Advertisement

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

10:39 PM Dec 30, 2024 | Team Udayavani |

ದುಬೈ: ಭಾರತದ ವೇಗಿ ಜಸ್‌ಪ್ರೀತ್‌ ಬುಮ್ರಾ ಹೆಸರನ್ನು ಪ್ರತಿಷ್ಠಿತ ಐಸಿಸಿ ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

Advertisement

ಇದರೊಂದಿಗೆ ಐಸಿಸಿಯ ವಿವಿಧ ವಾರ್ಷಿಕ ಪ್ರಶಸ್ತಿಗಳಿಗೆ ಸೂಚಿಸಲಾದ ಭಾರತೀಯ ಕ್ರಿಕೆಟಿಗರ ಸಂಖ್ಯೆ 4ಕ್ಕೆ ಏರಿತು. ಶ್ರೇಯಾಂಕಾ ಪಾಟೀಲ್‌, ಸ್ಮತಿ ಮಂಧನಾ ಮತ್ತು ಅರ್ಷದೀಪ್‌ ಸಿಂಗ್‌ ಹೆಸರು ಈಗಾಗಲೇ ನಾಮ ನಿರ್ದೇಶನಗೊಂಡಿದೆ.

ಬುಮ್ರಾ 2024ರ 13 ಟೆಸ್ಟ್‌ಗಳಲ್ಲಿ 14.92ರ ಸರಾಸರಿಯೊಂದಿಗೆ 71 ವಿಕೆಟ್‌ ಉರುಳಿಸಿ ಅಗ್ರಪಂಕ್ತಿಯಲ್ಲಿದ್ದಾರೆ. ಬಾರ್ಡರ್‌-ಗಾವಸ್ಕರ್‌ ಟ್ರೋಫಿ ಸರಣಿಯ 4 ಟೆಸ್ಟ್‌ಗಳಲ್ಲಿ ಸರ್ವಾಧಿಕ 30 ವಿಕೆಟ್‌ ಉಡಾಯಿಸಿದ ಸಾಧನೆ ಇವರದ್ದಾಗಿದೆ. ಬುಮ್ರಾ ಜತೆಗೆ ಜೋ ರೂಟ್‌, ಹ್ಯಾರಿ ಬ್ರೂಕ್‌ ಮತ್ತು ಕಮಿಂಡು ಮೆಂಡಿಸ್‌ ಕೂಡ ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next