Advertisement

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

06:04 PM Dec 21, 2024 | Team Udayavani |

ಕಾಪು: ಸಹಕಾರಿ ಸಂಘಗಳ ಚುನಾವಣೆ ಅಂಗವಾಗಿ ಪ್ರತಿಷ್ಠಿತ ಬೆಳಪು ವ್ಯವಸಾಯ ಸಹಕಾರಿ ಸಂಘ (ನಿ.) ಪಣಿಯೂರು ಇದರ ನೂತನ ಆಡಳಿತ ಮಂಡಳಿಗೆ ಸಹಕಾರಿ ಧುರೀಣ ಐಕಳಭಾವ ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡ ಸತತ ಎಂಟನೇ ಬಾರಿಗೆ ಅವಿರೋಧ ಆಯ್ಕೆಯಾಗಿದೆ.

Advertisement

ಬೆಳಪು ವ್ಯವಸಾಯ ಸಹಕಾರಿ ಸಂಘದ ಚುನಾವಣೆಗೆ ನಿರ್ದೇಶಕರುಗಳ ಪೈಕಿ 12 ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದು, ಎಲ್ಲರ ನಾಮಪತ್ರಗಳನ್ನು ಪರಿಶೀಲಿಸಿ 2024-25ರಿಂದ ಮುಂದಿನ ಐದು ವರ್ಷಗಳ ಅವಧಿಯವರೆಗಿನ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆಗೊಳಿಸಲಾಗಿದೆ.

ಆಡಳಿತ ಮಂಡಳಿಗೆ ಐಕಳಭಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು, ಪಾಂಡು ಶೆಟ್ಟಿ ಎಲ್ಲೂರು, ಪಾಂಡು ಎಂ. ಶೇರಿಗಾರ, ಗೋಪಾಲ ಪೂಜಾರಿ, ಆಲಿಯಬ್ಬ ಬ್ಯಾರಿ, ಸೈಮನ್ ಡಿಸೋಜಾ, ಮೀನ ಪೂಜಾರ್ತಿ, ದ್ಯುಮಣಿ ಆರ್. ಭಟ್, ಸಾಧು ಶೆಟ್ಟಿ ತೆಂಕರಲಾಕ್ಯಾರು, ಅನಿತಾ ಆನಂದ್, ಸುಂದರಿ, ವಿಮಲ ಅಂಚನ್ ಅವರನ್ನು ನಿರ್ದೇಶಕರನ್ನಾಗಿ ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ಕೆ. ಆರ್.ರೋಹಿತ್ ತಿಳಿಸಿದ್ದಾರೆ.

ಬೆಳಪು ವ್ಯವಸಾಯಕ ಸಹಕಾರಿ ಸಂಘದಲ್ಲಿ ಕಳೆದ 35 ವರ್ಷಗಳಿಂದ 8ನೇ ಅವಧಿಗೆ ಸತತವಾಗಿ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಪ್ರಾಥಮಿಕ ಸಹಕಾರಿ ವ್ಯವಸ್ಥೆಯಲ್ಲಿ ಹೊಸ ಇತಿಹಾಸವಾಗಿದೆ. ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಬೆಳಪು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next