ಬೆಂಗಳೂರು: ಕಲಾವಿದರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೀಗ ಸುಸಜ್ಜಿತ ರೆಕಾರ್ಡಿಂಗ್ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದೆ. ಕನ್ನಡ ಭವನದ ಮೊದಲ ಮಹಡಿಯಲ್ಲಿ ಈ ಸ್ಟುಡಿಯೋ ನಿರ್ಮಿಸುವ ಆಲೋಚನೆಯನ್ನು ಇಲಾಖೆ ಹೊಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಹದಿಮೂರು ಅಕಾಡೆಮಿಗಳು ಮತ್ತು ಮೂರು ಪ್ರಾಧಿಕಾರಿಗಳಿವೆ. ಇಲಾಖೆ ವ್ಯಾಪ್ತಿಯ ಜಾನಪದ, ಯಕ್ಷಗಾನ, ಬಯಲಾಟ, ನಾಟಕ, ಸಂಗೀತ -ನೃತ್ಯ ಸೇರಿದಂತೆ ಇನ್ನಿತರ ಕಲಾವಿದರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸುಸಜ್ಜಿತ ವಿಡಿಯೋ ಮತ್ತು ಆಡಿಯೋ ಆಧಾರಿತ ಸ್ಟುಡಿಯೋ ನಿರ್ಮಾಣಕ್ಕೆ ಇಲಾಖೆ ಹೆಜ್ಜೆಯಿರಿಸಿದೆ.
ಕೆಲವು ಸಲರೆಕಾರ್ಡಿಂಗ್ ಸ್ಟುಡಿಯೋಗಾಗಿ ಕಲಾವಿದರು ಹಾಗೂ ಇಲಾಖೆ ಖಾಸಗಿ ಮಾಲೀಕತ್ವದ ಸ್ಟುಡಿಯೋಗಳನ್ನುಅಲವಂಬಿಸ ಬೇಕಾಗುತ್ತದೆ. ಇದು ಕಲಾವಿದರಿಗೆ ಹೊರೆಯಾಗಲಿದೆ. ಈ ಹೊರೆ ತಗ್ಗಿಸಲು ಹಾಗೂ ಅವಶ್ಯವಿರುವ ಕಲಾವಿದರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ವಿನೂತನ ರೆಕಾರ್ಡಿಂಗ್ ಸ್ಟುಡಿಯೋ ನಿರ್ಮಾಣಕ್ಕೆ ಇಲಾಖೆ ತೀರ್ಮಾನಿಸಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ಸ್ಟುಡಿಯೋದಲ್ಲಿ ಸಂಗೀತ, ನೃತ್ಯ, ಭಾವಗೀತೆ, ಜಾನಪದ ಕಲೆಗಳು, ಯಕ್ಷಗಾನ, ನಾಟಕ ಹೀಗೆ ಎಲ್ಲಾ ಬಗೆಯ ಕಲೆಗಳನ್ನೂ ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ. ಇಲಾಖೆ ವತಿಯಿಂದ ಸ್ಟುಡಿಯೋ ನಿರ್ಮಿಸು ವುದರಿಂದ ಕಲಾವಿದರಿಗೂ ಅನುಕೂಲವಾಗುತ್ತದೆ. ಕಲೆಗಳ ಉಳಿವಿಗೂ ನೆರವಾಗುತ್ತದೆ ಎಂದಿದ್ದಾರೆ.
ಸ್ಟುಡಿಯೋ ನಿರ್ಮಾಣಕ್ಕೆ ಎಷ್ಟು ವೆಚ್ಚ?: ಸ್ಟುಡಿಯೋ ನಿರ್ಮಾಣಕ್ಕೆಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಳೆದ ವರ್ಷ ಎಲ್ಲಾ ರೀತಿಯಲ್ಲಿ ಸಜ್ಜಾಗಿತ್ತು. ಆದರೆಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಹಲವು ಕಲಾವಿದರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ವರ್ಷ ಸ್ಟುಡಿಯೋ ನಿರ್ಮಾಣ ಕೆಲಸ ನಡೆಯಲಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ನಗರದಲ್ಲಿ ಈಗಿರುವ ಪ್ರಭಾತ್ ಸ್ಟುಡಿಯೋ ಮಾದರಿಯಲ್ಲಿ ನೂತನ ಸ್ಟುಡಿಯೋ ನಿರ್ಮಾಣ ಮಾಡುವ ಆಲೋ ಚನೆಯಿದ್ದು ಇದಕ್ಕಾಗಿ ಇಲಾಖೆ 20ರಿಂದ 25ಲಕ್ಷ ರೂ. ವೆಚ್ಚ ಮಾಡಲಿದೆ ಎಂದು ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಸಜ್ಜಿತ ಸ್ಟುಡಿಯೋ ನಿರ್ಮಾಣ ಖುಷಿಯ ವಿಚಾರ. ಆದರೆ ಸಲಹೆ ಪಡೆಯುವ ಸಂಬಂಧ ಈವರೆಗೆ ನಮ್ಮನ್ನುಯಾರೂ ಸಂಪರ್ಕಿಸಿಲ್ಲ. ಒಂದು ವೇಳೆ ಸಲಹೆಕೇಳಿದರೆ ನಾವು ಎಲ್ಲಾ ರೀತಿಯ ಸಲಹೆ ನೀಡಲು ಸಿದ್ಧ
–ಅಶ್ವಿನ್ ಪ್ರಭಾತ್, ಪ್ರಭಾತ್ ಸ್ಟುಡಿಯೋ ಮ್ಯಾನೇಜರ್
ಕಲಾವಿದರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲಾಖೆ ವತಿಯಿಂದ ಸುಸಜ್ಜಿತ ರೆಕಾರ್ಡಿಂಗ್ ಸ್ಟುಡಿಯೋ ನಿರ್ಮಿಸುವ ಆಲೋಚನೆಯಿದೆ. ಇದರಿಂದ ಹಲವು ಕಲಾವಿದರಿಗೆ ನೆರವಾಗಲಿದೆ.
–ಎಸ್.ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ
–ದೇವೇಶ ಸೂರಗುಪ್ಪ