Advertisement
ಅವಳಿ ನಗರದ ವಿವಿಧ ವಾರ್ಡ್‌ಗಳಲ್ಲಿ 24/7 ನೀರು ಪೂರೈಕೆ ಯೋಜನೆ ಇದೆ. ಜಿಲ್ಲೆಯ ಕೆಲವೊಂದು ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಇನ್ನು ಕೆಲವು ಕಡೆ ಪ್ರಸ್ತಾವನೆ ಹಂತದಲ್ಲಿದೆ. ಹಳೇ ಹುಬ್ಬಳ್ಳಿಗೆ ಆಸರೆಯಾಗಿದ್ದ ನೀರಸಾಗರ ಕೆರೆ ಬತ್ತಿದೆ. ಮಲಪ್ರಭಾ ನದಿಯ ಜಲಾಯಶ ನೀರಿನ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ.
Related Articles
Advertisement
ಖಾಸಗಿ ಕೊಳವೆ ಬಾವಿಗಳಿಂದಲೂ ನೀರು: ಜಿಲ್ಲೆಯಲ್ಲಿ 17 ಖಾಸಗಿ ಒಡೆತನದ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಅವುಗಳಿಂದಲೂ ನೀರು ಪೂರೈಸುವ ಕಾರ್ಯ ಸಾಗಿದೆ. ಧಾರವಾಡ ತಾಲೂಕಿನ ತಡಕೋಡ, ಹುಬ್ಬಳ್ಳಿ ತಾಲೂಕಿನ ಛಬ್ಬಿ, ನೂಲ್ವಿ, ಅಂಚಟಗೇರಿ, ಅಗಡಿ, ಸುಳ್ಳ, ಕಲಘಟಗಿ ತಾಲೂಕಿನ ಮುಕ್ಕಲ್, ಕಂಪ್ಲಿ, ಅರಳಿಹೊಂಡ, ಹಟಕಿನಾಳ, ಕುಂದಗೋಳದ ಹಿರೇಗುಂಜಾಳದ ಖಾಸಗಿ ಒಡೆತನದ ಕೊಳವೆ ಬಾವಿಗಳು ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ತಮ್ಮದೇ ಸೇವೆ ನೀಡುತ್ತಿವೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ನೀರಿನ ಬವಣೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಖಾಸಗಿ ಬೋರವೆಲ್ಗಳನ್ನೂ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಇದಲ್ಲದೇ ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳು ಕಾರ್ಯ ನಿರ್ವಹಿಸುತ್ತಿದ್ದು, ನೀರಿನ ಕುರಿತಂತೆ ದೂರು ಬಂದ ತಕ್ಷಣವೇ ಸ್ಪಂದನೆ ನೀಡಲಾಗುತ್ತಿದೆ.
-ರಾಜಶೇಖರ ಮುನವಳ್ಳಿ, ಕಾರ್ಯ ನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ಧಾರವಾಡ
ಕೊಳವೆ ಬಾವಿಗಳೇ ಆಧಾರ:
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 338 ಹಳ್ಳಿಗಳಿದ್ದು, 2 ಸಾವಿರಕ್ಕೂ ಅಧಿಕ ಕೊಳವೆ ಬಾವಿಗಳಿವೆ. 72 ಹಳ್ಳಿಗಳಿಗೆ ಮಲಪ್ರಭಾ ನೀರು ಪೂರೈಕೆ ಇದ್ದರೆ ಉಳಿದ 316 ಗ್ರಾಮಗಳಿಗೆ ಕೊಳವೆ ಬಾವಿಗಳೇ ಆಧಾರ. ಈ ಪೈಕಿ ಕೆಲವೊಂದಿಷ್ಟು ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಇದ್ದರೆ ಕೆಲವೊಂದಿಷ್ಟು ಕೊಳವೆ ಬಾವಿ ಸ್ಥಗಿತಗೊಂಡಿವೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ 5 ಕೋಟಿ ರೂ. ಹಣ ನೀಡಿದೆ. ನೀರಿನ ಕೊರತೆ ನೀಗಿಸಲು 75 ಹೊಸ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.
.ಶಶಿಧರ ಬುದ್ನಿ