Advertisement

Team India; 2025 ಭಾರತ ಆಡುವುದು ಹತ್ತೇ ಟೆಸ್ಟ್‌

10:09 PM Dec 31, 2024 | Team Udayavani |

ಹೊಸದಿಲ್ಲಿ: ಭಾರತದ ಪಾಲಿಗೆ ಮಿಶ್ರ ಫ‌ಲ ನೀಡಿದ 2024ರ ಟೆಸ್ಟ್‌ ಋತು ಮುಗಿದಿದೆ. ಈ ವರ್ಷ ಒಟ್ಟು 15 ಟೆಸ್ಟ್‌ ಆಡಿದ ಭಾರತ, ಜಯಿಸಿದ್ದು ಎಂಟರಲ್ಲಿ ಮಾತ್ರ. ಉಳಿದಂತೆ 6 ಟೆಸ್ಟ್‌ಗಳಲ್ಲಿ ಸೋತಿದೆ. ಒಂದನ್ನಷ್ಟೇ ಡ್ರಾ ಮಾಡಿಕೊಂಡಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ತವರಲ್ಲಿ ಅನುಭವಿಸಿದ 3-0 ವೈಟ್‌ವಾಶ್‌ ಟೀಮ್‌ ಇಂಡಿಯಾ ಪಾಲಿನ ಅತ್ಯಂತ ಹೀನಾಯ ಪ್ರದರ್ಶನವಾಗಿ ದಾಖಲಾದದ್ದು 2024ರ ಕಹಿ ಸಂಗತಿ.

Advertisement

2025ರಲ್ಲಿ ಭಾರತ 10 ಟೆಸ್ಟ್‌ಗಳನ್ನಷ್ಟೇ ಆಡಲಿದೆ. 2024ಕ್ಕೆ ಹೋಲಿಸಿದರೆ 5 ಟೆಸ್ಟ್‌ ಕಡಿಮೆ. ಇದರಲ್ಲೊಂದು ಟೆಸ್ಟ್‌ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಸರಣಿಯ ಸಿಡ್ನಿಯ ನ್ಯೂ ಇಯರ್‌ ಪಂದ್ಯವಾಗಿದೆ. ಅನಂತರ ಭಾರತ ಟೆಸ್ಟ್‌ ಆಡುವುದು 6 ತಿಂಗಳ ಬಳಿಕ, ಜೂನ್‌ನಲ್ಲಿ. ಇದು ಇಂಗ್ಲೆಂಡ್‌ನ‌ಲ್ಲಿ ನಡೆಯುವ 5 ಪಂದ್ಯಗಳ ಸರಣಿ. ಜೂನ್‌ 11ರಿಂದ ಆಗಸ್ಟ್‌ 4ರ ತನಕ ಈ ಸರಣಿ ನಡೆಯಲಿದೆ. ಟೆಸ್ಟ್‌ ಪಂದ್ಯಗಳ ತಾಣಗಳೆಂದರೆ ಹೇಡಿಂಗ್ಲೆ, ಎಜ್‌ಬಾಸ್ಟನ್‌, ಲಾರ್ಡ್ಸ್‌, ಮ್ಯಾಂಚೆಸ್ಟರ್‌ ಮತ್ತು ಓವಲ್‌.

ಅಕ್ಟೋಬರ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಹಾಗೂ ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಲಾ 2 ಟೆಸ್ಟ್‌ಗಳನ್ನಾಡಲಿದೆ. ಈ ಸರಣಿಯ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಟಿ20, ಏಕದಿನಕ್ಕೆ ಬರವಿಲ್ಲ

2025ರಲ್ಲಿ ಭಾರತ ಆಡಲಿರುವ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಬರವಿಲ್ಲ. ಜನವರಿಯಲ್ಲಿ ಇಂಗ್ಲೆಂಡ್‌ ತಂಡ ಭಾರತಕ್ಕೆ ಆಗಮಿಸಿ 5 ಟಿ20 ಹಾಗೂ 3 ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಜ. 22ರಿಂದ ಫೆ. 12ರ ತನಕ ಈ ಸರಣಿ ಸಾಗಲಿದೆ. ಟಿ20 ಪಂದ್ಯಗಳನ್ನು ಚೆನ್ನೈ, ಕೋಲ್ಕತಾ, ರಾಜ್‌ಕೋಟ್‌, ಪುಣೆ ಮತ್ತು ಮುಂಬಯಿಯಲ್ಲಿ; ಏಕದಿನ ಪಂದ್ಯಗಳನ್ನು ನಾಗ್ಪುರ, ಕಟಕ್‌ ಮತ್ತು ಅಹ್ಮದಾಬಾದ್‌ಗಳಲ್ಲಿ ಆಡಲಾಗುವುದು.

Advertisement

ಚಾಂಪಿಯನ್ಸ್‌ ಟ್ರೋಫಿ

ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿ ಪಾಕಿಸ್ಥಾ ನದ ಆತಿಥ್ಯದಲ್ಲಿ, ಹೈಬ್ರಿಡ್‌ ಮಾದರಿ ಯಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಭಾರತವಿಲ್ಲಿ ಬಾಂಗ್ಲಾದೇಶ, ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ಲೀಗ್‌ ಪಂದ್ಯಗಳನ್ನು ಆಡಲಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌

ಈ ಬಾರಿ ಭಾರತ ವಿಶ್ವ ಟೆಸ್ಟ್‌ ಚಾಂಪಿ ಯನ್‌ಶಿಪ್‌ ಫೈನಲ್‌ನಲ್ಲಿ ಆಡುವುದು ಖಾತ್ರಿ ಯಾಗಿಲ್ಲ. ಫೈನಲ್‌ ಹಣಾಹಣಿ ಜೂ. 11ರಿಂದ 15ರ ತನಕ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ನಡೆಯಲಿದೆ. ಒಂದು ವೇಳೆ ಭಾರತ ಫೈನಲ್‌ ಪ್ರವೇಶಿಸಿದ್ದೇ ಆದಲ್ಲಿ 2025ರಲ್ಲಿ ಆಡಲಿರುವ ಟೆಸ್ಟ್‌ ಪಂದ್ಯಗಳ ಸಂಖ್ಯೆ 11ಕ್ಕೆ ಏರಲಿದೆ.

ಬಾಂಗ್ಲಾ ಪ್ರವಾಸ

ಆಗಸ್ಟ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ತೆರಳುವ ಭಾರತ ತಂಡ, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ. ವರ್ಷಾಂತ್ಯದಲ್ಲಿ ಟಿ20 ಏಷ್ಯಾ ಕಪ್‌ ಪಂದ್ಯಾವಳಿ; ಆಸ್ಟ್ರೇಲಿಯದಲ್ಲಿ 3 ಏಕದಿನ, 5 ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್‌ ಜತೆಗೆ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನೂ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next