲಿ ಒಳಚರಂಡಿಯಲ್ಲಿ ಕೊಳಚೆ ನೀರು ಬ್ಲಾಕ್ ಆಗಿ ದುರ್ನಾತ ಬೀರುತ್ತಿದೆ ಸಮಸ್ಯೆ ಪರಿಹಾರ ಮಾಡಿ ಎಂದರು. ಪೈಪ್ಲೈನ್ ಕೆಟ್ಟರೆ ಎಲ್ಲಿ ಮಾತನಾಡಲಿ
ದಾಮೋದರ ಅವರು ಮಾತನಾಡಿ, ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ ಕೆಟ್ಟು ಹೋದರೆ ಯಾರಲ್ಲಿ ಮಾತನಾಡಬೇಕು.ಅವರಲ್ಲಿ ಕೇಳಿದರೆ ಇವರಲ್ಲಿ ಕೇಳಿ ಎಂಬ ಉತ್ತರವಷ್ಟೆ ಬರುತ್ತಿದೆ ಎಂದರು.