ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್‌ಗೆ ಬಳಸುವ ಸರ್ವೆ ಪೋಲ್(ಮರದ ಕಂಬ) ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ವಿ.ವಿ.ಪುರ ಠಾಣೆ ವ್ಯಾಪ್ತಿಯ ನಡೆದಿದೆ.
ಕೆ.ಜಿ.ನಗರ ನಿವಾಸಿ ತೇಜಸ್ವಿನಿ (15) ಮೃತ ವಿದ್ಯಾರ್ಥಿನಿ. ದುರ್ಘಟನೆಗೆ ಕಾರಣವಾದ ನಿರ್ಮಾಣ ಹಂತದ ಕಟ್ಟಡ ಮಾಲಿಕ ಹಾಗೂ ಗುತ್ತಿಗೆದಾರನ ವಿರುದ್ಧ ವಿ.ವಿ.ಪುರ ಠಾಣೆಯಲ್ಲಿ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ.
ಕೆ.ಜಿ.ನಗರ ನಿವಾಸಿ ಖಾಸಗಿ ಸಂಸ್ಥೆ ಯಲ್ಲಿ ಕಾರು ಚಾಲಕ ಸುಧಾಕರ್ ಹಾಗೂ ಧನಲಕ್ಷಿ$¾à ದಂಪತಿಯ ಹಿರಿಯ ಪುತ್ರಿ ತೇಜಸ್ವಿನಿ, ವಿವಿಪುರಂನ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಳು. ಎಂದಿನಂತೆ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಾಲೆ ಮುಗಿಸಿಕೊಂಡು ಎನ್‌ಎಚ್‌ಎಸ್ ರಸ್ತೆಯ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣ ಸಮೀಪ ನಡೆದುಕೊಂಡು ಮನೆಗೆ ಹೋಗುತ್ತಿದ್ದಳು. ಅದೇ ಮಾರ್ಗದಲ್ಲಿ ನಿರ್ಮಾಣವಾ ಗುತ್ತಿರುವ ಆರು ಅಂತಸ್ತಿನ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ನಡೆಯುತ್ತಿದ್ದು, ಕಾರ್ಮಿಕರು ಸೆಂಟ್ರಿಂಗ್ ಸರ್ವೆ ಪೋಲ್ ಅಳವಡಿಸುತ್ತಿದ್ದರು. ಈ ವೇಳೆ ಆಯಾ ತಪ್ಪಿ ಎರಡೂ¾ರು ಸರ್ವೆ ಪೋಲ್‌ಗಳು ವಿದ್ಯಾರ್ಥಿನಿ ತೇಜಸ್ವಿನಿ ತಲೆಗೆ ಬಿದ್ದಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿ ದ್ದಾಳೆ. ಕೂಡಲೇ ಸ್ಥಳೀಯರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪರೀಕ್ಷಿಸಿದ ವೈದ್ಯರು ಆಕೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಇನ್ನು ಆಕೆಯ ಶಾಲಾ ಬ್ಯಾಗ್‌ನಲ್ಲಿದ್ದ ಗುರುತಿನ ಚೀಟಿಯ ಸಹಾಯದಿಂದ ಆಕೆಯ ಪಾಲಕರಿಗೆ ಮಾಹಿತಿ ನೀಡಲಾ ಗಿದೆ. ಪಾಲ ಕರು ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಸುರಕ್ಷತಾ ಕ್ರಮ ಇಲ್ಲ: ವಿದ್ಯಾರ್ಥಿನಿ ಮೇಲೆ ಸರ್ವೆ ಪೋಲ್ ಬೀಳುತ್ತಿದ್ದಂತೆ ಕಟ್ಟಡದಲ್ಲಿದ್ದ ಎಲ್ಲಾ ಕಾರ್ಮಿಕರು ಸ್ಥಳದಿಂದ ಪಾರಾರಿಯಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿಮಾನಿ: ಶಿಕ್ಷಣದ ಜತೆ ನೃತ್ಯದಲ್ಲೂ ಆಸಕ್ತಿ ಹೊಂದಿರುವ ತೇಜಸ್ವಿನಿ, ಪುನೀತ್ ರಾಜ್‌ಕುಮಾರ್ ಅಭಿಮಾನಿಯಾಗಿದ್ದಳು. ಅಪ್ಪು ಡ್ಯಾನ್ಸ್ ಅಕಾಡೆಮಿಯಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಳು.