Advertisement

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

07:29 PM Dec 28, 2024 | Team Udayavani |

ಮೌಂಟ್‌ ಮೌಂಗನಿ: ಇನ್ನೇನು ಗೆದ್ದೇ ಬಿಟ್ಟಿತು ಎಂಬ ಸ್ಥಿತಿಯಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ನ್ಯೂಜಿಲ್ಯಾಂಡ್‌, ಮೊದಲ ಟಿ20 ಪಂದ್ಯವನ್ನು 8 ರನ್ನುಗಳಿಂದ ರೋಚಕವಾಗಿ ಗೆದ್ದಿದೆ.

Advertisement

ನ್ಯೂಜಿಲ್ಯಾಂಡ್‌ 8 ವಿಕೆಟಿಗೆ 172 ರನ್‌ ಮಾಡಿದರೆ, ಶ್ರೀಲಂಕಾ 8 ವಿಕೆಟಿಗೆ 164 ರನ್‌ ಗಳಿಸಿ ಶರಣಾಯಿತು. ಒಂದು ಹಂತದಲ್ಲಿ ಲಂಕಾ ವಿಕೆಟ್‌ ನಷ್ಟವಿಲ್ಲದೆ 121 ರನ್‌ ಮಾಡಿ ಗೆಲುವಿನತ್ತ ಓಟ ಬೆಳೆಸಿತ್ತು. ಅನಂತರ ದಿಢೀರ್‌ ಕುಸಿತಕ್ಕೆ ಸಿಲುಕಿತು.

ನ್ಯೂಜಿಲ್ಯಾಂಡ್‌ ಪರ ಡ್ಯಾರಿಲ್‌ ಮಿಚೆಲ್‌ 62 ಮತ್ತು ಮೈಕಲ್‌ ಬ್ರೇಸ್‌ವೆಲ್‌ 59 ರನ್‌ ಹೊಡೆದರು. ಒಂದೇ ಓವರ್‌ನಲ್ಲಿ 3 ವಿಕೆಟ್‌ ಕೆಡವಿದ ಜೇಕಬ್‌ ಡಫಿ ಅವರಿಂದ ಪಂದ್ಯಕ್ಕೆ ತಿರುವು ಲಭಿಸಿತು. ಲಂಕಾ ಆರಂಭಿಕರಾದ ಪಥುಮ್‌ ನಿಸ್ಸಂಕ 90, ಕುಸಲ್‌ ಮೆಂಡಿಸ್‌ 46 ರನ್‌ ಮಾಡಿದರೂ ಉಳಿದವರೆಲ್ಲರ ಸಿಂಗಲ್‌ ಡಿಜಿಟ್‌ ಸ್ಕೋರ್‌ ತಂಡಕ್ಕೆ ಮುಳುವಾಯಿತು.

ಇದನ್ನೂ ಓದಿ: ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ

Advertisement

Udayavani is now on Telegram. Click here to join our channel and stay updated with the latest news.

Next