Advertisement

Bengaluru: ಪೊಲೀಸ್‌ ಮೇಲೆ ಹಲ್ಲೆ ನಡೆಸಿದ್ದ ವಿದೇಶಿ ಪ್ರಜೆ ಸೆರೆ

03:59 PM Jan 04, 2025 | Team Udayavani |

ಬೆಂಗಳೂರು: ಹೊಸ ವರ್ಷದಂದೇ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರಿಗೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ನೈಜಿರಿಯಾ ಪ್ರಜೆಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ನೈಜಿರಿಯಾ ಮೂಲದ ಟಿನ್‌ ಫ್ಯಾಕ್ಟರಿಯ ಬಿ.ನಾರಾಯಣಪುರದ ನಿವಾಸಿ ಕೆಲ್ವಿನ್‌ ಬಂಧಿತ. ಪೊಲೀಸ್‌ ಕಾನ್‌ಸ್ಟೆàಬಲ್‌ ನಾಗರಾಜ್‌ ಭೀಮಪ್ಪ ಹಲ್ಲೆಗೊಳಗಾದವರು.

ಆರೋಪಿಯು ಬಟ್ಟೆ ವ್ಯಾಪಾರಿಯಾಗಿದ್ದು, ಆರೋಪಿ ಪತ್ನಿ ಈ ಹಿಂದೆ ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗಿ ಮಹಿಳಾ ಪೊಲೀಸ್‌ ಸಿಬ್ಬಂದಿ ಬೆರಳು ಕಚ್ಚಿದ್ದರು. ಈ ಬಗ್ಗೆ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಏನಿದು ಪ್ರಕರಣ?: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರ ರಾತ್ರಿ ಎಚ್‌ ಬಿಆರ್‌ ಬಡಾವಣೆ ಬಳಿ ನಾಗರಾಜ್‌ ಗಸ್ತಿನಲ್ಲಿದ್ದರು. ತಡರಾತ್ರಿ 1.50ರ ಸುಮಾರಿಗೆ ಪತ್ನಿಯೊಂದಿಗೆ ಕೆಲ್ವಿನ್‌ ಬರುತ್ತಿದ್ದಾಗ ಬೈಕ್‌ ತಡೆದು ಪೊಲೀಸರು ಪ್ರಶ್ನಿಸಿದ್ದರು. ಆರೋಪಿಯು ಕುಡಿದ ನಶೆಯಲ್ಲಿ ಹ್ಯಾಪಿ ನ್ಯೂ ಇಯರ್‌ ಎಂದು ಜೋರಾಗಿ ಕಿರುಚಿ ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಕಾನ್‌ಸ್ಟೇಬಲ್‌ ನಾಗರಾಜ್‌ ಈ ಬಗ್ಗೆ ಪ್ರಶ್ನಿಸಿದಾಗ, ಆರೋಪಿಯು ಅವರಿಗೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದ. ತಪ್ಪಿಸಿಕೊಳ್ಳುವ ಬರದಲ್ಲಿ ನಾಗರಾಜ್‌ ಕಣ್ಣಿನ ಹುಬ್ಬಿಗೆ ರಕ್ತಗಾಯ ಮಾಡಿದ್ದ. ನಾಗರಾಜ್‌ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next