Advertisement

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

01:59 PM Jan 05, 2025 | Team Udayavani |

ಬಜಪೆ: ಬಜಪೆ ಪಟ್ಟಣ ಪಂಚಾ ಯತ್‌ ಕುಡಿಯುವ ನೀರು, ದಾರಿ ದೀಪಕ್ಕೆ ಬಳಸಿದ ವಿದ್ಯುತ್‌ಗೆ ತಿಂಗಳಿಗೆ ಸುಮಾರು 4 ಲಕ್ಷ ರೂ., ವರ್ಷಕ್ಕೆ ಸುಮಾರು 50 ಲಕ್ಷ ರೂ.ವನ್ನು ಮೆಸ್ಕಾಂಗೆ ಪಾವತಿ ಮಾಡುತ್ತದೆ. ದಿನ ದಿಂದ ಹೆಚ್ಚುತ್ತಿರುವ ವಿದ್ಯುತ್‌ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇನ್ನು ನಿರ್ಮಿಸುವ ಹೊಸ ಬೋರ್‌ವೆಲ್‌ಗ‌ಳಿಗೆ ಸೋಲಾರ್‌ ಆಧರಿತ ಪಂಪ್‌ ಹಾಕಿಸಲು ಚಿಂತನೆ ನಡೆಸುತ್ತಿದೆ.

Advertisement

ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಯಲ್ಲಿ ಒಟ್ಟು 56 ಕೊಳವೆ ಬಾವಿಗಳು ಹಾಗೂ ಅದಕ್ಕೆ ಪಂಪ್‌ ಸೆಟ್‌ಗಳು ಇವೆ. 19 ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ಮರವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನೀರು ಸರಬರಾಜು ನಡೆಯುತ್ತಿದೆ. 32 ಸಣ್ಣ ಟ್ಯಾಂಕ್‌, 13 ಜಿಎಲ್‌ಎಸ್‌ಆರ್‌ ಟ್ಯಾಂಕ್‌ಗಳಿಗೆ ನೀರು ಕೊಳವೆ ಬಾವಿಗಳಿಂದ ಸರಬರಾಜು ಆಗುತ್ತಿದೆ. ಹಿಂದಿನ ಲೆಕ್ಕಾಚಾರ ಪ್ರಕಾರ, ಪಂಚಾಯತ್‌ ವ್ಯಾಪ್ತಿಯ 6,493 ಮನೆಗಳಲ್ಲಿ 2,939 ಮನೆಗಳಿಗೆ ನೀರಿನ ಸಂಪರ್ಕವನ್ನು ನೀಡಲಾಗಿದೆ.

ಈಗ ಇದರ ಸಂಖ್ಯೆಯಲ್ಲಿ ಹೆಚ್ಚಳಲಾಗಿದೆ.
ಮನೆ ಮನೆಗೆ ನೀರು ಸರಬರಾಜು ಮಾಡಲು ದೊಡ್ಡ ಮೊತ್ತದ ವಿದ್ಯುತ್‌ ಖರ್ಚಾಗುತ್ತಿದೆ. ಈ ಹಣವನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ಇನ್ನು ಮುಂದೆ ಕೊರೆಯಲಾಗುವ ಹೊಸ ಬೋರ್‌ವೆಲ್‌ಗ‌ಳಿಗೆ ಸೌರ ಶಕ್ತಿ ಆಧರಿತ ಪಂಪ್‌ಗ್ಳನ್ನು ಹಾಕಲು ಪ್ಲ್ರಾನ್‌ ಮಾಡಿದೆ.

ಎಲ್ಲಿದೆ ಹೊಸ ಬೋರ್‌ವೆಲ್‌?
ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ಈಗ ಹೊಸ ಕೊಳವೆ ಬಾವಿ ಕೊರೆಯಲಾಗಿದೆ. ಇದು ನೀರು ಸರಬರಾಜು ವ್ಯವಸ್ಥೆಗೆ ನೀರು ಪೂರೈಕೆ ಮಾಡಲಿದೆ. ಅದಕ್ಕೆ ಸೋಲಾರ್‌ ಅಳವಡಿಕೆಯ ಬಗ್ಗೆ ಎಂಜಿನಿಯರ್‌ ಅವರಲ್ಲಿ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಖರ್ಚಿನ ವಿವರ ಬಗ್ಗೆ ಬಜಪೆ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿಯವರು ಸಂಗ್ರಹಿಸಿದ್ದಾರೆ. 5ಎಚ್‌ಪಿ ಪಂಪ್‌ಗೆ ಒಟ್ಟು ಅಂದಾಜು 3ರಿಂದ 4 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್‌ ಅಳವಡಿಸಬಹುದಾಗಿದೆ ಎಂಬ ಅಭಿಪ್ರಾಯ ಬಂದಿದೆ.

