Advertisement
ಪರ್ತ್ನಲ್ಲಿ ಪಲ್ಟಿ ಹೊಡೆದು, ಅಡಿಲೇಡ್ನಲ್ಲಿ ಮೇಲೆ ಬಿದ್ದ ಬಳಿಕ ಅತ್ಯಂತ ಅಪಾಯಕಾರಿಯಾಗಿ ಗೋಚರಿಸಿರುವ ಆಸ್ಟ್ರೇಲಿಯ ಮೆಲ್ಬರ್ನ್ ನಲ್ಲೂ ಇದೇ ಲಯದಲ್ಲಿ ಸಾಗುವ ಎಲ್ಲ ಸಾಧ್ಯತೆ ಇದೆ.
Related Articles
Advertisement
ಸದ್ಯ ಸರಣಿ 1-1 ಸಮಬಲದಲ್ಲಿ ನೆಲೆಸಿದೆ. ಮೆಲ್ಬರ್ನ್ನಲ್ಲಿ ಮೇಲೆದ್ದು ನಿಲ್ಲಬೇಕಾದರೆ ಮೊದಲ ಸರದಿಯಲ್ಲಿ ಕನಿಷ್ಠ 400 ರನ್ನಾದರೂ ಪೇರಿಸಬೇಕಾದುದು ಅತ್ಯಗತ್ಯ. ಇದಕ್ಕೆ ರೋಹಿತ್, ಜೈಸ್ವಾಲ್, ಕೊಹ್ಲಿ, ಗಿಲ್, ಪಂತ್… ಎಲ್ಲರ ಬ್ಯಾಟುಗಳೂ ಮಾತಾಡಬೇಕಿದೆ. ಸದ್ಯ ರಾಹುಲ್ ಅವರಿಂದ ಮಾತ್ರ ಸ್ಥಿರ ಪ್ರದರ್ಶನ ಕಂಡುಬರುತ್ತಿದೆ.
ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದು ಪರದಾಡಿದ ನಾಯಕ ರೋಹಿತ್ ಶರ್ಮ ಮತ್ತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಆಗ ಕೆ.ಎಲ್. ರಾಹುಲ್ 3ನೇ ಕ್ರಮಾಂಕಕ್ಕೆ ಬರಬಹುದು. ಇಲ್ಲಿ ಆಡುತ್ತಿರುವ ಗಿಲ್ ಅವರನ್ನು 6ನೇ ಕ್ರಮಾಂಕಕ್ಕೆ ಇಳಿಸಬಹುದು. ಯಾರೆಲ್ಲಿ ಆಡಿದರೂ ಕ್ರೀಸ್ ಆಕ್ರಮಿಸಿಕೊಂಡು ರನ್ ಪೇರಿಸುವುದು ಮುಖ್ಯ.
ಅವಳಿ ಸ್ಪಿನ್ ದಾಳಿ?ಭಾರತದ ಬೌಲಿಂಗ್ ಸರದಿಯಲ್ಲೂ ಬದಲಾವಣೆ ಗೋಚರಿಸಬಹುದು. ಮೆಲ್ಬರ್ನ್ ಟ್ರ್ಯಾಕ್ ಸ್ಪಿನ್ನರ್ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ಭಾರತ ರವೀಂದ್ರ ಜಡೇಜಾಗೆ ಜೋಡಿಯಾಗಿ ಮತ್ತೋರ್ವ ಸ್ಪಿನ್ನರ್ನನ್ನು ಆಡಿಸೀತೇ ಎಂಬುದೊಂದು ಪ್ರಶ್ನೆ. ಆಗ ವಾಷಿಂಗ್ಟನ್ ಸುಂದರ್ ಮರಳುವ ಸಾಧ್ಯತೆ ಹೆಚ್ಚು. ಆದರೆ ಇವರಿಗಾಗಿ ಕೈಬಿಡುವುದು ಯಾರನ್ನು ಎಂಬುದು ದೊಡ್ಡ ಪ್ರಶ್ನೆ. ನಿತೀಶ್ ಕುಮಾರ್ ರೆಡ್ಡಿ ಅವರನ್ನು ಹೊರಗಿಡುವುದು ಜಾಣ ನಡೆಯಾಗದು. ರೆಡ್ಡಿ ಬ್ಯಾಟಿಂಗ್ನಲ್ಲಿ ನಿರ್ಭೀತ ಪ್ರದರ್ಶನ ನೀಡುತ್ತಿದ್ದಾರೆ. ಉಳಿದದ್ದು ಆಕಾಶ್ ದೀಪ್ ಮಾತ್ರ. ಹಾಗೆಯೇ ಬುಮ್ರಾಗೆ ಸರಿಸಾಟಿಯಾದ ಮತ್ತೋರ್ವ ವೇಗಿ ಇದ್ದಿದ್ದರೆ ಅದರ ಚಿತ್ರವೇ ಬೇರೆ ಇರುತ್ತಿತ್ತು. ಹೆಡ್ ಫಿಟ್, ಕೋನ್ಸ್ಟಾಸ್ ಟೆಸ್ಟ್ ಪದಾರ್ಪಣೆ
