Advertisement

ಸ್ಯಾಟ್‌ಲೈಟ್ ಬಸ್‌ನಿಲ್ದಾಣದಿಂದ ಸಂಚಾರ ಸುಗಮ

01:33 PM Feb 17, 2020 | Naveen |

ವಿಜಯಪುರ: ವಿಜಯಪುರದಲ್ಲಿ ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣದಿಂದ ಸಂಚಾರ ದಟ್ಟಣೆ ಅತ್ಯಂತ ಕಡಿಮೆಯಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ವಿಜಯಪುರದ ಅಥಣಿ ರಸ್ತೆಯಲ್ಲಿ ನೂತವಾಗಿ ನಿರ್ಮಿಸಲಾಗಿರುವ ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣದಿಂದ ಬಸ್‌ ಸಂಚಾರ ಸೇವೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ಹಾಗೂ ಸಿದ್ಧಸಿರಿ ವತಿಯಿಂದ ಅಳವಡಿಸಲಾಗಿರುವ ಶುದ್ಧ ಕುಡಿಯವ ನೀರಿನ ಘಟಕ, ಎಸ್‌-ಹೈಪರ್‌
ಮಾರ್ಟ್‌ ವತಿಯಿಂದ ಪ್ರಯಾಣಿಕರಿಗಾಗಿ ವಿತರಣೆ ಮಾಡಲಾಗಿರುವ ಸ್ಟೀಲ್‌ ಕುರ್ಚಿಗಳನ್ನು ವಿತರಿಸಿ ಅವರು ಮಾತನಾಡಿದರು.

ವಿಜಯಪುರದಲ್ಲಿ ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ನನ್ನ ಕನಸಾಗಿತ್ತು. ಈ ಕನಸಿಗೆ ಅನೇಕ ಜನಪ್ರತಿನಿಧಿಗಳು ಸಾಥ್‌ ನೀಡಿದ್ದಾರೆ. ಈಗ ವಿಜಯಪುರದಲ್ಲಿ ಸ್ಯಾಟ್‌ ಲೈಟ್‌  ಬಸ್‌ ನಿಲ್ದಾಣ ನಿರ್ಮಾಣಗೊಂಡಿದೆ. ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣದಿಂದಾಗಿ ಜತ್‌, ಸಾಂಗ್ಲಿ, ಬೆಳಗಾವಿ, ಅಥಣಿ ಭಾಗದಿಂದ ಬರುವ ನೂರಾರು ವಾಹನಗಳು ನಗರಕ್ಕೆ ಪ್ರವೇಶಿಸದೇ ಇಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಿವೆ, ಹೀಗಾಗಿ ನೂರಾರು ವಾಹನಗಳು ನಗರ ಪ್ರವೇಶ ಕಡಿಮೆಯಾಗಿದ್ದು ಇದರಿಂದಾಗಿ ಸಂಚಾರ ದಟ್ಟಣೆ ಅತ್ಯಂತ ಕಡಿಮೆಯಾಗಿದೆ. ಸಾರ್ವಜನಿಕರು ಸಹ ಈ ಕ್ರಮದಿಂದಾಗಿ ಸಂತೋಷ ಪಟ್ಟಿದ್ದಾರೆ ಎಂದರು.

ಸಾರ್ವಜನಿಕರು ಸಹ ಈ ನೂತನ ಬಸ್‌ ನಿಲ್ದಾಣದ ಸ್ವಚ್ಛತೆಗೆ ಪ್ರಧಾನ ಆದ್ಯತೆ ನೀಡಬೇಕು. ಎಲ್ಲಿ ಬೇಕಾದಲ್ಲಿ ಕಸವನ್ನು ಚೆಲ್ಲಬಾರದು, ಇದು ನಿಮ್ಮ ಆಸ್ತಿ. ಅತ್ಯಂತ ಸ್ವಚ್ಛ ರೀತಿಯಲ್ಲಿ ಈ ಬಸ್‌ ನಿಲ್ದಾಣವನ್ನು ನಿರ್ವಹಣೆ ಮಾಡಬೇಕು ಎಂದು ಕರೆ ನೀಡಿದರು.

ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ ಮಾತನಾಡಿ, ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣದಿಂದಾಗಿ ನಗರ ಸಾರಿಗೆ ಸಂಚಾರದಟ್ಟಣೆ ಹಾಗೂ ಅಪಘಾತಗಳು ಮುಂಬರುವ ದಿನಗಳಲ್ಲಿ ಅತಿ ಕಡಿಮೆಯಾಗುತ್ತವೆ. ಸೊಲ್ಲಾಪುರಕ್ಕೆ ಹೋಗುವ ಎಲ್ಲ ವಾಹನಗಳು ಈ ಬಸ್‌ ನಿಲಾಣದಿಂದ ಈಗ ಆರಂಭಗೊಂಡಿವೆ ಎಂದರು.

Advertisement

ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ವಿಡಿಎ ಸದಸ್ಯರಾದ ಲಕ್ಷ್ಮಣಜಾಧವ, ವಿಕ್ರಮ್‌ ಗಾಯಕವಾಡ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟಿ, ಸುರೇಶ್‌ ಜಾಧವ, ಪ್ರಕಾಶ ಚವ್ಹಾಣ, ಉಮೇಶ ವಂದಾಲ, ದಾದಾಸಾಹೇಬ ಬಾಗಾಯತ್‌, ವಿವೇಕ್‌ ತಾವರಗೇರಿ, ಪಾಂಡು ದೊಡ್ಡಮನಿ, ಬಸವರಾಜ ಗೊಳಸಂಗಿ, ನಾಗರಾಜ ಮುಳವಾಡ, ರಾಜಶೇಖರ ಭಜಂತ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next