Advertisement
ಅಲ್ಲದೆ ಸರಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿ-ಮಕ್ಕಳ ಸರಣಿ ಸಾವು ಪ್ರಕರಣಗಳನ್ನೂ ಗಂಭೀರ ವಾಗಿ ತೆಗೆದುಕೊಂಡಿದ್ದು, ಒಟ್ಟಾರೆ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯಗಳ ವಿರುದ್ಧ ಆಂದೋಲನ ರೂಪಿಸಲು ಮುಂದಾಗಿದೆ.
ಶನಿವಾರವಷ್ಟೇ ಹೊಸದಿಲ್ಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಹಿತ ಹಲವ ರನ್ನು ಭೇಟಿ ಮಾಡಿದ್ದರು. ಸಂಘಟನ ಪರ್ವಕ್ಕೆ ಸಂಬಂಧಿಸಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ರಾಜ್ಯದ ಪ್ರಚ ಲಿತ ವಿದ್ಯಮಾನಗಳ ಕುರಿತು ಸಮಾ ಲೋಚನೆ ನಡೆದಿದೆ.
Related Articles
ಅಧಿಕಾರಿಗಳು, ಗುತ್ತಿಗೆ ದಾರರು, ಸಿಬಂದಿ ಆತ್ಮಹತ್ಯೆಕ್ಕೆ ಸಂಬಂಧಿಸಿ ಸರಕಾರದ ವಿರುದ್ಧ ಹೋರಾಟ ನಡೆಸಲು ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಆಂದೋ ಲನ ಸಮಿತಿಯನ್ನು ಬಿಜೆಪಿ ರಚಿಸಿದೆ. ಜತೆಗೆ ಪ್ರಕರಣ ಗಳ ತನಿಖೆಗೆ ಸತ್ಯಶೋಧನ ತಂಡ ಗಳನ್ನು ರಚಿಸಿ, ಸರಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ.
Advertisement
ರಾಜ್ಯಪಾಲರಿಗೆ ವರದಿ!ಬಾಣಂತಿ ಮತ್ತು ನವಜಾತ ಶಿಶುಗಳ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಬಹುತೇಕ ವೈದ್ಯ ರನ್ನೇ ಒಳಗೊಂಡ ತಂಡ ರಚಿ ಸಿರುವ ಬಿಜೆಪಿಯು ಘಟನೆ ನಡೆದ ಆಸ್ಪತ್ರೆಗಳು, ಸಂತ್ರಸ್ತರ ಕುಟುಂಬ
ಸ್ಥ ರನ್ನು ಭೇಟಿ ಮಾಡಿ ವಿವರ ಪಡೆ ಯುವುದು, ಅಗತ್ಯ ತನಿಖೆಗೆ ಶಿಫಾ ರಸುಗಳನ್ನು ಒಳಗೊಂಡ ವರದಿ ಯನ್ನು ರಾಜ್ಯಾಧ್ಯಕ್ಷರಿಗೆ ನೀಡಲಿದೆ. ಅದನ್ನು ರಾಜ್ಯಪಾಲರಿಗೆ ಸಲ್ಲಿಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲು ಚಿಂತನೆ ನಡೆದಿದೆ.