Advertisement
ಮುಗಿಯದೇ ಇರುವ ಅಪರಿಮಿತ ಸಂಪನ್ಮೂಲಗಳ ಪಟ್ಟಿಯಲ್ಲಿ ಸೇರಿದ್ದ ಜಲಸಂಪನ್ಮೂಲಗಳೆಲ್ಲಾ ಇಂದು ಸುಸ್ಥಿರತೆಗೆ ಒಳಪಡುವ ಪದಾರ್ಥಗಳಾಗಿ ಭಾವಬಂಧನಕ್ಕೆ ಒಳಗಾಗಿವೆ. ದಿನಗಳ ಎಣೆಯಿಲ್ಲದೆಯೇ ನೀರನ್ನು ಸಂಭ್ರಮಿಸಿದ, ಶೋಕಿಸಿದ, ಚಕಿತಗೊಳಿಸಿದ ನಿರೀಕ್ಷಿತ-ಅನಿರೀಕ್ಷಿತ ವಿದ್ಯಮಾನಗಳೆಲ್ಲವನ್ನೂ ಮಾರ್ಚ್ 22ಕ್ಕೆ ಮೊಟಕುಗೊಳಿಸಿ ಜಲದಿನವನ್ನು ಆಚರಿಸುವ ಅವಸರದ ಅಧ್ವಾನ ನಮ್ಮದು!!
Related Articles
Advertisement
ಭೂಮಿಯಲ್ಲಿ ಲಭ್ಯವಿರುವ ನೀರಿನ ಆಕರಗಳು ಹಲವಾರು, ಆದರೆ ಮೂಲ ಮಳೆಯೇ. ಭಾರತವನ್ನೂ ಒಳಗೊಂಡಂತೆ ಉಷ್ಣವಲಯದ ದೇಶಗಳಲ್ಲಿ ಮಳೆಯೇ ಅನೇಕ ಬೇಡಿಕೆಗಳಿಗೆ ಜೀವಾಳ. ದೇಶದಲ್ಲಿ ಬೀಳುವ ಮಳೆಯ 80% ನೈಋತ್ಯ ಮಾನ್ಸೂನಿನಿಂದಾಗುವುದು. ದತ್ತಗಳಾಧಾರದಲ್ಲಿ ನಡೆಸಿದ ಅನೇಕ ಅಧ್ಯಯನಗಳು ಕಳೆದ ಶತಮಾನದ ಮಳೆಯ ಪ್ರವೃತ್ತಿಯ ಬದಲಾವಣೆಗಳನ್ನು ತಿಳಿಸಿವೆ. ದೇಶದ ಭೌಗೋಳಿಕ ಅಳತೆಯಲ್ಲಿ ನಡೆಸಿದ ಅಧ್ಯಯನವೊಂದು 135 ವರ್ಷಗಳ ಮಳೆಯ ಏರಿಳಿತಗಳನ್ನು ಹೇಳುತ್ತದೆ.
ಇದರಂತೆ,ಮಾನ್ಸೂನ್ ತಿಂಗಳ ಆಗಸ್ಟ್ ಮಳೆಯು ಏರಿಕೆಯನ್ನು ಕಂಡಿದ್ದರೆ, ಜೂನ್, ಜುಲಾಯಿಗಳು ಮಳೆಯ ಇಳಿಕೆಯನ್ನು ಕಂಡಿವೆ. ಸುದೀರ್ಘಕಾಲಾವಧಿಯಲ್ಲಿ ಮುಂಗಾರಿನ ಮಳೆಯ ಪ್ರಮಾಣ ತುಸು ಕುಸಿದು, ತದನಂತರದ ತಿಂಗಳುಗಳಲ್ಲಿ ಏರಿಕೆಯನ್ನು ಕಂಡಿವೆ. ಬಸಿ ಕ್ಷೇತ್ರಗಳ ಆಧಾರದಲ್ಲಿ ಮಾಡಿದ ಸಂಶೋಧನೆಗಳು ಕರಾವಳಿಯ ಪಶ್ಚಿಮವಾಹಿನೀ ನದಿಗಳ ಕ್ಷೇತ್ರಗಳಲ್ಲಿ ಮಳೆಯ ಇಳಿಕೆಯನ್ನು ವ್ಯಕ್ತಪಡಿಸಿವೆ. ಒಟ್ಟಿನಲ್ಲಿ, ಹವಾಮಾನವನ್ನು ನಿರ್ಧರಿಸುವ ಬಹುಮುಖ್ಯ ಅಂಶ ನೀರು. ನೀರಿನ ಮೂಲ ಮಳೆಯೂ ವಾಯುಗುಣ ಬದಲಾವಣೆಯ ತೆಕ್ಕೆಗೆ ಸಿಲುಕಿದೆ.
ನೀರು ಜೀವ ಚೈತನ್ಯದ ದ್ರವ. ನೀರನ್ನು ಉಳಿಸಿ ಎನ್ನುವುದು ನೀರನ್ನು ಜತನದಿಂದ, ವ್ಯವಸ್ಥಿತವಾಗಿ ಬಳಸಿ ಎಂದಂತೆ. ದೇಶದಲ್ಲಿ ಸುಮಾರು 167 ದಶಲಕ್ಷ ಜನರ ಬೇಡಿಕೆಗಳಿಗೆ ಶುದ್ಧ ನೀರೇ ಸಿಗುತ್ತಿಲ್ಲ.
-ವಿಶ್ವನಾಥ ಭಟ್
ಧಾರವಾಡ