ಭಾರತವನ್ನು ಸದಾ ಕಾಡುವ ಟ್ರ್ಯಾವಿಸ್ ಹೆಡ್ “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗಿದ್ದಾರೆ. ಹೆಡ್ ಫಿಟ್ ಆದ ಬೆನ್ನಲ್ಲೇ ಮೆಲ್ಬರ್ನ್ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ನಥನ್ ಮೆಕ್ಸ್ವೀನಿ ಬದಲು ಅವಕಾಶ ಪಡೆದ ಯುವ ಆರಂಭಕಾರ ಸ್ಯಾಮ್ ಕೋನ್ಸ್ಟಾಸ್ ಟೆಸ್ಟ್ ಪದಾರ್ಪಣೆ ಮಾಡಲಿದ್ದಾರೆ. ಗಾಯಾಳು ಜೋಶ್ ಹೇಝಲ್ವುಡ್ ಜಾಗಕ್ಕೆ ಸ್ಥಳೀಯ ಹೀರೋ ಸ್ಕಾಟ್ ಬೋಲ್ಯಾಂಡ್ ಬರಲಿದ್ದಾರೆ. ಆಸ್ಟ್ರೇಲಿಯ ಆಡುವ ಬಳಗ: ಉಸ್ಮಾನ್ ಖ್ವಾಜಾ, ಸ್ಯಾಮ್ ಕೋನ್ಸ್ಟಾಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.
ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಶುಭಮನ್ ಗಿಲ್, ರವೀಂದ್ರ ಜಡೇಜ, ನಿತೀಶ್ ಕುಮಾರ್ ರೆಡ್ಡಿ/ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೆಲ್ಬರ್ನ್ ನಲ್ಲಿ ಹ್ಯಾಟ್ರಿಕ್ ನಿರೀಕ್ಷೆ
ಕ್ರಿಕೆಟ್ ಇತಿಹಾಸದ ಪ್ರಪ್ರಥಮ ಟೆಸ್ಟ್ ತಾಣವಾದ ಮೆಲ್ಬರ್ನ್ ನಲ್ಲಿ 1948ರಿಂದ ಮೊದಲ್ಗೊಂಡು 2020ರ ತನಕ ಭಾರತ 14 ಟೆಸ್ಟ್ ಪಂದ್ಯಗಳನ್ನಾಡಿದೆ. ಇದರಲ್ಲಿ 4 ಪಂದ್ಯಗಳನ್ನು ಜಯಿಸಿದೆ. ಎಂಟರಲ್ಲಿ ಎಡವಿದೆ. 2 ಟೆಸ್ಟ್ ಡ್ರಾಗೊಂಡಿದೆ. ಭಾರತ ಎಂಸಿಜಿಯಲ್ಲಿ ಮೊದಲೆರಡು ಟೆಸ್ಟ್ ಜಯ ದಾಖಲಿಸಿದ್ದು 1978 ಮತ್ತು 1981ರ ಸತತ ಸರಣಿಗಳಲ್ಲಿ. ಅಂತರ 222 ರನ್ ಹಾಗೂ 59 ರನ್. 1985ರಲ್ಲಿ ಹ್ಯಾಟ್ರಿಕ್ ಅವಕಾಶ ತಪ್ಪಿತು. ಅಂದಿನ ಪಂದ್ಯ ಡ್ರಾಗೊಂಡಿತ್ತು. ಉಳಿದ 2 ಗೆಲುವನ್ನು ಕಳೆದೆರಡು ಸರಣಿಗಳಲ್ಲಿ ದಾಖಲಿಸಿತ್ತು. 2018ರಲ್ಲಿ 137 ರನ್ ಅಂತರದಿಂದ ಹಾಗೂ 2020ರಲ್ಲಿ 8 ವಿಕೆಟ್ಗಳಿಂದ ಜಯಿಸಿತ್ತು. ಈ ಬಾರಿಯೂ ಗೆದ್ದರೆ ಮೆಲ್ಬರ್ನ್ ನಲ್ಲಿ ಭಾರತ ಗೆಲುವಿನ ಹ್ಯಾಟ್ರಿಕ್ ಸಾಧಿಸಿದಂತಾಗುತ್ತದೆ. ಇದು ಸಾಧ್ಯವೇ ಎಂಬುದೊಂದು ಕುತೂಹಲ. ಮೆಲ್ಬರ್ನ್ ಅಂಗಳದಲ್ಲಿ
ಭಾರತ
ಟೆಸ್ಟ್: 14
ಜಯ: 04
ಸೋಲು: 08
ಡ್ರಾ: 02