Advertisement

ಕೇರಳದಲ್ಲಿ ವೇದಕ್ಕೂ ಕಾಲೇಜು

07:20 AM Oct 24, 2017 | Harsha Rao |

ತಿರುವನಂತಪುರಂ: ಕೇರಳ ಸರಕಾರದ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಬಿಡಿ) ವೇದಗಳನ್ನು ಕಲಿಸುವ ಹೊಸ ಕಾಲೇಜು ಹಾಗೂ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. 

Advertisement

ಭಾರತದ ಪುರಾತನ ವಿದ್ಯೆಗಳಾದ ವೇದ, ವೇದಾಂತ ಹಾಗೂ ತಂತ್ರಗಳನ್ನು ಬೋಧಿಸುವ ಅಧ್ಯಯನ ಕೇಂದ್ರವನ್ನು “ಶಂಗುಮುಘಮ್‌’ನಲ್ಲಿ ಹಾಗೂ ವೇದ-ವೇದಾಂತ ಕಾಲೇಜನ್ನು “ಸಸ್ಥಾಂಕೊಟ್ಟಾ’ದಲ್ಲಿ ಸ್ಥಾಪಿಸಲು ನಿರ್ಧರಿಸಲಾ ಗಿದೆ. ಈ ಯೋಜನೆಯಿನ್ನೂ ಪ್ರಾಥಮಿಕ ಹಂತದಲ್ಲಿದ್ದು ಕೆಲವೇ ತಿಂಗಳುಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. 

ಈ  ಬಗ್ಗೆ ವಿವರಣೆ ನೀಡಿರುವ ಟಿಬಿಡಿ ಅಧ್ಯಕ್ಷ ಪ್ರಯಾರ್‌ ಗೋಪಾಲ ಕೃಷ್ಣನ್‌, “”ಭಾರತೀಯ ವಿದ್ಯಾ ಸಂಪತ್ತನ್ನು ಜಗತ್ತಿಗೆ ಹಂಚಿದ “ನಳಂದಾ’ ಹಾಗೂ “ತಕ್ಷಶಿಲಾ’ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ವೇದ- ವೇದಾಂತ-ತಂತ್ರ ಅಧ್ಯಯನ ಕೇಂದ್ರ, ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಶತ ಮಾನಗಳ ಹಿಂದೆ ಚಾಲ್ತಿಯಲ್ಲಿದ್ದ ಗುರುಕುಲ ಪದ್ಧತಿಯಂತೆ ಇಲ್ಲಿ ಶಿಕ್ಷಣ ನೀಡಲಾಗುವುದು. ಭಾರತದ ಪರಂಪರೆ ಹಾಗೂ ಅಧ್ಯಾತ್ಮಿಕತೆ ಯನ್ನು ಬೋಧಿಸುವಲ್ಲಿ ಈ ಎರಡೂ ಶೈಕ್ಷಣಿಕ ಕೇಂದ್ರಗಳು ಮಹತ್ವದ ಪಾತ್ರ ವಹಿಸಲಿವೆ” ಎಂದು ತಿಳಿಸಿದರು. 

ವೇದ-ವೇದಾಂತ-ತಂತ್ರ ಅಧ್ಯಯನ ಕೇಂದ್ರ, ಕಾಲೇಜುಗಳು ಕೋಲ್ಕತಾದಲ್ಲಿರುವ ವಿವೇಕಾನಂದ ವಿವಿಯಿಂದ ಮಾನ್ಯತೆ ಪಡೆದ ಕೇಂದ್ರಗಳಾಗಿರಲಿದ್ದು, ಇವು ಆ ವಿವಿಯ ಅಧೀನದ ಕ್ಯಾಂಪಸ್‌ಗಳು ಅಥವಾ ಉಪ- ಅಧ್ಯಯನ ಕೇಂದ್ರಗಳ ಮಾದರಿಯಲ್ಲಿ ರಚನೆ ಗೊಳ್ಳಲಿವೆ ಎಂದು ಗೋಪಾಲ ಕೃಷ್ಣನ್‌ ತಿಳಿಸಿ ದರು. ದೇವಸ್ವಂ ಮಂಡಳಿಯು ಕೇರಳದಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲ ಸೇರಿ 1,248 ದೇವಾಲಯಗಳನ್ನು ನಿರ್ವಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next