Advertisement

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

04:49 PM Jan 04, 2025 | Team Udayavani |

“31ಡೇಸ್‌’ ಎಂಬ ಹೊಸ ಕನ್ನಡ ಚಿತ್ರ ನಿರ್ಮಾಣವಾಗುತ್ತಿದೆ. ಜಾಲಿಡೇಸ್‌ ಸಿನಿಮಾ ಖ್ಯಾತಿಯ ನಿರಂಜನ್‌ ಶೆಟ್ಟಿ ಈ ಚಿತ್ರದ ನಾಯಕ ನಟ. ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಗೊಂಡಿತು. ವಿ. ಮನೋಹರ್‌ ಅವರ ಸ್ವರ ಸಂಯೋಜನೆ, ಸಾಹಿತ್ಯ ಹಾಗೂ ಗಾಯನದಲ್ಲಿ ಈ ಹಾಡು ಮೂಡಿ ಬಂದಿದೆ. ಇದು ವಿ. ಮನೋಹರ್‌ ಅವರ 150ನೇ ಸಂಗೀತ ನಿರ್ದೇಶನದ ಸಿನಿಮಾ ಎಂಬುದು ವಿಶೇಷ.

Advertisement

ಗೀತೆಯ ಬಗ್ಗೆ ಮಾತನಾಡಿದ ವಿ. ಮನೋಹರ್‌, “ಇದು ಒಪೇರ ಶೈಲಿಯ ಹಾಡು. ಕನ್ನಡದಲ್ಲಿ ಈ ರೀತಿ ಬಂದಿದ್ದು ಇದೇ ಮೊದಲು. ನಿರಂಜನ್‌ ಅವರ ಒತ್ತಾಯಕ್ಕೆ ಮಣಿದು ಈ ಹಾಡಿನಲ್ಲಿ ಅಭಿನಯ ಕೂಡ ಮಾಡಿದ್ದೇನೆ’ ಎಂದರು.

“31 ದಿನಗಳಲ್ಲಿ ನಡೆಯುವ ಈಗಿನ ಕಾಲಘಟ್ಟದ ಪ್ರೇಮಕಥೆ. ಹಾಗಾಗಿ “31 ಡೇಸ್‌’ ಎಂದು ಹೆಸರಿಟ್ಟಿದ್ದೇವೆ. ಮಧ್ಯಂತರಕ್ಕೂ ಮುನ್ನ ಹದಿನೈದು ದಿನಗಳು ಹಾಗೂ ನಂತರ ಹದಿನೈದು ದಿನಗಳ ಕಥೆ ಸಾಗುತ್ತದೆ’ ಎನ್ನುವುದು ನಟ ನಿರಂಜನ್‌ ಮಾತಾಗಿತ್ತು.

ನಾಗವೇಣಿ ಎನ್‌. ಶೆಟ್ಟಿ ಈ ಚಿತ್ರಕ್ಕೆ ಹಣ ಹೂಡಿದ್ದು, ರಾಜ್‌ ರವಿಕುಮಾರ್‌ ಅವರ ನಿರ್ದೇಶನ ಚಿತ್ರಕ್ಕಿದೆ. ಪ್ರಜ್ವಲಿ ಸುವರ್ಣ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next