Advertisement
ಪ್ರಯಾಣಿಕರಿಗೆ ಮಳೆ, ಗಾಳಿಯಿಂದ ರಕ್ಷಣೆ ಸಿಗಲಿ ಎಂದು ತಂಗುದಾಣ ನಿರ್ಮಿ ಸಿದರೆ ಇತ್ತ ವ್ಯಾಪಾರ ವಹಿವಾಟಿಗೆ ಅಡ್ಡಿ ಎಂದು ಜನರ ಹಿತವನ್ನೇ ಬಲಿಗೊಟ್ಟು ಹೆದ್ದಾರಿ ಬದಿ ಇದ್ದ ತಂಗುದಾಣವನ್ನೇ ತೆಗೆಯಲಾಗಿದೆ.
ಕಾರ್ಪೋರೆಟರ್‌ಗಳನ್ನು ಪ್ರಶ್ನಿಸಿದರೆ ತಂಗುದಾಣ ತೆರವು ಬಗ್ಗೆ ಅವರ ಜತೆ ಚರ್ಚೆ ನಡೆಸದೆ ಮಾಡಲಾಗಿದೆ. ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಅಸಮಾ ಧಾನಕ್ಕೆ ಕಾರಣವಾಗಿತ್ತು. ಬಳಿಕ ಹಲವು ಬಾರಿ ಬೇಡಿಕೆ ಇಟ್ಟರೂ ಇದುವರೆಗೂ ಚಿತ್ರಾಪುರ ದಲ್ಲಿ ಬಸ್ ನಿಲ್ದಾಣವೇ ಇಲ್ಲ. ಈ ಹಿಂದೆ ಹೆದ್ದಾರಿ ನಿರ್ಮಾಣವಾದಾಗ ಇಲ್ಲಿ ಬಸ್ ಬೇ ಸಹಿತ ತಂಗುದಾಣ ಮಾಡ ಲಾಗಿತ್ತು. ಇದೀಗ ಬಸ್ ಪ್ರಯಾಣಿಕರನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಹತ್ತಿಸಿ, ಇಳಿಸಿ ಕೊಂಡರೆ, ಇತ್ತ ಬಸ್ ಬೇ ಜಾಗದಲ್ಲಿ ವಾಹನ ಇಡುವ ಸ್ಥಳವಾಗಿ ಬದಲಾಗಿದೆ.
Related Articles
ಹೊಸ ಬಸ್ ನಿಲ್ದಾಣ ನಿರ್ಮಿಸಿ ಅಪಾಯಕಾರಿಯಾಗಿ ಬಸ್‌ಗಳು ರಸ್ತೆ ಬದಿ ನಿಲ್ಲುವುದನ್ನು ತಡೆಯಬೇಕು. ಬಿಸಿಲು, ಮಳೆಯಿಂದ ಪ್ರಯಾಣಿಕರಿಗೆ ರಕ್ಷಣೆ ಒದಗಿಸಲು ಬಸ್ ನಿಲ್ದಾಣ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಮಂಗಳೂರು ಮಹಾನಗ ಪಾಲಿಕೆ ಇದಕ್ಕೆ ಸೂಕ್ತವಾಗಿ ಸ್ಪಂದಿಸುವುದೇ ಕಾದು ನೋಡಬೇಕಿದೆ.
Advertisement