Advertisement
2009ರಿಂದೀಚೆ ಆಸ್ಟ್ರೇಲಿಯದ ವರ್ಷಾರಂಭದ ಟೆಸ್ಟ್ ಪಂದ್ಯ “ಪಿಂಕ್ ಟೆಸ್ಟ್’ ಆಗಿರುತ್ತದೆ. ಗ್ಲೆನ್ ಮೆಕ್ಗ್ರಾತ್ ಅವರ ಪತ್ನಿ ಜೇನ್ ಮೆಕ್ಗ್ರಾತ್ 2008ರಲ್ಲಿ ಸ್ತನ ಕ್ಯಾನ್ಸರ್ನಿಂದ ನಿಧನ ಹೊಂದಿದ್ದರು. ಅವರ ಗೌರವಾರ್ಥ ಪಿಂಕ್ ಟೆಸ್ಟ್ ಆಡಲಾಗುತ್ತಿದೆ. ಅಂದು ಹುಟ್ಟಿಕೊಂಡ ಮೆಕ್ಗ್ರಾತ್ ಫೌಂಡೇಶನ್, ಸ್ತನ ಕ್ಯಾನ್ಸರ್ ಪೀಡಿತರಿಗೆ ಧನ ಸಹಾಯ ಮಾಡುತ್ತ ಬಂದಿದೆ.
ಬುಧವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್ಗೆ ಆಗಮಿಸಿದ ಗ್ಲೆನ್ ಮೆಕ್ಗ್ರಾತ್ ಆಸೀಸ್ ಕ್ರಿಕೆಟಿಗರೊಂದಿಗೆ ಬೆರೆತರು. ಎಲ್ಲರೂ ಗುಲಾಲಿ ಬಣ್ಣಕ್ಕೆ ಆದ್ಯತೆ ನೀಡಿದ್ದರು.