ಕಿಂಗ್‌ಸ್ಟನ್ (ಜಮೈಕಾ): ವೆಸ್ಟ್ ಇಂಡೀಸ್ ಟಿ20 ಪಂದ್ಯದಲ್ಲಿ ಮತ್ತೂಂದು ಸೋಲನುಭವಿಸಿದೆ. ವಿಜೇತ ತಂಡ ಪ್ರವಾಸಿ ನ್ಯೂಜಿಲ್ಯಾಂಡ್. ಅಂತರ 13 ರನ್.
“ಸಬೀನಾ ಪಾರ್ಕ್’ನಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ 5 ವಿಕೆಟಿಗೆ 185 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ 7 ವಿಕೆಟಿಗೆ 172 ರನ್ ಮಾಡಿ ಶರಣಾಯಿತು.
ದೊಡ್ಡ ಮೊತ್ತದ ಪಂದ್ಯವಾದರೂ ಇಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರ 47 ರನ್ನೇ ಸರ್ವಾಧಿಕ ವೈಯಕ್ತಿಕ ಗಳಿಕೆ. ಆರಂಭಕಾರ ಡೇವನ್ ಕಾನ್ವೆ 43, ಜಿಮ್ಮಿ ನೀಶಮ್ ಅಜೇಯ 33 ರನ್ ಮಾಡಿದರು.
ವೆಸ್ಟ್ ಇಂಡೀಸ್ ದ್ವಿತೀಯ ಓವರ್‌ನಿಂದಲೇ ಕುಸಿತ ಕಾಣಲಾರಂಭಿಸಿತು. 114ಕ್ಕೆ 7 ವಿಕೆಟ್ ಬಿದ್ದಾಗ ಸೋಲು ಖಚಿತವಾಯಿತು. ಆದರೆ 8ನೇ ವಿಕೆಟಿಗೆ ಜತೆಗೂಡಿದ ರೊಮಾರಿಯೊ ಶೆಫರ್ಡ್ (ಅಜೇಯ 31) ಮತ್ತು ಒಡಿಯನ್ ಸ್ಮಿತ್ (ಅಜೇಯ 27) ಡೆತ್ ಓವರ್‌ಗಳಲ್ಲಿ ಸಿಡಿದು ನಿಂತರು. ಆದರೆ ತಂಡವನ್ನು ದಡ ಸೇರಿಸಲಾಗಲಿಲ್ಲ. ಈ ಜೋಡಿ 4.2 ಓವರ್‌ಗಳಿಂದ 58 ರನ್ ಸೂರೆಗೈದಿತು.
ದ್ವಿತೀಯ ಪಂದ್ಯ ಶುಕ್ರವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-5 ವಿಕಿಟಿಗೆ 185 (ವಿಲಿಯಮ್ಸನ್ 47, ಕಾನ್ವೆ 43, ನೀಶಮ್ ಔಟಾಗದೆ 33, ಸ್ಮಿತ್ 32ಕ್ಕೆ 3). ವೆಸ್ಟ್ ಇಂಡೀಸ್-7 ವಿಕೆಟಿಗೆ 172 (ಬ್ರೂಕ್ಸ್ 42, ಶೆಫರ್ಡ್ ಔಟಾಗದೆ 31, ಸ್ಮಿತ್ ಔಟಾಗದೆ 27, ಹೋಲ್ಡರ್ 25, ಸ್ಯಾಂಟ್ನರ್ 19ಕ್ಕೆ 3).