ಹೊನ್ನಾವರ: ಹಳೆ ಬಸ್ನಿಲ್ದಾಣ ಸರಿ ಇಲ್ಲ ಎಂದು ನಾಲ್ಕು ವರ್ಷಗಳ ಹಿಂದೆ 6 ಕೋಟಿ ರೂ. ವೆಚ್ಚದಲ್ಲಿ ಹೊಸ ನಿಲ್ದಾಣ ನಿರ್ಮಿಸಲಾಗಿದೆ. ಸುಧಾರಿಸಲಾರದ, ಸುಧಾರಿಸಬಹುದಾದ ಸಮಸ್ಯೆಗಳಿಂದ ತುಂಬಿ ಹೋದ ಬಸ್ನಿಲ್ದಾಣ “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬಂತೆ ಅಲಂಕಾರದಿಂದ ಕಾಣುತ್ತಿದ್ದು ಇದರ ಒಳ ಹೊಕ್ಕಾಗಲೇ ನಿಜ ಬಣ್ಣ ಕಾಣುತ್ತದೆ.
Advertisement
ಎಂದಿನಂತೆ ಮಳೆಗಾಲದಲ್ಲಿ ಬಸ್ ನಿಲ್ದಾಣದ ಎದುರು ಸರೋವರ ನಿರ್ಮಾಣವಾಗುತ್ತದೆ. ರಸ್ತೆಗೆ ಬೆನ್ನು ಮಾಡಿ ಕಟ್ಟಡ ನಿರ್ಮಿಸಿರುವುದರಿಂದ ಪಶ್ಚಿಮದ ಬಿಸಿಲು ಮಧ್ಯಾಹ್ನದ ನಂತರ ಪ್ರಯಾಣಿಕರಿಗೆ ಮಾತ್ರವಲ್ಲ ಅಂಗಡಿಯವರಿಗೆ ಅಪ್ಪಳಿಸುತ್ತದೆ. ಮಳೆಗಾಲದಲ್ಲಿ ನೀರು ಒಳನುಗ್ಗುತ್ತದೆ. ನಿಲ್ದಾಣದಲ್ಲಿ ಕೂರಲು ಆಗುವುದಿಲ್ಲ. ಅಂಗಡಿಗಳ ಸಾಮಾನು ಒದ್ದೆಯಾಗುತ್ತದೆ. ಅದಕ್ಕಾಗಿ ಸ್ವಂತ ಹಣದಲ್ಲಿ ಮರೆ ಮಾಡಿಕೊಂಡಿದ್ದಾರೆ. ನಿಲ್ದಾಣದ ಮಾಡು ತಗ್ಗವಾಗಿ ಇದ್ದರೆ ಈ ತೊಂದರೆ ಶಾಶ್ವತ ಇರುತ್ತಿರಲಿಲ್ಲ. ಹಿಂದಿನ ಬಸ್ ಸ್ಟ್ಯಾಂಡ್ಗೆ ಬಸ್ ಹೊರಗೆ ಹೋಗಲು, ಒಳಗೆ ಬರಲು ಪ್ರತ್ಯೇಕ ಮಾರ್ಗಗಳಿತ್ತು. ಈಗ ಒಂದೇ ಮಾರ್ಗ. ರಸ್ತೆ ಇಕ್ಕಟ್ಟಾಗಿದೆ. ಒಳ ಹೋಗುವ, ಹೊರ ಹೋಗುವ ಬಸ್ ಸಿಕ್ಕಿಬೀಳುತ್ತದೆ.
ಬದಲು ಪಬ್ಜಿ ಆಡುತ್ತಾ ಕೂರುತ್ತಾರೆ. ಹೆಣ್ಣುಮಕ್ಕಳ ಜತೆ ಮೋಜು ಮಾಡುತ್ತಾರೆ. ಪೊಲೀಸರು ಇರುವುದಿಲ್ಲ.
Related Articles
Advertisement
ಈಗ ಊಟ ತಿಂಡಿ ಮತ್ತು ಬೇಕರಿಗಳು ಉತ್ತಮವಾಗಿಲ್ಲ. 10 ಅಡಿ ಅಂಗಡಿಗೆ 10-15 ಸಾವಿರ ರೂ. ಬಾಡಿಗೆ 800 ಚದುರ ಅಡಿಯಕ್ಯಾಂಟಿನ್ಗೆ 75 ಸಾವಿರ ರೂ. ಬಾಡಿಗೆ. ಲಾಭ ಮಾಡಲು ಕಡಿಮೆ ಗುಣಮಟ್ಟದ ಉತ್ಪಾದನೆ ಕೊಡುವುದು ಇವರಿಗೆ ಅನಿವಾರ್ಯ.
ಶೌಚಾಲಯದಲ್ಲಿ ಹಣ ಪಡೆದರೂ ಸರಿಯಾಗಿ ಸೇವೆ ಇಲ್ಲ. ಅಂಗಡಿಗಳ ತ್ಯಾಜ್ಯಗಳು ಗಟಾರ್ ತುಂಬಿಸಿದ್ದು, ಸ್ವತ್ಛ ಮಾಡದ ಕಾರಣ ದುರ್ವಾಸನೆ ಬೀರುತ್ತದೆ. ಹೆಚ್ಚಿನ ಪ್ರಯಾಣಿಕರು ಟಪ್ಪರ್ ಹಾಲ್ ಸರ್ಕಲ್, ಕಾಲೇಜು ಸರ್ಕಲ್ನಲ್ಲಿ ಕಾಯುತ್ತಾ ನಿಂತು ಬಸ್ ಏರುವುದನ್ನು ನಿತ್ಯ ಕಾಣುತ್ತಿದ್ದೇವೆ. ಬಸ್ ನಿಲ್ದಾಣದಲ್ಲಿ ಸಾಕಷ್ಟು ಬಾರಿ ಪಿಕ್ಪಾಕಿಟ್ ನಡೆಯುತ್ತಿದ್ದರೂ, ತಪ್ಪಿಸ್ಥರನ್ನು ಹಿಡಿದು ಶಿಕ್ಷಿಸಲು ಸಿಸಿ ಕ್ಯಾಮೆರಾ ವ್ಯವಸ್ಥೆಯಿಲ್ಲ. ರಾತ್ರಿ ಅನಿವಾರ್ಯವಾಗಿ ಬಸ್ ಸ್ಟ್ಯಾಂಡ್ನಲ್ಲಿ ಮಲಗುವ ಪ್ರಯಾಣಿಕರಿಗೆ ಸರಿಯಾದ ರಕ್ಷಣೆ ಇಲ್ಲ. ತಿಂಗಳಿಗೆ ಇಲ್ಲಿಂದಲೇ 3 ಲಕ್ಷ ರೂ. ಬಾಡಿಗೆ ಪಡೆಯುತ್ತದೆ. ಸ್ವಲ್ಪ ಹಣವನ್ನು ಬಸ್ಸ್ಟ್ಯಾಂಡ್ಗೆ ಬಳಸುವುದಿಲ್ಲ. ಹಲವು ಬಾರಿ ಬಸ್ ಸ್ಟ್ಯಾಂಡ್ನ ಸಮಸ್ಯೆಗಳ ಕುರಿತು ವರದಿ ಮಾಡಲಾಗಿದೆ. ಆದರೆ ಎಲ್ಲವೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಜೀ.ಯು