Advertisement

UV Fusion: ಬದುಕಿನಲ್ಲಿ ಭರವಸೆಗಳಿರಲಿ

04:23 PM Nov 20, 2024 | Team Udayavani |

ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬದುಕು ಕಟ್ಟಿಕೊಂಡು ಬಾಳುವುದನ್ನು ನಾವೆಲ್ಲ ನೋಡಿಯೇ ಇರುತ್ತೇವೆ. ಜಾತ್ರೆಗಳಲ್ಲಿ ಬಲೂನು ಮಾರಿ ಜೀವನ ನಡೆಸುವವರು, ಐಸ್‌ಕ್ರೀಂ ಮಾಡಿ ಜೀವನ ಸಾಗಿಸುವವರು, ರಸ್ತೆಬದಿಯಲ್ಲಿ ತಳ್ಳುವ ಗಾಡಿಯಿಂದ ಬದುಕು ಕಟ್ಟಿಕೊಂಡವರು ಹೀಗೆ ನೂರೆಂಟು ನಿದರ್ಶನಗಳನ್ನು ಗಮನಿಸಿ ದಿನಗಳನ್ನು ತಳ್ಳಿದ್ದೇವೆ. ಆದರೆ ಎಲ್ಲರಿಗೂ ಇರುವುದು ಒಂದೇ ಭರವಸೆ ಅದೇನೆಂದರೆ ನಮ್ಮ ಜೀವನ ಎಂದಾದರೂಂದು ದಿನ ಬದಲಾಗಬಹುದು ಎಂದು. ಇದೇ ನಿರೀಕ್ಷೆಯಲ್ಲಿ ದಿನ ಕಳೆಯುತ್ತಾರೆ.

Advertisement

ಒಂದೂರಿನಲ್ಲಿ ಒಬ್ಬ ದರ್ಜಿಯಿದ್ದ. ಆತ ಊರಿನ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದ. ಊರಿನವರ ಬಟ್ಟೆ ಹೊಲಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಹೀಗೆ ದಿನ ಸಾಗಿದಂತೆ ಬಟ್ಟೆ ಹೊಲಿಸಿಕೊಂಡವರು ಹಣವನ್ನು ನಾಳೆ ಕೊಡುತ್ತೇನೆ ನಾಡಿದ್ದು ಕೊಡುತ್ತೇನೆಂದು ಉದ್ರಿ ಹೇಳಿ ಹೋಗುವುದು ಹೆಚ್ಚಾಯಿತು. ಇದರಿಂದ ಬೇಸತ್ತ ದರ್ಜಿ ಹೊಲಿಯುವುದನ್ನು ಬಿಟ್ಟು ಬೇಸಾಯ ಮಾಡಬೇಕೆಂದುಕೊಂಡ. ಆದರೆ ಅವನ ಬಳಿ ಭೂಮಿಯಿಲ್ಲ. ಇದೇ ಸಮಯದಲ್ಲಿ ಆ ಊರಿನ ರಾಜನ ಅಂಗಿಯ ಗುಂಡಿ ಕಳಚಿತ್ತು. ಇದನ್ನು ಹೊಲಿದು ಕೊಡುವುದಕ್ಕಾಗಿ ದರ್ಜಿಯನ್ನು ಕರೆತರುವಂತೆ ರಾಜ ಆದೇಶ ಹೊರಡಿಸಿದ. ಆಗ ಅದೇ ದರ್ಜಿಯನ್ನು ಅರಮನೆಗೆ ಕರೆತಂದು ರಾಜನ ಅಂಗಿಯ ಗುಂಡಿಯನ್ನು ಹೊಲಿದು ಕೊಡಲು ಹೇಳಲಾಯಿತು. ರಾಜನ ಅಂಗಿಗೆ ಬಂಗಾರದ ಗುಂಡಿಯನ್ನು ದರ್ಜಿ ಹೊಲಿದುಕೊಟ್ಟದನ್ನು ಕಂಡು ಖುಷಿಯಾದ ರಾಜ ಆತನಿಗೆ ನೀನು ಕೇಳಿದ ಬಹುಮಾನ ನೀಡುವುದಾಗಿ ತಿಳಿಸಿದ. ರಾಜ ನಿನಗೇನು ಬೇಕು ಎಂದು ಆತನ ಬಳಿ ಕೇಳಿದಾಗ “ರಾಜರೆ ತಾವು ಏನೇ ಕೊಟ್ಟರೂ ನನಗೆ ಸಂತೋಷವೇ’ ಎಂದು ಉದಾರತೆ ತೋರಿದ. ರಾಜ ನಮ್ಮ ಘನತೆಗೆ ತಕ್ಕಂತೆ 10 ಎಕರೆ ಹೊಲವನ್ನು ಇತನಿಗೆ ಬಹುಮಾನವಾಗಿ ನೀಡಬೇಕೆಂದು ಆಜ್ಞೆ ಮಾಡಿದ. ದರ್ಜಿಯ ಖುಷಿಗೆ ಪಾರವೇ ಇರಲಿಲ್ಲ. ಅಂದುಕೊಂಡದಕ್ಕಿಂತ ಹೆಚ್ಚು ಆತನಿಗೆ ಸಿಕ್ಕಿತ್ತು.

ನಾವು ಪಡುವ ಕ್ಷಣಿಕ ಆಸೆ ಮನಸು ತಣಿಸಬಹುದು. ಆದರೆ ಬದುಕು ನಾವಂದುಕೊಂಡಂತಿಲ್ಲ. ಅಂದುಕೊಂಡಕ್ಕಿಂತ ಹೆಚ್ಚಿನದನ್ನೇ ಆ ದೇವರು ನೀಡುತ್ತಾನೆ. ದರ್ಜಿಯಂತೆ ನಾವು ನಡೆದುಕೊಂಡರೆ ನಮ್ಮ ಭರವಸೆಗಳು ಈಡೇರುತ್ತವೆ.

ಶಂಕರಾನಂದ

ಹೆಬ್ಟಾಳ

Advertisement
Advertisement

Udayavani is now on Telegram. Click here to join our channel and stay updated with the latest news.

Next