Advertisement

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

12:52 AM Jan 03, 2025 | Team Udayavani |

ತಿರುವನಂತಪುರ: ಕೇರಳದ ದೇಗುಲಗಳಲ್ಲಿ ಪುರುಷರ ಪ್ರವೇಶಕ್ಕೆ ಮುನ್ನ ಅಂಗಿ ತೆಗೆಯುವ ಪದ್ಧತಿಗೆ ಅಂತ್ಯ ಹಾಡಲು ದೇವಸ್ವಂ ಮಂಡಳಿಗಳು ಚಿಂತನೆ ನಡೆಸಿವೆ ಎಂದು ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ತಿರುವ ನಂತಪುರದ ಶಿವಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ನಾರಾಯಣ ಗುರು ಅವರ ತಣ್ತೀಗಳನ್ನು ಅನುಸರಿಸುವ ದೇಗುಲಗಳಲ್ಲಿ ಈ ಪದ್ಧತಿಗೆ ಕೊನೆ ಹಾಡಲು ನಿರ್ಧರಿಸಲಾಗಿದೆ ಎಂದರು.

Advertisement

ಜತೆಗೆ ದೇವಸ್ವಂ ಮಂಡಳಿಯ ಸದಸ್ಯ ರೊಬ್ಬರು ಮೇಲ್ಕಂಡ ಪದ್ಧತಿ ಕೊನೆ ಗೊಳಿಸುವ ಬಗ್ಗೆ ನನ್ನೊಂದಿಗೆ ಚರ್ಚಿಸಿ ದರು. ಇದು ಸ್ವಾಗತಾರ್ಹ ಎಂದರು.

ಸರಕಾರಕ್ಕೆ ಅಧಿಕಾರವಿಲ್ಲ: ಎನ್‌ಎಸ್‌ಎಸ್‌
ಶರ್ಟ್‌ ತೆಗೆಯದೆ ದೇಗುಲ ಪ್ರವೇಶಿಸಬೇಕು ಎಂಬ ಮುಖ್ಯಮಂತ್ರಿ ಹೇಳಿಕೆಯನ್ನು ಬಿಜೆಪಿ ನಾಯಕ, ಕೇಂದ್ರ ಸಚಿವ ವಿ.ಮುರಳೀಧರನ್‌ ಟೀಕಿಸಿದ್ದಾರೆ. ಪಿಣರಾಯಿ ವಿಜಯನ್‌ ಸನಾತನ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಕೇರಳದಲ್ಲಿನ ನಾಯರ್‌ ಸರ್ವಿಸ್‌ ಸೊಸೈಟಿ ಸಿಎಂ ಮಾತಿಗೆ ಆಕ್ಷೇಪಿಸಿದೆ. ದೇಗುಲದಲ್ಲಿನ ಆಚರಣೆ ಬಗ್ಗೆ ಸರಕಾರ ಮತ್ತು ಯಾವುದೇ ವ್ಯಕ್ತಿ ನಿರ್ದೇಶನ ನೀಡುವಂತಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next