Advertisement
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 4ಕ್ಕೆ 159 ರನ್ ಗಳಿಸಿದರೆ, ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 159 ರನ್ ಮಾಡಿತು.ಕೇನ್ ವಿಲಿಯಮ್ಸನ್ ಮತ್ತು ಕೊನೆಯ ಹಂತದಲ್ಲಿ ಸಿಡಿದು ನಿಂತ ಜಗದೀಶ್ ಸುಚಿತ್ ಸೇರಿಕೊಂಡು ಹೈದರಾಬಾದನ್ನು ಗಂಡಾಂತರದಿಂದ ಪಾರುಮಾಡಿದರು. ರಬಾಡ ಪಾಲಾದ ಕೊನೆಯ ಓವರ್‌ನಲ್ಲಿ 16 ರನ್, ಕೊನೆಯ ಎಸೆತದಲ್ಲಿ 2 ರನ್ ಸವಾಲು ಎದುರಾಗಿತ್ತು. ಪಂದ್ಯ ಟೈ ಆದಾಗ ವಿಲಿಯಮ್ಸನ್ 66 ರನ್ (51 ಎಸೆತ, 8 ಬೌಂಡರಿ) ಮತ್ತು ಸುಚಿತ್ 14 ರನ್ ಮಾಡಿ ಅಜೇಯರಾಗಿದ್ದರು (6 ಎಸೆತ, 2 ಫೋರ್, ಒಂದು ಸಿಕ್ಸರ್).
ಡೆಲ್ಲಿ ಪರ ಅಕ್ಷರ್ ಪಟೇಲ್ ಸೂಪರ್ ಓವರ್ ಎಸೆದರು. ಇದರಲ್ಲಿ ವಾರ್ನರ್-ವಿಲಿಯಮ್ಸನ್ ಜೋಡಿಗೆ ಗಳಿಸಲು ಸಾಧ್ಯವಾದದ್ದು 7 ರನ್ ಮಾತ್ರ. ಡೆಲ್ಲಿ ಪರ ಪಂತ್-ಧವನ್ ಆಡಲಿಳಿದರು. ಬೌಲರ್ ರಶೀದ್ ಖಾನ್. ಅಂತಿಮ ಎಸೆತದಲ್ಲಿ ಡೆಲ್ಲಿ ಗೆಲುವಿನ ರನ್ ಮಾಡಿ ಗೆದ್ದು ಬಂದಿತು. ಡೆಲ್ಲಿ ಅಬ್ಬರದ ಆರಂಭ
ಖಲೀಲ್ ಅಹ್ಮದ್ ಎಸೆದ ಮೊದಲ ಓವರಿನಲ್ಲೇ ಪೃಥ್ವಿ ಶಾ ಹ್ಯಾಟ್ರಿಕ್ ಫೋರ್ ಬಾರಿಸಿ ಡೆಲ್ಲಿಗೆ ಪ್ರಚಂಡ ಆರಂಭ ಒದಗಿಸಿದರು. ಅಭಿಷೇಕ್ ಶರ್ಮ ಪಾಲಾದ ಮುಂದಿನ ಓವರ್‌ನಲ್ಲಿ ಶಾ ಮತ್ತು ಶಿಖರ್ ಧವನ್ ಸೇರಿಕೊಂಡು ಮತ್ತೆ 3 ಫೋರ್ ಬಾರಿಸಿದರು.
Related Articles
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ರನೌಟ್ 53
ಶಿಖರ್ ಧವನ್ ಬಿ ರಶೀದ್ 28
ರಿಷಭ್ ಪಂತ್ ಸಿ ಸುಚಿತ್ ಬಿ ಕೌಲ್ 37
ಸ್ಟಿವನ್ ಸ್ಮಿತ್ ಔಟಾಗದೆ 34
ಹೆಟ್‌ಮೈರ್ ಸಿ ಮಿಲಿಯಮ್ಸನ್ ಬಿ ಕೌಲ್ 1
ಮಾರ್ಕಸ್ ಸ್ಟೋಯಿನಿಸ್ ಔಟಾಗದೆ 2
ಇತರ 4
ಒಟ್ಟು(4 ವಿಕೆಟಿಗೆ) 159
ವಿಕೆಟ್ ಪತನ:1-81, 2-84, 3-142, 4-145.
ಬೌಲಿಂಗ್; ಖಲೀಲ್ ಅಹ್ಮದ್ 4-0-42-0
ಅಭಿಷೇಕ್ ಶರ್ಮ 1-0-14-0
ಸಿದ್ದಾರ್ಥ್ ಕೌಲ್ 4-0-31-2
ಜಗದೀಶ್ ಸುಚಿತ್ 4-0-21-0
ವಿಜಯ್ ಶಂಕರ್ 3-0-19-0
ರಶೀದ್ ಖಾನ್ 4-0-31-1
Advertisement
ಸನ್‌ರೈಸರ್ ಹೈದರಾಬಾದ್ಡೇವಿಡ್ ವಾರ್ನರ್ ರನೌಟ್ 6
ಜಾನಿ ಬೇರ್‌ಸ್ಟೊ ಸಿ ಧವನ್ ಬಿ ಅವೇಶ್ 38
ಕೇನ್ ವಿಲಿಯಮ್ಸನ್ ಔಟಾಗದೆ 66
ವಿರಾಟ್ ಸಿಂಗ್ ಸಿ ಸ್ಟೋಯಿನಿಸ್ ಬಿ ಅವೇಶ್ 4
ಕೇದಾರ್ ಜಾಧವ್ ಸ್ಟಂಪ್ಡ್ ಪಂತ್ ಬಿ ಮಿಶ್ರಾ 9
ಅಭಿಷೇಕ್ ಶರ್ಮ ಎಲ್‌ಬಿಡಬ್ಲ್ಯು ಬಿ ಅಕ್ಷರ್ 5
ರಶೀದ್ ಖಾನ್ ಎಲ್‌ಬಿಡಬ್ಲ್ಯು ಬಿ ಅಕ್ಷರ್ 0
ವಿಜಯ್ ಶಂಕರ್ ಬಿ ಅವೇಶ್ 8
ಜಗದೀಶ್ ಸುಜಿತ್ ಔಟಾಗದೆ 14
ಇತರ 9
ಒಟ್ಟು(7 ವಿಕೆಟಿಗೆ) 159
ವಿಕೆಟ್ ಪತನ:1-28, 2-56, 3-84, 4-104, 5-117, 6-117, 7-136
ಬೌಲಿಂಗ್; ಕಾಗಿಸೊ ರಬಾಡ 3-0-25-0
ಆರ್. ಅಶ್ವಿನ್ 4-0-27-0
ಮಾರ್ಕಸ್ ಸ್ಟೋಯಿನಿಸ್ 1-0-12-0
ಅಕ್ಷರ್ ಪಟೇಲ್ 4-0-26-2
ಅವೇಶ್ ಖಾನ್ 4-0-34-3
ಅಮಿತ್ ಮಿಶ್ರಾ 4-0-31-1