ಸೋಲಾರ್‌ ಅಳವಡಿಕೆಯಿಂದ ನಿರ್ವಹಣೆ ಖರ್ಚು ಕಡಿಮೆ ಆಗಲಿದೆ. ವಿದ್ಯುತ್‌ ಕಡಿತದ ಸಮಸ್ಯೆ ಇಲ್ಲದೆಯೇ ಜನರಿಗೆ ನಿರಂತರ ಸೇವೆ ನೀಡಲು ಸಾಧ್ಯವಾಗಲಿದೆ ಮತ್ತು ಪಟ್ಟಣ ಪಂಚಾಯತ್‌ಗೆ ಉಳಿತಾಯವಾಗಲಿದೆ.

Advertisement

ಡಿವೈಡರ್‌ನಲ್ಲಿ ಗಿಡ ನೆಡಲು ಚಿಂತನೆ
ಬಜಪೆಯಲ್ಲಿ ನೂತನವಾಗಿ ನಿರ್ಮಾ ಣವಾಗಿರುವ ಚತುಷ್ಪಥ ರಸ್ತೆಯ ಡಿವೈಡರ್‌ನಲ್ಲಿ ಗಿಡಗಳನ್ನು ನೆಟ್ಟು ನಗರ ಸೌಂದಯೀìಕರಣದ ಪ್ಲ್ರಾನ್‌ ಕೂಡಾ ನಡೆಯುತ್ತಿದೆ. ಹಸಿರು ಗಿಡಗಳನ್ನು ನೆಡಲು ಲೋಕೋಪಯೋಗಿ ಇಲಾ ಖೆಯ ಅನುಮೋದನೆ ಬೇಕಾಗಿದೆ. ವಾಯು ಮಾಲಿನ್ಯ ಹಾಗೂ ಬಿಸಿಲ ಧಗೆಗೆ ಈ ಗಿಡಗಳು ಹೆಚ್ಚು ಸಹಕಾರಿಯಾಗುವ ನಿಟ್ಟಿನಲ್ಲಿ ಈ ಬಗ್ಗೆ ಜನರಿಗೆ ಅನುಕೂಲವಾಗಬಹುದು ಎನ್ನುವುದು ಪಟ್ಟಣ ಪಂಚಾಯತ್‌ ಚಿಂತನೆಯಾಗಿದೆ. ಲೋಕೋಪಯೋಗಿ ಇಲಾಖೆ ಅನುಮತಿ ಕೊಟ್ಟರೆ ಇದನ್ನು ಅನುಷ್ಠಾನ ಮಾಡಲು ಮುಂದೆ ಬರಲಿದೆ.

ಉಳಿತಾಯ, ಉತ್ತಮ ಸೇವೆ ಸಾಧ್ಯ
ಹೊಸ ಕೊಳವೆ ಬಾವಿಗಳಿಗೆ ಸೋಲಾರ್‌ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದು ಪ್ರಥಮ ಹಂತವಾಗಿದೆ. ಇದಕ್ಕೆ ಆಡಳಿತಾಧಿಕಾರಿಯವರ ಅನುಮತಿಯೂ ಬೇಕು. ಸೋಲಾರ್‌ ಅಳವಡಿಕೆಯಿಂದ ಜನರಿಗೆ ನಿರಂತರ ಸೌಲಭ್ಯದ ಜತೆಗೆ, ಪಟ್ಟಣ ಪಂಚಾಯತ್‌ಗೂ ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ ಮತ್ತು ತಿಂಗಳ ವಿದ್ಯುತ್‌ ಬಿಲ್ಲ್‌ನ ಹೊರೆ ಇಲ್ಲದೆ ಉಳಿತಾಯ ವಾಗಲಿದೆ.
-ಫಕೀರ ಮೂಲ್ಯ ವೈ., ಬಜಪೆ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next