Advertisement

ಗುರುವಿನ ಮಾರ್ಗದರ್ಶನದಿಂದ ಸಾಧನೆ ಸಾಧ್ಯ : ನಾ| ಅಬ್ದುಲ್‌ ನಜೀರ್‌

11:19 PM Dec 07, 2024 | Team Udayavani |

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಗುರುವಿನಿಂದ ಪಡೆಯಲಾಗದ್ದು ಎಲ್ಲೂ ಪಡೆಯಲು ಸಾಧ್ಯವಿಲ್ಲ. ಗುರುವಿನ ಮಾರ್ಗದರ್ಶನವಿದ್ದರೆ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಬಹುದು ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ| ಎಸ್‌. ಅಬ್ದುಲ್‌ ನಜೀರ್‌ ತಿಳಿಸಿದ್ದಾರೆ.

Advertisement

2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಎ. ರಾಜೇಂದ್ರ ಶೆಟ್ಟಿ ಅವರಿಗೆ ಶಿಷ್ಯ ವೃಂದದಿಂದ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ “ಗುರುವಂದನೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗುರು-ಶಿಷ್ಯ ಪರಂಪರೆ ಎಂಬುದು ಎಲ್ಲ ಕ್ಷೇತ್ರಗಳಲ್ಲೂ ಶಿಸ್ತನ್ನು ಕಲಿಸುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಶಿಸ್ತು, ಸ್ವಯಂ ನಿಗ್ರಹ ಹಾಗೂ ಸವಾಲುಗಳನ್ನು ಎದುರಿಸುವುದನ್ನು ತಿಳಿಸಿಕೊಡಲು ಗುರುವಿನಿಂದ ಸಾಧ್ಯ ಎಂದು ತಿಳಿಸಿದರು.

ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ, ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಬೇಕಾಗುವ ಸಂದೇಶಗಳು ರಾಜೇಂದ್ರ ಶೆಟ್ಟಿ ಅವರ ಪಾಠದಲ್ಲಿತ್ತು. ನಾನು ಈ ಮಟ್ಟಕ್ಕೆ ಬೆಳೆಯಲು ಇವರ ಪಾಠ, ಪ್ರವಚನಗಳೂ ಕಾರಣವಾಗಿದೆ ಎಂದರು.

ಕೇರಳ ಉತ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾ| ಆಂಟನಿ ಡೊಮಿನಿಕ್‌ ಮಾತನಾಡಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್‌ ಸೊಸೈಟಿಯ ಉಪಾಧ್ಯಕ್ಷ ಧರ್ಮಸ್ಥಳದ ಸುರೇಂದ್ರ ಕುಮಾರ್‌, ನಿವೃತ್ತ ನ್ಯಾ| ಜೋನ್‌ ಮೈಕೆಲ್‌ ಡಿಕುನ್ಹಾ ಮತ್ತಿತರರು ಉಪಸ್ಥಿತರಿದ್ದರು.

ಸಂತೋಷವಾಗಿದೆ
ಗುರುವಂದನ ಕಾರ್ಯಕ್ರಮದಿಂದ ಸಂತೋಷವಾಗಿದೆ. ನನ್ನ ವಿದ್ಯಾರ್ಥಿಗಳನ್ನು ಇಂದು ಒಬ್ಬ ಉತ್ತಮ ಮೌಲ್ಯಯುತ ವ್ಯಕ್ತಿಯಾಗಿ ನೋಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಗುರುವಂದನೆ ಸ್ವೀಕರಿಸಿದ ಪ್ರೊ| ಎ.ರಾಜೇಂದ್ರ ಶೆಟ್ಟಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next