ಪುಣೆ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ ಸೋಮವಾರದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 45-31 ಅಂತರದಿಂದ ಗೆದ್ದಿರುವ ದಬಾಂಗ್ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. ಇದು ಡೆಲ್ಲಿಗೆ 22ನೇ ಮತ್ತು ಕೊನೇ ಲೀಗ್ ಪಂದ್ಯದಲ್ಲಿ ಸಿಕ್ಕಿದ 13ನೇ ಗೆಲುವಾದರೆ ಗುಜರಾತ್‌ಗೆ 22ರಲ್ಲಿ 14ನೇ ಸೋಲು. ಡೆಲ್ಲಿ ಈಗಾಗಲೇ ಪ್ಲೇಆಫ್ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.
ದಿನದ ಇನ್ನೊಂದು ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ ತಂಡವು ತಮಿಳ್ ತಲೈವಾಸ್ ತಂಡವನ್ನು 42-32 ಅಂಕಗಳಿಂದ ಮಣಿಸಿದೆ.
ಇಂದಿಗೆ ಲೀಗ್ ಪಂದ್ಯಗಳು ಕೊನೆಪಿಕೆಎಲ್ 11ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮಂಗಳವಾರಕ್ಕೆ ಕೊನೆಯಾಗಲಿದ್ದು, ಪುಣೆಯಲ್ಲೇ ಡಿ.26ರಿಂದ ನಾಕೌಟ್ ಹಂತದ ಪಂದ್ಯಗಳು ಆರಂಭವಾಗಲಿವೆ.