Advertisement

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು

11:22 AM Dec 21, 2024 | Team Udayavani |

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಮೂರನೇ ಸೀಸನ್‌ಗಾಗಿ ಒಂದು ವಿಂಡೋವನ್ನು ಗುರುತಿಸಿದೆ. ಇದು ಫೆಬ್ರವರಿ ಆರಂಭ ಮತ್ತು ಮಾರ್ಚ್‌ನ ನಡುವೆ ಒಂದು ತಿಂಗಳವರೆಗೆ ಇರುತ್ತದೆ. ಹೀಗಾಗಿ ಪಂದ್ಯಾವಳಿಯು 2025ರ ಫೆಬ್ರವರಿ 6 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ ಎಂದು ಕ್ರಿಕ್‌ ಬಜ್ ವರದಿ ಮಾಡಿದೆ.

Advertisement

ನಿಖರವಾದ ದಿನಾಂಕಗಳನ್ನು ಇನ್ನೂ ಅಂತಿಮ ಗೊಳಿಸಲಾಗಿಲ್ಲ. ಆದರೆ ಫೆಬ್ರವರಿ 6 ರಂದು ಪಂದ್ಯಾವಳಿಯು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಡಬ್ಲ್ಯೂಪಿಎಲ್ ಹರಾಜಿನ ಸಂದರ್ಭದಲ್ಲಿ ಫ್ರಾಂಚೈಸಿಗಳಿಗೆ ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಹಿಂದಿನ ಎರಡು ಸೀಸನ್‌ಗಳಂತೆ, ಮೂರನೇ ಪಂದ್ಯವೂ 22 ಪಂದ್ಯಗಳನ್ನು ಹೊಂದಿರುತ್ತದೆ. ಬಿಸಿಸಿಐ ಆರಂಭದಲ್ಲಿ ಸೀಸನ್ ಮೂರರಿಂದ ಹೊಸ ತಂಡವನ್ನು ಪರಿಚಯಿಸಲು ಯೋಜಿಸಿತ್ತು. ಆದರೆ ಇದೀಗ ಆ ಕಲ್ಪನೆಯನ್ನು ಕೈಬಿಡಲಾಗಿದೆ.

ಕೂಟ ನಡೆಯುವ ಮೈದಾನಕ್ಕೆ ಸಂಬಂಧಿಸಿದಂತೆ, ಬಿಸಿಸಿಐ ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಇದು ಲಕ್ನೋ ಅಥವಾ ಅಹಮದಾಬಾದ್ ನಲ್ಲಿ ನಡೆಯಬಹುದು ಎಂದು ವರದಿಯಾಗಿದೆ. ಮುಂಬೈನಲ್ಲಿ ಪಂದ್ಯಗಳನ್ನು ಆಯೋಜಿಸಲು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅನ್ನು ಸಂಪರ್ಕಿಸಿಲ್ಲ ಎಂದು ಈ ಕ್ರಿಕ್‌ ಬಜ್‌ ವರದಿ ಮಾಡಿದೆ. ಇದಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತವರು ಬೆಂಗಳೂರು ಕೂಡಾ ಪರಿಗಣನೆಯಲ್ಲಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೆಹಲಿಯಲ್ಲಿ ಫೆಬ್ರವರಿ ಸಮಯದಲ್ಲಿ ಭಾರಿ ಚಳಿ ಇರುವ ಕಾರಣದಿಂದ ದೆಹಲಿಯಲ್ಲಿ ಕೂಟ ನಡೆಸುವುದು ಅಸಾಧ್ಯ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next