Advertisement

ಅನುಷ್ಕಗಾಗಿ ಅನುಷ್ಕಾ ಬರ್ತಾರ?

11:11 AM Sep 02, 2018 | Team Udayavani |

ಖ್ಯಾತ ನಟಿ ಅನುಷ್ಕಾ ಶೆಟ್ಟಿಯನ್ನು ಕನ್ನಡಕ್ಕೆ ಕರೆತರಬೇಕು, ಇಲ್ಲಿನ ಸಿನಿಮಾವೊಂದರಲ್ಲಿ ನಟಿಸುವಂತೆ ಮಾಡಬೇಕೆಂಬ ಪ್ರಯತ್ನ ಇಂದು ನಿನ್ನೆಯದ್ದಲ್ಲ. ಆದರೆ, ಆ ಪ್ರಯತ್ನ ಇಲ್ಲಿವರೆಗೆ ಫ‌ಲಿಸಿಲ್ಲ. ಪ್ರತಿ ಸ್ಟಾರ್‌ ಸಿನಿಮಾಗಳು ಸೆಟ್ಟೇರಿದಾಗಲೂ ಅನುಷ್ಕಾ ಶೆಟ್ಟಿ ಹೆಸರು ಓಡಾಡುತ್ತಲೇ ಇರುತ್ತದೆ. ಈಗ ಮತ್ತೂಮ್ಮೆ ಅನುಷ್ಕಾ ಶೆಟ್ಟಿ ಹೆಸರು ಓಡಾಡಿದೆ. ಹಾಗಂತ ಹೀರೋಯಿನ್‌ ಆಗಿ ಅಲ್ಲ. ಕನ್ನಡ ಸಿನಿಮಾವೊಂದರ ಟ್ರೇಲರ್‌ ಬಿಡುಗಡೆಗೆ. 

Advertisement

“ಅನುಷ್ಕ’ ಎಂಬ ಸಿನಿಮಾವೊಂದು ತಯಾರಾಗಿದ್ದು, ಈ ಚಿತ್ರದ ಟ್ರೇಲರ್‌ ಅನ್ನು ಅನುಷ್ಕಾ ಅವರಿಂದ ಬಿಡುಗಡೆ ಮಾಡಿಸಬೇಕೆಂಬ ಆಸೆ ಚಿತ್ರತಂಡದ್ದು. ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ದೇವರಾಜ್‌ಕುಮಾರ್‌ ನಿರ್ದೇಶಿಸಿದ್ದಾರೆ. ಈಗಾಗಲೇ “ಡೇಂಜರ್‌ ಝೋನ್‌’ ಹಾಗೂ “ನಿಶ್ಯಬ್ದ-2′ ಚಿತ್ರಗಳನ್ನು ನಿರ್ದೇಶಿಸಿರುವ ದೇವರಾಜ್‌ಗೆ ಇದು ಮೂರನೇ ಸಿನಿಮಾ. “ಅನುಷ್ಕ’ ಟೈಟಲ್‌ ಇರುವ ಸಿನಿಮಾದ ಟ್ರೇಲರ್‌ ಅನ್ನು ಅನುಷ್ಕಾ ಅವರೇ ಬಿಡುಗಡೆ ಮಾಡಿದರೆ ಚೆಂದ ಎಂಬುದು ಅವರ ಆಸೆ.

ಈ ಬಗ್ಗೆ  ಈಗಾಗಲೇ ಎರಡು ಸುತ್ತಿನ ಮಾತುಕತೆಯಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, ಅನುಷ್ಕಾ ಅವರು ಕಾರ್ಯಕ್ರಮಕ್ಕೆ ಬರಬಹುದು ಎಂಬುದು ನಿರ್ದೇಶಕ ದೇವರಾಜ್‌ ಮಾತು. ಈ ಹಿಂದೆ ಅನೇಕ ಚಿತ್ರತಂಡಗಳು ಚಿತ್ರಕ್ಕೆ ನಾಯಕಿಯನ್ನಾಗಿಸಲು ಪ್ರಯತ್ನಿಸುವ ಜೊತೆಗೆ ಕಾರ್ಯಕ್ರಮಕ್ಕೂ ಅನುಷ್ಕಾ ಅವರು ಬರಬೇಕೆಂದು ಆಸೆ ಪಟ್ಟಿವೆ. ಆದರೆ, ಅದು ಸಾಧ್ಯವಾಗಿಲ್ಲ. ಈಗ “ಅನುಷ್ಕ’ ತಂಡದ ಸರದಿ.  ಅಂದಹಾಗೆ, “ಅನುಷ್ಕ’ ಚಿತ್ರದ ಕಥೆ ಮೂರು ಟ್ರ್ಯಾಕ್‌ನಲ್ಲಿ ಸಾಗಲಿದ್ದು, ಈಗಾಗಲೇ ಚಿತ್ರೀಕರಣ ಮುಗಿಸಿದೆ. ರೂಪೇಶ್‌ ಈ ಚಿತ್ರದ ನಾಯಕರಾಗಿದ್ದು, ಅಮೃತಾ ಅಯ್ಯರ್‌ ನಾಯಕಿ. ಗಂಗಾಧರ್‌ ನಿರ್ಮಾಣ ಚಿತ್ರಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next