Advertisement

ಐಪಿಎಲ್‌ ನಾಕೌಟ್‌ ವೇಳೆ ಮಹಿಳಾ ಟಿ20 ಪ್ರದರ್ಶನ ಪಂದ್ಯ?

06:20 AM Feb 27, 2018 | |

ನವದೆಹಲಿ: ಏಪ್ರಿಲ್‌ನಲ್ಲಿ 11ನೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಆರಂಭವಾಗಲಿದೆ. ಈ ಬಾರಿ ಒಂದು ವಿಶೇಷವೆಂದರೆ, ನಾಕೌಟ್‌ ಹಂತದ ವೇಳೆ ಮಹಿಳಾ ಟಿ20 ಪ್ರದರ್ಶನ ಪಂದ್ಯವನ್ನು ಆಡಿಸುವ ಸಾಧ್ಯತೆ ಇದೆ. ಇದು ಮುಂದಿನ ದಿನಗಳಲ್ಲಿ ಐಪಿಎಲ್‌ ಮಹಿಳಾ ಆವೃತ್ತಿ ಆರಂಭವಾಗುವ ಮುನ್ಸೂಚನೆಯಾಗಿದೆ.

Advertisement

ಪ್ರದರ್ಶನ ಪಂದ್ಯದಲ್ಲಿ ಇಂಗ್ಲೆಂಡ್‌, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರದ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಮಹಿಳಾ ಆವೃತ್ತಿ ಆರಂಭವಾಗಬೇಕು ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಸೇರಿದಂತೆ ಹಲವು ಹಾಲಿ ಮತ್ತು ಮಾಜಿ ಆಟಗಾರ್ತಿಯರು ಒತ್ತಾಯಿಸಿದ್ದರು. ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಬಿಗ್‌ಬಾಷ್‌ ಲೀಗ್‌ ಕೂಡ ಯಶಸ್ವಿಯಾಗಿತ್ತು.

ಭಾರತ ಮಹಿಳಾ ತಂಡ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು. ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಸರಣಿಯಲ್ಲಿ ಗೆದ್ದು, ಇತಿಹಾಸ ನಿರ್ಮಿಸಿದೆ. ಹೀಗಾಗಿ ಮಹಿಳಾ ಆಟಗಾರ್ತಿಯರಿಗೂ ಜನಪ್ರಿಯತೆ ಸಿಗುತ್ತಿದ್ದು, ತಾರೆಯರಾಗಿ ಹೊರಹೊಮ್ಮುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next