Advertisement

WTC “ಟೆಸ್ಟ್‌  ಫೈನಲ್‌’ಗೂ ಮುನ್ನ ಒಂದು ಟೆಸ್ಟ್‌ ಆಡಲು ದ. ಆಫ್ರಿಕಾ ಯೋಜನೆ

10:48 PM Jan 07, 2025 | Team Udayavani |

ಜೊಹಾನ್ಸ್‌ಬರ್ಗ್‌: ಪಾಕಿಸ್ಥಾನ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಗೆದ್ದ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇ ಶಿಸಿದ ಸಂಭ್ರಮದಲ್ಲಿದೆ. ಆಸ್ಟ್ರೇಲಿಯ ವಿರುದ್ಧದ ಈ ಪಂದ್ಯ ನಡೆಯುವುದು ಜೂನ್‌ನಲ್ಲಿ. ಆದರೆ ಅಲ್ಲಿಯ ತನಕ ದಕ್ಷಿಣ ಆಫ್ರಿಕಾಕ್ಕೆ ಯಾವುದೇ ಟೆಸ್ಟ್‌ ಪಂದ್ಯಗಳಿಲ್ಲ. ಹೀಗಾಗಿ ಅಭ್ಯಾಸಕ್ಕಾಗಿ ಐರ್ಲೆಂಡ್‌ ಅಥವಾ ಅಫ್ಘಾನಿಸ್ಥಾನ ವಿರುದ್ಧ ಟೆಸ್ಟ್‌ ಪಂದ್ಯವೊಂದನ್ನು ಆಡುವ ಯೋಜನೆ ಹಾಕಿಕೊಂಡಿದೆ.

Advertisement

“ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸಮೀಪಿಸುವ ವೇಳೆ ಇಂಗ್ಲೆಂಡ್‌ನ‌ಲ್ಲೇ ಒಂದು ಟೆಸ್ಟ್‌ ಪಂದ್ಯವಾಡುವುದು ನಮ್ಮ ಯೋಜನೆ. ಐರ್ಲೆಂಡ್‌ ಅಥವಾ ಅಫ್ಘಾನಿಸ್ಥಾನ ವಿರುದ್ಧ ಈ ಪಂದ್ಯವನ್ನು ಆಡಲು ನಮ್ಮ ಪ್ರಯತ್ನ ಸಾಗಲಿದೆ’ ಎಂದು ದಕ್ಷಿಣ ಆಫ್ರಿಕಾ ತಂಡದ ಕೋಚ್‌ ಶುಕ್ರಿ ಕೊನ್ರಾಡ್‌ ಹೇಳಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಪ್ರೊವಿಡೆನ್ಸ್‌ ಟೆಸ್ಟ್‌ ಪಂದ್ಯವನ್ನು 40 ರನ್ನುಗಳಿಂದ ಮಣಿಸಿದ ಬಳಿಕ ದಕ್ಷಿಣ ಆಫ್ರಿಕಾ ಗೆಲುವಿನ ಓಟ ಮುಂದುವರಿಸುತ್ತ ಹೋಯಿತು. ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಪಾಕಿಸ್ಥಾನ ವಿರುದ್ಧದ ಟೆಸ್ಟ್‌ ಸರಣಿ ಗೆದ್ದು ಫೈನಲ್‌ಗೆ ಲಗ್ಗೆ ಹಾಕಿತು. ಈ ಯಶಸ್ಸಿಗೆ ಟೆಂಬ ಬವುಮ ಅವರ ಸ್ಫೂರ್ತಿದಾಯಕ ನಾಯಕತ್ವವೇ ಕಾರಣ ಎಂಬುದಾಗಿ ಶುಕ್ರಿ ಕೊನ್ರಾಡ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next